ನಂಗೆ 3 ಮಕ್ಕಳು ಬೇಕು, ತಿರುಪತಿಯಲ್ಲಿ ಮದ್ವೆ ಮಾಡ್ಕೊಂಡು ದಿನ ಬಾಳೆಎಲೆ ಊಟ ಮಾಡ್ತೀನಿ: ಜಾನ್ವಿ ಕಪೂರ್

Published : Mar 19, 2025, 04:03 PM ISTUpdated : Mar 19, 2025, 04:06 PM IST

ತಿರುಪತಿಯಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಶ್ರೀದೇವಿ ಪುತ್ರಿ. ದಿನವೂ ಬಾಳೆಎಲೆ ಊಟ ಮಾಡುವ ಆಸೆ ಅಂತಿದ್ದಾರೆ. 

PREV
16
ನಂಗೆ 3 ಮಕ್ಕಳು ಬೇಕು, ತಿರುಪತಿಯಲ್ಲಿ ಮದ್ವೆ ಮಾಡ್ಕೊಂಡು ದಿನ ಬಾಳೆಎಲೆ ಊಟ ಮಾಡ್ತೀನಿ: ಜಾನ್ವಿ ಕಪೂರ್

ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮುದ್ದಿನ ಜೇಷ್ಠ ಪುತ್ರಿ ಜಾನ್ವಿ ಕಪೂರ್ ತಮ್ಮ 10 ವರ್ಷ ಪ್ಲ್ಯಾನ್ ಹಂಚಿಕೊಂಡಿದ್ದಾರೆ. 

26

ಸೂಪರ್ ಡೂಪರ್ ಸಿನಿಮಾಗಳನ್ನು ಮಾಡ್ಕೊಂಡು ಮಜಾ ಮಾಡುತ್ತೀನಿ ಎನ್ನುವ ನಟಿಯರ ನಡುವೆ ಮದ್ವೆ ಮಾಡ್ಕೊಂಡು ಮಕ್ಕಳು ಮಾಡಿಕೊಳ್ಳುತ್ತೀನಿ ಅಂತಿದ್ದಾರೆ ಜಾನ್ವಿ ಕಪೂರ್. 

36

'ನಾನು ಮದುವೆ ಮಾಡಿಕೊಂಡು ಸೆಟಲ್ ಆಗುತ್ತೀನಿ. ತಿರುಮಲ ತಿರುಪತಿಯಲ್ಲಿ ನನ್ನ ಪತಿ ಜೊತೆ ಸಮಯ ಕಳೆಯಬೇಕು. ಮೂರು ಮಕ್ಕಳು ಮಾಡಿಕೊಳ್ಳಬೇಕು' ಎಂದು ಸಂದರ್ಶನ ಒಂದರಲ್ಲಿ ಜಾನ್ವಿ ಹೇಳಿದ್ದಾರೆ.

46

'ಪ್ರತಿ ದಿನ ಬಾಳೆಎಲೆ ಊಟ ಮಾಡಬೇಕು. ಪ್ರತಿ ದಿನ ಗೋವಿಂದ ಬಜನೆ ಕೇಳಿಸಿಳ್ಳಬೇಕು. ತಲೆಗೆ ಹೂ ಮುಡಿದುಕೊಂಡು ಮಣಿರತ್ನಂ ಹಾಡುಗಳನ್ನು ಕೇಳುತ್ತಿರಬೇಕು. ಗಂಡ ಪಂಚೆ ಮೇಲೆ ತಾಳ ಹಾಕಬೇಕು' ಎಂದು ಜಾನ್ವಿ ಹೇಳಿದ್ದಾರೆ.

56

ಚೆನ್ನೈನಲ್ಲಿ ಶ್ರೀದೇವಿ ಮನೆ ಮಾಡಿದ್ದರು. ನಟಿ ಅಗಲಿದ ಮೇಲೆ ಪುತ್ರಿ ಜಾನ್ವಿ ಕಪೂರ್ ಸಂಪೂರ್ಣವಾಗಿ ರಿನೋವೇಟ್ ಮಾಡಿಸಿಕೊಂಡು ತಿಂಗಳಿಗೆ ಮೂರ್ನಾಲ್ಕು ಸಲ ಭೇಟಿ ನೀಡುತ್ತಾರೆ. 
 

66

ತಾಯಿಯಂತೆ ಜಾನ್ವಿ ಕಪೂರ್‌ಗೆ ತಿರುಪತಿ ತಿಮ್ಮಪನ ಮೇಲೆ ಭಕ್ತಿ ಜಾಸ್ತಿ. ಹೀಗಾಗಿ ನೆನಪಿಸಿಕೊಂಡಾಗಲೆಲ್ಲಾ ಬೆಟ್ಟ ಹತ್ತಿಕೊಂಡು ದೇವರ ದರ್ಶನ ಪಡೆಯುತ್ತಾರೆ. 

Read more Photos on
click me!

Recommended Stories