ಅಪ್ಪನ ಉದ್ಯಮ ಮುನ್ನಡೆಸುವ ಕನಸು: ಅಹ್ಮದಾಬಾದ್ ಐಐಎಂನಲ್ಲಿ ಎಂಬಿಎಗೆ ಸೇರಿದ ಬಿಗ್‌ ಬಿ ಮೊಮ್ಮಗಳು

First Published Sep 3, 2024, 2:34 PM IST

ಅಪ್ಪನ ಉದ್ಯಮ ಮುನ್ನಡೆಸುವ ಕನಸಿನ ಜೊತೆ ಉದ್ಯಮ ಲೋಕದ ಐಕಾನ್ ಆಗಲು ಹೊರಟಿರುವ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ಗುಜರಾತ್‌ನ ಅಹ್ಮದಾಬಾದ್‌ನ ಐಐಎಂನಲ್ಲಿ ಎಂಬಿಎ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.

ಅಜ್ಜ ಅಜ್ಜಿ ಮಾವ ಅತ್ತೆ ಎಲ್ಲರೂ ಸಿನಿಮಾರಂಗದಲ್ಲಿ ಪಳಗಿದ ದೊಡ್ಡ ದೊಡ್ಡ ತಾರೆಯರೇ ಆಗಿದ್ದರೂ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮುದ್ದಿನ ಮೊಮ್ಮಗಳು ನವ್ಯಾ ನವೇಲಿ ಮಾತ್ರ ಸಿನಿಮಾದಿಂದ ಬಹಳ ದೂರವೇ ಉಳಿಯುವ ನಿರ್ಧಾರ ಮಾಡಿದ್ದಾರೆ.

 ಹಿಂದೊಮ್ಮೆ ತಮ್ಮ ಅತ್ತೆ ಐಶ್ವರ್ಯಾ ರೈಯಂತೆ ಲೋರಿಯಲ್‌ನ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಂಡು ರಾಂಪ್ ಮೇಲೆ ಹೆಜ್ಜೆ ಹಾಕಿದ್ದ ಎಲ್ಲರ ಗಮನ ಸೆಳೆದಿದ್ದ ನವ್ಯಾ ನವೇಲಿ ಈಗ  ಉದ್ಯಮ ಲೋಕದ ಐಕಾನ್ ಆಗುವ ಕನಸು ಕಾಣುತ್ತಿದ್ದಾರೆ.  

Latest Videos


 ಅಪ್ಪನ ಉದ್ಯಮದಲ್ಲಿ ಸಹೋದರ ಆಗಸ್ತ್ಯನಿಗಿಂತ ನವ್ಯಾ ನಂದಾಗೆ ಹೆಚ್ಚಿನ ಆಸಕ್ತಿ ಇದ್ದು, ಆಗಾಗ ತನ್ನ ತಾತ ಹೆಚ್‌.ಪಿ ನಂದಾ ಸ್ಥಾಪಿಸಿದ ಕೃಷಿ ಸಂಬಂಧಿ ವಾಹನಗಳ ಸಂಸ್ಥೆ ಕುಬೊಟ ಇಂಡಿಯಾಗೆ ಭೇಟಿ ನೀಡುತ್ತಿರುತ್ತಾರೆ.

ಜೊತೆಗೆ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.  ಇದರ ಜೊತೆಗೆ ಉದ್ಯಮ ಲೋಕದಲ್ಲಿ ಇರುವ ಸ್ಪರ್ಧೆಯಲ್ಲಿ ಎತ್ತರಕ್ಕೆ ಈಜಬೇಕಾದರೆ ಉತ್ತಮ ಶಿಕ್ಷಣವೂ ಬೇಕು. 

ಈ ಹಿನ್ನೆಲೆಯಲ್ಲಿ ಈಗ ನವ್ಯಾ ನವೇಲಿ ಅವರು ಗುಜರಾತ್‌ನ ಅಹ್ಮದಾಬಾದ್‌ನ ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ (IIM Ahmedabad) ಎರಡು ವರ್ಷದ ಎಂಬಿಎ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.


