Ramayana Trailer : ಬಹುನಿರೀಕ್ಷಿತ ರಾಮಾಯಣ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದ್ರಲ್ಲಿ ವಿವೇಕ್ ಓಬೆರಾಯ್ ಎಲ್ಲರ ಗಮನ ಸೆಳೆದಿದ್ದಾರೆ. ಅವ್ರ ಪಾತ್ರ ಯಾವ್ದು ಎಂಬ ಗುಟ್ಟು ಬಯಲಾಗಿದೆ.
ಯಶ್, ರಣಬೀರ್ ಕಪೂರ್ ಅಭಿನಯದ, ಬಹುನಿರೀಕ್ಷಿತ ಸಿನಿಮಾ ರಾಮಾಯಣದ ಪಾರ್ಟ್ 1 ರ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪಾತ್ರಗಳನ್ನು ಮಾತ್ರವಲ್ಲದೆ, ಶೀಬಾ ಚಡ್ಡಾ ಮತ್ತು ರಾಕುಲ್ ಪ್ರೀತ್ ಸಿಂಗ್ ಪಾತ್ರಗಳನ್ನು ಬಹಿರಂಗಪಡಿಸಲಾಗಿದೆ. ಆದ್ರೆ ಈ ಟ್ರೇಲರ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ವಿವೇಕ್ ಒಬೆರಾಯ್.
25
ವಿವೇಕ್ ಒಬೆರಾಯ್ ಲುಕ್ ರಿವೀಲ್
ರಾಮಾಯಣ ಟ್ರೇಲರ್ನಲ್ಲಿ ವಿವೇಕ್ ಒಬೆರಾಯ್ ಅವರ ಸೀನ್ ಕೇವಲ ಎರಡು ಸೆಕೆಂಡುಗಳ ಕಾಲ ಬಂದು ಹೋಗುತ್ತೆ. ಆದ್ರೆ ಅದೇ ಪ್ರೇಕ್ಷಕರ ಗಮನ ಸೆಳೆದಿದೆ. ವಿವೇಕ್ ಓಬೆರಾಯ್, ರಾವಣ ಅಲಿಯಾಸ್ ಯಶ್ ಜೊತೆ ಯುದ್ಧ ಮಾಡ್ತಿರೋದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಈಗ ಸಿನಿಮಾದಲ್ಲಿ ಓಬೆರಾಯ್ ಪಾತ್ರ ಯಾವ್ದು ಎನ್ನುವ ಚರ್ಚೆ ಶುರುವಾಗಿದೆ.
35
ಯಶ್ ಜೊತೆ ವಿವೇಕ್ ಫೈಟಿಂಗ್ ಸೀನ್ ಹಿಟ್
ವಿವೇಕ್ ಓಬೆರಾಯ್ ವಿದ್ಯುತ್ಜಿಹ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ಜಿಹ್ವ ಕಲ್ಕೇಯ ರಾಕ್ಷಸ ಕುಲದ ರಾಜಕುಮಾರ ಮತ್ತು ಶೂರ್ಪನಖಿ ಪತಿ. ರಾವಣನು ಯುದ್ಧದಲ್ಲಿ ವಿದ್ಯುತ್ಜಿಹ್ವನನ್ನು ಕೊಲ್ಲುತ್ತಾನೆ.
ಈಗ ಬಿಡುಗಡೆಯಾದ ಟ್ರೇಲರ್ನಲ್ಲಿ ವಿವೇಕ್ ಮತ್ತು ಯಶ್ ನಡುವಿನ ಹೋರಾಟದ ದೃಶ್ಯ ಇದೆ. ಅದು ಅದ್ಭುತವಾಗಿ ಮೂಡಿ ಬಂದಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಓಬೆರಾಯ್ ದೃಶ್ಯವನ್ನು ಇಷ್ಟಪಡುತ್ತಿದ್ದಾರೆ. ಜನರು ಆ ಪಾತ್ರ ವಿವೇಕ್ ಗೆ ಸೂಕ್ತವಾಗಿದೆ ಅಂತ ಕಮೆಂಟ್ ಮಾಡ್ತಿದ್ದಾರೆ.
55
ಚಿತ್ರ ರಿಲೀಸ್ ಯಾವಾಗ?
ನಿತೇಶ್ ತಿವಾರಿ ಅವರ ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಈ ವರ್ಷ ದೀಪಾವಳಿಯಂದು ಬಿಡುಗಡೆಯಾಗಲಿದೆ. 4,000 ಕೋಟಿ ವೆಚ್ಚದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ರಣಬೀರ್ ಕಪೂರ್ ಮೊದಲ ಬಾರಿಗೆ ಪರದೆಯ ಮೇಲೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.