23 ಸರ್ಜರಿ, ಬರೋಬ್ಬರಿ ಮೂರು ವರ್ಷ ಮಲಗಿದ ಸ್ಥಿತಿಯಲ್ಲಿದ್ದ ಈ ವ್ಯಕ್ತಿ ಈಗ ತಮಿಳಿನ ಸೂಪರ್ ಸ್ಟಾರ್ ನಟ !

First Published | Sep 3, 2024, 3:15 PM IST

ಪ್ಯಾನ್ ಇಂಡಿಯಾ ಸ್ಟಾರ್ ಚಿಯಾನ್ ವಿಕ್ರಮ್ ಒಂದೇ ದಿನಕ್ಕೆ ಸೂಪರ್ ಸ್ಟಾರ್ ಆಗಿ ಬಂದೋರು ಅಲ್ವೇ ಅಲ್ಲ, ಮೂರು ವರ್ಷಗಳ ಕಾಲ ಹಾಸಿಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದು, 23 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ, ಸಿನಿಮಾಗಳಲ್ಲಿ ಗೆಲುವು ಸಿಗದೇ, ಸೋತು.. ನಂತರ ಒಂದೊಂದೆ ಹೆಜ್ಜೆ ಇಟ್ಟು ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಚಿಯಾನ್ ವಿಕ್ರಮ್ ಕಥೆ ಇದು. 
 

ಚಿಯಾನ್ ವಿಕ್ರಮ್ (Chiyaan Vikram) ತಮಿಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಸೂಪರ್ ಸ್ಟಾರ್ ನಟ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ವಿಕ್ರಮ್, ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸುವಂತೆ ಪರಕಾಯ ಪ್ರವೇಶ ಮಾಡುವಂತೆ ನಟಿಸುವ ಮೂಲಕ ದೇಶ್ಯಾದ್ಯಂತ ಅಭಿಮಾನಿಗಳನ್ನು ಪಡೆದಿದ್ದಾರೆ. ಇಂದು ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ, ಹಿಂದೆ ಹೀಗಿರಲಿಲ್ಲ. 

ಕಳೆದ ಮೂರು ದಶಕಗಳಲ್ಲಿ, ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಚಿಯಾನ್ ವಿಕ್ರಮ್ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡವರು, ಅವರ ನಿಜ ಜೀವನ ಕೂಡ ಚಲನಚಿತ್ರ ಕಥೆಯಂತೆ ಇತ್ತು. ಕಠಿಣ ಹೋರಾಟ ಮತ್ತು ಅಪಘಾತದ ನಂತರ ಮೂರು ವರ್ಷಗಳ ಕಾಲ ಬೆಡ್ ರಿಡನ್ ಆಗಿ ವೈದ್ಯರು ಕಾಲನ್ನು ಕತ್ತರಿಸಬೇಕು ಎಂದರೂ ಹಠ ಬಿಡದೆ ಎದ್ದು ನಿಂತ ಛಲಗಾರ ವಿಕ್ರಮ್. 

Tap to resize

ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು (super hit movies)ನೀಡಿರುವ ವಿಕ್ರಮ್ ಅನಿಯನ್ ಸಿನಿಮಾದ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನ ಪಡೆದರು. ಈ ದಿನಗಳಲ್ಲಿ ಅವರು ತಮ್ಮ ಹೊಸ ಚಿತ್ರ ತಂಗ್ಲಾನ್ ಸಿನಿಮಾ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಂಗ್ಲಾನ್ ಸಿನಿಮಾ ಮೂಲಕ ಮತ್ತೆ ದೇಶದ್ಯಂತ ಹೆಸರು ಮಾಡುತ್ತಿರುವ ವಿಕ್ರಮ್ ಅವರ ಆರಂಭದ ಜೀವನದ ಕಥೆ ಕೇಳಿದ್ರೆ ಶಾಕ್ ಆಗುತ್ತೆ. 
 

ವಿಕ್ರಮ್ ಅವರ ಮೂಲಕ ಹೆಸರು ಕೆನೆಡಿ ಜಾನ್ ವಿಕ್ಟರ್ (John Kenedy Victor). ನಂತರ ಸಿನಿಮಾಗಾಗಿ ಚಿಯಾನ್ ವಿಕ್ರಮ್ ಎಂದು ಹೆಸರು ಬದಲಾಯಿಸಿದರು. ಇವರು ಸಿನಿಮಾ ಇಂಡಷ್ಟ್ರಿಯಲ್ಲಿ ಗಾಯಕನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡು, ಈಗ ನಾಯಕನಾಗಿ ಮಿಂಚುತ್ತಿದ್ದಾರೆ. 