ತಮ್ಮ ಶಿಕ್ಷಕರು ಬ್ಯಾಚ್‌ಮೇಟ್‌ಗಳ ಜೊತೆ ಅವರು ಇರುವ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅನೇಕರು ನವ್ಯ ನವೇಲಿಯ ಉನ್ನತ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ನವ್ಯ ನವೇಲಿ ನಂದಾ, ಕನಸು ನನಸಾಯ್ತು ಮುಂದಿನ ಎರಡು ವರ್ಷಗಳು  ಅತ್ಯುತ್ತಮ ಜನರು ಹಾಗೂ ಉಪನ್ಯಾಸಕರ ಜೊತೆ 2026 ಕ್ಕೆ ಪೂರ್ಣಗೊಳ್ಳುವ ಬ್ಲೆಂಡೆಡ್ ಸ್ನಾತಕೋತ್ತರ ಕಾರ್ಯಕ್ರಮ (BPGP)ಕ್ಕೆ ಸೇರಿದೆ ಎಂದು ಬರೆದುಕೊಂಡಿದ್ದಾರೆ. 

 ಇದರ ಜೊತೆಗೆ ಐಐಎಂ ಅಹ್ಮದಾಬಾದ್ ಕಾಲೇಜು ಕ್ಯಾಂಪಸ್, ಕಾಲೇಜಿನಲ್ಲಿರುವ ಸ್ನೇಹಿತರು, ಶಿಕ್ಷಕರ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ ನವ್ಯಾ ನವೇಲಿ ನಂದಾ. ಅಲ್ಲದೇ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಬೇಕಾದ ಸಿಎಟಿ ಹಾಗೂ ಐಎಟಿ ಪರೀಕ್ಷೆ ಪಾಸ್ ಮಾಡಲು ನೆರವಾದ ಶಿಕ್ಷಕರ ಮಾರ್ಗದರ್ಶನಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ. 

Blended Post Graduate Programme ಅಥವಾ ಬಿಪಿಜಿಪಿ ಎರಡು ವರ್ಷದ ಎಂಬಿಎ ಹೈಬ್ರೀಡ್‌ ಕೋರ್ಸ್ ಆಗಿದ್ದು,  ಇದು ಆನ್‌ಲೈನ್ ಹಾಗೂ ಆಪ್‌ಲೈನ್‌ ಎರಡು ತರಗತಿಗಳನ್ನು ಹೊಂದಿದೆ. 

ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರುವ ವೃತ್ತಿಪರರನ್ನು ಗುರಿಯಾಗಿಟ್ಟುಕೊಂಡು ಬಂದಿರುವ ಈ ಕೋರ್ಸ್‌, ಕೆಲಸ ಮಾಡುವ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಶೈಕ್ಷಣಿಕ ಸಾಧನೆ ಎರಡನ್ನು ನಿಭಾಯಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ನವ್ಯಾ ಅವರ ಉನ್ನತ ಶಿಕ್ಷಣದ ಹಾದಿಗೆ ಅನೇಕರು ಶುಭ ಹಾರೈಸಿದ್ದಾರೆ, ಆಕೆಯ ಸ್ನೇಹಿತರಾದ ಸುಹಾನಾ ಖಾನ್, ಅನನ್ಯಾ ಪಾಂಡೆ, ಶನಯಾ ಕಪೂರ್ ಹಾಗೂ ನಿರ್ದೇಶಕಿ ಜೋಯಾ ಅಖ್ತರ್, ನಟಿ ಕರೀಷ್ಮಾ ಕಪೂರ್ ಹಾಗೂ ಸೋನಾಲಿ ಬೇಂದ್ರೆ ಕೂಡ ನವ್ಯಾ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ. 

ಈ ಹಿಂದೆ ನವ್ಯಾ ನಂದಾ ತನ್ನ ಅಜ್ಜಿ ಜಯಾ ಬಚ್ಚನ್ ಹಾಗೂ ಅಮ್ಮ ಶ್ವೇತಾ ಬಚ್ಚನ್ ಜೊತೆ  'ಹೆಲ್‌ ನವ್ಯಾ' ಎಂಬ ಪಾಡ್‌ಕಾಸ್ಟ್‌ನ್ನು ನಡೆಸಿಕೊಡುತ್ತಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ತನಗೆ ಸಿನಿಮಾ ಇಂಡಸ್ಟ್ರಿಗೆ ಬರುವ ಯಾವ ಉದ್ದೇಶವೂ ಇಲ್ಲ ಎಂದು ನವ್ಯಾ ಹೇಳಿಕೊಂಡಿದ್ದರು.

click me!