ಟಾಲಿವುಡ್ ಹ್ಯಾಟ್ರಿಕ್ ಸ್ಟಾರ್ ಪ್ರಭಾಸ್ ಹೆಸರಿನಲ್ಲಿ ಚಾಕಲೇಟ್ ಮಾರಾಟ.
ಸೂಪರ್ ಹಿಟ್ ಬಾಹುಬಲಿ ಸಿನಿಮಾ ಹಲವು ವಿದೇಶಿ ಭಾಷೆಗಳಲ್ಲಿ ಡಬ್ ಮಾಡಿ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು.
ಟಿವಿಯಲ್ಲಿ ಪ್ರಭಾಸ್‌ನನ್ನು ಕಂಡ ವಿದೇಶಿಯರು ಅದರಲ್ಲೂ ಜಪಾನೀಯರು ಫುಲ್ ಥ್ರಿಲ್ ಆಗಿದ್ದಾರೆ.
ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಚಾಕಲೇಟ್ ಮಾರಾಟ ಪ್ರಾರಂಭಿಸಿದ್ದಾರೆ.
'ಡಾರ್ಲಿಂಗ್ ಪ್ರಭಾಸ್' ಎಂದು ಶುಗರ್‌ಲೆಸ್ ಚಾಕಲೇಟ್ ಮೇಲೆ ಬರೆಯಲಾಗಿದೆ.
ಕೆಲ ಮೂಲಗಳ ಪ್ರಕಾರ ಜಪಾನಿನಲ್ಲಿ ಈ ಚಾಕಲೇಟ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗಿದೆ.
Suvarna News