ಜಾನ್ವಿ ಕಪೂರ್ ಸ್ಟೈಲಿಶ್ ನಡಿಗೆಗೆ ಭಾರೀ ಟ್ರೋಲ್: ಜನರಿಂದ ಕಾಮೆಂಟ್ಸ್ ಸುರಿಮಳೆ!

ಜಾನ್ವಿ ಕಪೂರ್ ಟ್ರೋಲ್: ನಿನ್ನೆ ರಾತ್ರಿ ಜಾನ್ವಿ ಕಪೂರ್ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್ ಲೆಗ್ ಕಟ್ ಡ್ರೆಸ್‌ನಲ್ಲಿ ಜಾನ್ವಿ ರಾಂಪ್ ವಾಕ್ ಮಾಡಿದರು. ಆದರೆ ಅವರ ನಡಿಗೆ ನೋಡಿ ಜನರು ಕಾಲೆಳೆಯುತ್ತಿದ್ದಾರೆ.

janhvi kapoor trolled for hasty ramp walk at lakme fashion week

ನಿನ್ನೆ ರಾತ್ರಿ ಜಾನ್ವಿ ಕಪೂರ್ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ವೇಳೆ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಅವರ ನಡಿಗೆಗೆ ಜನರು ಟ್ರೋಲ್ ಮಾಡುತ್ತಿದ್ದಾರೆ.

janhvi kapoor trolled for hasty ramp walk at lakme fashion week

ಜಾನ್ವಿ ಕಪೂರ್ ಅವರನ್ನು ನೋಡಿ ಒಬ್ಬರು, ಇವರ ಫ್ಲೈಟ್ ಮಿಸ್ ಆಗ್ತಿದೆ ಅನ್ಸುತ್ತೆ ಅಂದಿದ್ದಾರೆ. ಇನ್ನೊಬ್ಬರು ಮಾಡೆಲಿಂಗ್ ಕೂಡ ಹಾಳು ಮಾಡ್ತಾರೆ ಅಂದಿದ್ದಾರೆ.


ಜಾನ್ವಿ ಕಪೂರ್ ಅವರನ್ನ ನೋಡಿ ಒಬ್ಬರು, ಇವರಿಗೆ ಆಕ್ಟಿಂಗ್ ಬರಲ್ಲ, ರಾಂಪ್ ಮೇಲೆ ನಡೆಯೋಕೂ ಬರಲ್ಲ ಅಂದಿದ್ದಾರೆ. ಕೆಲವರು ಜಾನ್ವಿ ಅಮ್ಮ ಶ್ರೀದೇವಿಗೆ ಹೋಲಿಸಿ, ಅಮ್ಮನ ಒಂದು ಪಾರ್ಸಂಟ್ ಕೂಡ ಯಾವುದರಲ್ಲೂ ಇಲ್ಲ ಎಂದಿದ್ದಾರೆ. 

ಜಾನ್ವಿ ಕಪೂರ್ ಅವರ ರಾಂಪ್ ವಾಕ್ ನೋಡಿ ಒಬ್ಬರು, ಛಪರಿ ವಾಕ್, ಇದಕ್ಕಿಂತ ಕಂಗನಾ ಚೆನ್ನಾಗಿ ಮಾಡ್ತಾರೆ ಅಂದಿದ್ದಾರೆ. ಕೆಲವರು ರಾಂಪ್ ವಾಕ್ ಬಿಡಿ, ಸಾದಾ ಸೀದಾ ನಡಿಗೆಯೂ ಇವ್ರಿಗೆ ಕಷ್ಟವೇನೋ ಅಂದಿದ್ದಾರೆ. 

ಕೆಲವರು ಶ್ರೀದೇವಿ ಅವರ ಹೆಸರನ್ನು ಎಳೆದು ತಂದಿದ್ದಾರೆ. ಒಬ್ಬರು, ಅಮ್ಮನ ಹೆಸ್ರು ಹಾಳು ಮಾಡ್ತಿದ್ದಾರೆ ಅಂದಿದ್ದಾರೆ. ಮತ್ತೊಬ್ಬರು ಚೆಲುವಿನಲ್ಲಾಗಲೀ ನಟನೆಯಲ್ಲಾಗಲೀ ಮಗಳು ಅಮ್ಮನ ಸಮೀಪ ಕೂಡ ಇಲ್ಲ ಎಂದಿದ್ದಾರೆ. 

ಒಬ್ಬರು ಜಾನ್ವಿ ಕಪೂರ್ ಅವರಿಗೆ, ಆಕ್ಟಿಂಗ್ ಬಿಟ್ಟುಬಿಡಿ ಅಂತ ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಫೋಟೋಗ್ರಾಫರ್ಸ್ ನೋಡಿ ಜಾಸ್ತಿ ಖುಷಿ ಆಗ್ಬಿಟ್ಟಿದ್ದಾರೆ ಅಂದಿದ್ದಾರೆ.

Latest Videos

vuukle one pixel image
click me!