Anushka Shetty; ಮತ್ತೆ ದಪ್ಪ ಆಗಿರುವ ಸ್ವೀಟಿ ಅನುಷ್ಕಾ, ಶಿವರಾತ್ರಿ ಸಂಭ್ರಮಾಚರಣೆ ಫೋಟೋ ವೈರಲ್

Published : Feb 20, 2023, 04:34 PM IST

ನಟಿ ಅನುಷ್ಕಾ ಶೆಟ್ಟಿ ಶಿವರಾತ್ರಿ ಸಂಭ್ರಮಾಚರಣೆ ಫೋಟೋಗಳು ವೈರಲ್ ಆಗಿದವೆ. ಅನುಷ್ಕಾ ಮತ್ತೆ ದಪ್ಪ ಆಗಿದ್ದಾರೆ. 

PREV
18
Anushka Shetty; ಮತ್ತೆ ದಪ್ಪ ಆಗಿರುವ ಸ್ವೀಟಿ ಅನುಷ್ಕಾ, ಶಿವರಾತ್ರಿ ಸಂಭ್ರಮಾಚರಣೆ ಫೋಟೋ ವೈರಲ್

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ಯಾವುದೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿಲ್ಲ. 2020ರಲ್ಲಿ ನಿಶಬ್ದಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಅನುಷ್ಕಾ ಒಟಿಟಿ ಪ್ರೇಕ್ಷಕರನ್ನು ರಂಜಿಸಿದ್ದರು. 

 

28

ಬಾಹುಬಲಿ ಸಿನಿಮಾ ಬಳಿಕ ಹಿಟ್ ಸಿನಿಮಾಗಳನ್ನು ನೋಡಲು ಅನುಷ್ಕಾಗೆ ಸಾಧ್ಯವಾಗಿಲ್ಲ. ಸೂಪರ್ ಸಕ್ಸಸ್ ಬಾಹುಬಲಿ-2 ಬಳಿಕ ಅನುಷ್ಕಾ ಭಾಗಮತಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಬಳಿಕ ನಿಶಬ್ದಂ ನಲ್ಲಿ ಮಿಂಚಿದರು. ಈ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. 

38

ಆಪರೂಪಕ್ಕೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಸಾರ್ವಜನಿಕವಾಗಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮರಾ ಕಣ್ಣಿನಿಂದ ದೂರ ಇರುವ ಅನುಷ್ಕಾ ಇತ್ತೀಚಿಗಷ್ಟೆ ಶಿವರಾತ್ರಿ ಪ್ರಯುಕ್ತ ದರ್ಶನ ನೀಡಿದ್ದರು.     

48

ಅನುಷ್ಕಾ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಮತ್ತೆ ಸಿಕ್ಕಾಪಟ್ಟೆ ದಪ್ಪ ಆಗಿರುವ ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವೀಟಿ ಅನುಷ್ಕಾ ಕರ್ನಾಟಕದಲ್ಲಿ ಶಿವರಾತ್ರಿ ಹಬ್ಬ ಸಂಭ್ರಮಿಸಿದ್ದಾರೆ. 
 

58

ಅನುಷ್ಕಾ ತಂದೆ-ತಾಯಿ ಮತ್ತು ಸಹೋದರನ ಜೊತೆ ಶಿವರಾತ್ರಿ ಆಚರಿಸಿದ್ದಾರೆ. ಶಿವರಾತ್ರಿ ಸಂಭ್ರಮದ ಫೋಟೋಗಳು ಅಭಿಮಾನಿಗಳ ಗಮನಸೆಳೆಯುತ್ತಿವೆ. ಲಾಕ್ ಡೌನ್ ಸಮಯದಲ್ಲಿ ಸಿಕ್ಕಾಪಟ್ಟೆ ದಪ್ಪ ಆಗಿದ್ದ ಅನುಷ್ಕಾ ಬಳಿಕ ಕೊಂಚ ತೆಳ್ಳಗಾಗಿದ್ದರು. ಇದೀಗ ಮತ್ತೆ ದಪ್ಪ ಆಗಿದ್ದಾರೆ. 

68

ಈ ಹಿಂದೆ ದಪ್ಪ ಆಗಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅನುಷ್ಕಾ ಶೆಟ್ಟಿ ಕೆಲವು ಅನಾರೋಗ್ಯದ ಕಾರಣ ತೆಳ್ಳಗಾಗಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. 

78

ಹೇಗೆ ಇದ್ದರೂ ಅಭಿಮಾನಿಗಳು ಅನುಷ್ಕಾ ಅವರನ್ನು ತುಂಬಾ ಇಷ್ಟಪಡುತ್ತಾರೆ. ದಪ್ಪ ಇದ್ದಾಗಲೂ ಅನುಷ್ಕಾ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ದುಂಡಾಗಿಯೂ ತುಂಬಾ ಸುಂದರವಾಗಿ ಕಾಣಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

88

ಅನುಷ್ಕಾ ಇತ್ತೀಚೆಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ನವೀನ್ ಪೋಲಿಶೆಟ್ಟಿ ಜೊತೆ ಅನುಷ್ಕಾ ನಟಿಸುತ್ತಿದ್ದಾರೆ. ಹಾಸ್ಯಮಯ ಸಿನಿಮಾವಾಗಿದ್ದು ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 
 

Read more Photos on
click me!

Recommended Stories