ಕಾಜಲ್ ಅಗರ್ವಾಲ್ ಮತ್ತು ಮಹೇಶ್ ಬಾಬು ಅವರ ಬಿಸಿನೆಸ್‌ಮ್ಯಾನ್ ಸಿನಿಮಾದ ಚುಂಬನ ದೃಶ್ಯ ವೈರಲ್ ಆಗಿದೆ.
4 ವರ್ಷಗಳ ನಂತರ ಬಿಡುಗಡೆಯಾದ ಮತ್ತೊಂದು ಸಿನಿಮಾ ಬ್ರಹ್ಮೋತ್ಸವದಲ್ಲೂ ಈ ಜೋಡಿಯ ಲಿಪ್‌ಲಾಕ್ ನೋಡಬಹುದು.
ಈ ಚಿತ್ರದಲ್ಲೂ, ಸಹ ಅವರ ನಡುವೆ ಅತ್ಯಂತ ಇಂಟಿಮೇಟ್ ಸೀನ್‌ಗಳನ್ನು ಶೂಟ್ ಮಾಡಲಾಗಿದೆ.
'ಬಿಸಿನೆಸ್‌ಮ್ಯಾನ್' ನಂತರ ಮಹೇಶ್ ಬಾಬು ಮತ್ತು ಕಾಜಲ್ ಅಗರ್‌ವಾಲ್ 2016ರ ಫಿಲ್ಮ್ಂ ಬ್ರಹ್ಮೋತ್ಸವದಲ್ಲಿ ಕಾಣಿಸಿಕೊಂಡರು.
ತೆರೆಯ ಮೇಲಿನ ಇವರ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 30, 2020 ರಂದು ಗೌತಮ್ ಕಿಚ್ಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಕಾಜಲ್.
ಗೌತಮ್ ಕಿಚ್ಲು ವೃತ್ತಿಯಲ್ಲಿ ಉದ್ಯಮಿ ಮತ್ತು ಡೆಸರ್ನ್ ಲಿವಿಂಗ್ ಡಿಸೈನ್ ಸ್ಟೋರ್‌ನ ಸ್ಥಾಪಕ ಮತ್ತು ಒಳಾಂಗಣ ವಿನ್ಯಾಸಕಾರ. ಅವರ ಕಂಪನಿಯು ಮನೆಯ ವಿನ್ಯಾಸದ ಜೊತೆ ಪೀಠೋಪಕರಣಗಳು, ಪೇಟಿಂಗ್ ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತದೆ.
ನಂತರ, ದಕ್ಷಿಣದ ಕಡೆಗೆ ತಿರುಗಿದ ಕಾಜಲ್ ಇಂದು ಸೌತ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಜೊತೆ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಅಜಯ್ ದೇವಗನ್ ಜೊತೆ ನಟಿಸಿದ 'ಸಿಂಘಮ್' ಸಿನಿಮಾದ ನಟನೆ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಈ ನಟಿ.
ಆಗಸ್ಟ್ 9, 1975 ರಂದು ಚೆನ್ನೈನಲ್ಲಿ ಜನಿಸಿದ ಮಹೇಶ್ ಬಾಬು 4ನೇ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
1990ರವರೆಗೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಶಿಕ್ಷಣಕ್ಕಾಗಿ ಬ್ರೇಕ್ ತೆಗೆದುಕೊಂಡರು. ಮಹೇಶ್ ಬಾಬು 1999 ರಲ್ಲಿ 'ರಾಜ ಕುಮರುಡು' ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಚಿತ್ರ ಸೂಪರ್ ಹಿಟ್ ಆಯಿತು.
ಇದರ ನಂತರ, ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದರು.
2000ರಲ್ಲಿ 'ವಂಸಿ' ಚಿತ್ರದ ಸೆಟ್‌ನಲ್ಲಿ ಭೇಟಿಯಾದ ಮಿಸ್ ಇಂಡಿಯಾ ಮತ್ತು ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ ಅವರನ್ನು ಫೆಬ್ರವರಿ 2005ರಲ್ಲಿ ಮಹೇಶ್ ಬಾಬು ವಿವಾಹವಾದರು.
ತಮಗಿಂತ 3 ವರ್ಷ ಹಿರಿಯ ನಮ್ರತಾ ಜೊತೆ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಇಬ್ಬರು ಮದುವೆಯಾಗಲು ನಿರ್ಧರಿಸಿದರು.
ಆಗಸ್ಟ್ 31, 2006ರಂದು ಮಹೇಶ್ ಬಾಬು ಮತ್ತು ನಮ್ರತಾ ಅವರು ಗೌತಮ್ ಎಂಬ ಮಗನಿಗೆ ಪೋಷಕರಾದರೆ, 20 ಜುಲೈ 2012 ರಂದು ನಮ್ರತಾ ಮಗಳು ಸೀತಾರಾಗೆ ಜನ್ಮ ನೀಡಿದರು,
ಚಿತ್ರವೊಂದಕ್ಕೆ ಸುಮಾರು 18 ರಿಂದ 20 ಕೋಟಿ ಪಡೆಯುವ ಮಹೇಶ್ ಬಾಬು ಈವರೆಗೆ ಸುಮಾರು 37 ಚಿತ್ರಗಳಲ್ಲಿ ನಟಿಸಿದ್ದಾರೆ.
ಮುರಾರಿ, ಬಾಬಿ, ಒಕ್ಕಾಡು,ಅರ್ಜುನ್, ಪೊಕಿರಿ, ಬ್ಯುಸಿನೆಸ್‌ಮ್ಯಾನ್, ಅಗಾಡು,ಬ್ರಹ್ಮೋತ್ಸವ, ಸ್ಪೈಡರ್, ಭಾರತ್ ಆನೆ ನೇನು, ಮಹರ್ಷಿ, ಸರಿಲೇರು ನಿಕೆವೇರು ಮುಂತಾದವುಗಳು ಮಹೇಶ್ ಬಾಬು ನಟಿಸಿರುವ ಸಿನಿಮಾಗಳಾಗಿವೆ.