ವಿಕ್ರಮ್ ಗೆ ಶಾಲಾ ದಿನಗಳಿಂದಲೂ ನಟನಾಗಬೇಕೆಂದು ಕನಸು ಇತ್ತಂತೆ.  ಹಾಗಾಗಿ ಕಾಲೇಜು ನಾಟಕಕ್ಕಾಗಿ ತಯಾರಿ ನಡೆಸುತ್ತಿದ್ದಾಗ ಒಂದು ದೊಡ್ಡ ಆಕ್ಸಿಡೆಂಟ್ ಆಗಿದ್ದು, ಅದರಿಂದ ವಿಕ್ರಮ್ ಜೀವನವೇ ಬದಲಾಗಿ ಹೋಯ್ತು. ಆಕ್ಸಿಡೆಂಟ್ (accident) ಬಳಿ ವಿಕ್ರಮ್ ಬರೋಬ್ಬರಿ ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರಂತೆ, ಅಷ್ಟೇ ಅಲ್ಲ 23 ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿದ್ದರು, ಮತ್ತೆ ಒಂದು ವರ್ಷ ವೀಲ್ ಚೇರ್ ಮೇಲೆ ಜೀವನ ಕಳೆದಿದ್ದರಂತೆ.
 

ಒಟ್ಟು ನಾಲ್ಕು ವರ್ಷಗಳ ಕಾಲ ನಡೆಯಲಾರದೆ ಮಲಗಿದ್ದಲ್ಲೆ ಇದ್ದ ವಿಕ್ರಮ್ ರನ್ನು ನೋಡಿ, ವೈದ್ಯರು ಈತನಿಗೆ ಇನ್ನು ನಡೆಯೋದಕ್ಕೆ ಸಾಧ್ಯವೇ ಇಲ್ಲ. ಒಂದು ಕಾಲನ್ನು ಕತ್ತರಿಸಬೇಕು ಅಂತಾನೂ ಹೇಳಿದ್ದರಂತೆ. ಆದರೆ ವಿಕ್ರಮ್ ಛಲ ಬಿಡದೇ, ಒಂದೊಂದೆ ಹೆಜ್ಜೆ ಇಟ್ಟು ನಡೆಯೋದಕ್ಕೆ ಆರಂಭಿಸಿದರು, ನಂತರ ಸಂಪೂರ್ಣವಾಗಿ ಗುಣಮುಖರಾದರು. ಅದೇ ವೈದ್ಯರು ಐದು ವರ್ಷಗಳ ವಿಕ್ರಮ್ ನಡೆಯೋದನ್ನ ನೋಡಿ ಶಾಖ್ ಆಗಿದ್ರಂತೆ. 

ವಿಕ್ರಮ್ ಕಾಲು ಮುರಿದುಕೊಂಡು ಪರಿತಪಿಸುತ್ತಿರುವಾಗ ನಾಟ್ಯ ಮಯೂರಿ ಚಿತ್ರವನ್ನು ನೋಡಿದ್ದರಂತೆ, ಅದರಲ್ಲಿ ಸುಧಾ ಚಂದ್ರನ್ ಒಂದು ಕಾಲನ್ನು ಕಳೆದುಕೊಂಡರೂ ನೃತ್ಯ ಮಾಡುತ್ತಿದ್ದರು ಹಾಗೂ ನಟಿಸುತ್ತಿದ್ದರು. ಕಾಲಿಲ್ಲದಿದ್ದರೂ ನಟಿಗೆ ಡ್ಯಾನ್ಸ್ ಮತ್ತು ನಟಿಸೋದಕ್ಕೆ ಸಾಧ್ಯವಾದರೆ, ನನಗೂ ಸಹ ಎದ್ದು ನಡೆಯೋದಕ್ಕೆ ಸಾಧ್ಯ ಎಂದು ಮತ್ತೆ ಎದ್ದು ನಿಂತರಂತೆ ವಿಕ್ರಮ್. 
 

 ಇಷ್ಟೇಲ್ಲಾ ಸಮಸ್ಯೆ ಆಗಿ ಎದ್ದು ನಿಂತರೂ ವಿಕ್ರಮ್ ಗೆ ಅಷ್ಟಾಗಿ ಸಿನಿಮಾ ಸಿಗುತ್ತಿರಿಲ್ಲ, ಪೋಷಕ ಪಾತ್ರಗಳಲ್ಲಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ಸುಮಾರು ಹತ್ತು ವರ್ಷಗಳ ಕಾಲ ಕಷ್ಟಗಳನ್ನ ಅನುಭವಿಸಿದ್ದಾರೆ ನಟ ವಿಕ್ರಮ್. ಆದರೆ ಇಂದು, ನಟನೆ, ನೃತ್ಯ ಮತ್ತು ಆಕ್ಷನ್ ಎಲ್ಲವನ್ನೂ ಮಾಡಬಹುದು ಎಂದು ಖುಷಿ ಪಡುತ್ತಿರುವ ವಿಕ್ರಮ್ ನಾನು ಇಂದು ಏನಾಗಿದ್ದೇನೆ, ನಾನು ಎಲ್ಲಿಗೆ ತಲುಪಿದ್ದೇನೆ, ಅದೆಲ್ಲವೂ ಆ ಆಕ್ಸಿಡೆಂಟ್ ನಿಂದ ಸಾಧ್ಯವಾಯಿತು ಎಂದು ಖುಷಿಯಿಂಲೇ ಹೇಳುತ್ತಾರೆ ವಿಕ್ರಮ್. 

Latest Videos

click me!