ನಟಿ ಜಾನ್ವಿ ಕಪೂರ್ ಈ ದಿನಗಳಲ್ಲಿ ಬ್ಯುಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಜಾನ್ವಿ ಕಪೂರ್ ಪ್ರಸ್ತುತ ಒಂದಕ್ಕಿಂತ ಹೆಚ್ಚು ಚಲನಚಿತ್ರ ಸಿನಿಮಾ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.
ತಮ್ಮ ಕೊನೆಯ ಚಿತ್ರ ‘ಗುಡ್‌ಲಕ್ ಜೆರ್ರಿ’ ಯ ಯಶಸ್ವಿ ಒಟಿಟಿ ಬಿಡುಗಡೆಯ ನಂತರ, ಜಾನ್ವಿ ಈಗ ಅವರು ಮುಂಬರುವ ಚಿತ್ರ ಮಿ. ಮತ್ತು ಮಿಸಸ್. ಮಹಿ ಹೊರಾಂಗಣ ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದರಲ್ಲಿ ಅವರು ರಾಜ್ಕುಮಾರ್ ರಾವ್ ಜೊತೆ ನಟಿಸಲಿದ್ದಾರೆ.
ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಜಾನ್ವಿ ಕಪೂರ್ ಫೋಟೋಗಳನ್ನು ಶೇರ್ ಮಾಡಿಕೊಂಡು ತನ್ನ ಮುಂದಿನ ಯೋಜನೆಗಾಗಿ ಹೊರಾಂಗಣ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದೇನೆ ಎಂದು ಘೋಷಿಸಿದರು.
ತನ್ನ ಗ್ಲ್ಯಾಮ್ ಲುಕ್‌ನ ಕೆಲವು ಪೋಟೋಗಳನ್ನು ಜಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಜಾನ್ವಿ ಈ ಫೋಟೋಗಳಲ್ಲಿ ಯಾವುದೇ ಮೇಕಪ್ ಇಲ್ಲದೆ ಕಾಣಿಸಿದ್ದಾರೆ. ಬಿಳಿ ಡ್ರೆಸ್ ಜೊತೆ ಬೆಳ್ಳಿ ಜುಮುಕಿಯನ್ನು ಪೇರ್ ಮಾಡಿಕೊಂಡಿರುವ ಜಾನ್ವಿಯ ನೈಸರ್ಗಿಕ ಸೌಂದರ್ಯ ಸಖತ್ ಮೆಚ್ಚುಗೆ ಗಳಿಸಿದೆ.
'ಹ್ಯಾಪಿ ಮಂಡೆ #MRANDMRSMAHI ಹೊರಾಂಗಣಕ್ಕಾಗಿ ನನಗೆ ವಿಶ್ ಮಾಡಿ ಎಂದು ಜಾನ್ವಿ ಕಪೂರ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ ಶೀಘ್ರದಲ್ಲೇ, ಫ್ಯಾಶನ್ ಡಿಸೈನರ್, ಮನೀಶ್ ಮಲ್ಹೋತ್ರಾ ಸೇರಿದಂತೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಜಾನ್ವಿ ಮೇಲೆ ಪ್ರೀತಿಯ ಮಳೆ ಸುರಿಯಲು ಪ್ರಾರಂಭಿಸಿದರು.
ಜಾನ್ವಿ ಅವರ‘ಮಿ. ಮತ್ತು ಮಿಸಸ್ ಮಹಿ' ಸಿನಿಮಾದ ಔಟ್‌ಡೋರ್ ಶೂಟಿಂಗ್ ಬಗ್ಗೆ ನಟಿಯ ವದಂತಿಯ ಗೆಳೆಯ ಓರ್ಹಾನ್ ಅವತ್ರಮಣಿ ಸಂತೋಷವಾಗಿಲ್ಲ ಎಂದು ಸ್ಪಷ್ಟವಾಗಿ ತೋರುತ್ತದೆ.
ಆದರೆ ಜಾನ್ವಿ ಅವರ ಬಾಯ್‌ಫ್ರೆಂಡ್ ಓರ್ಹಾನ್ ಅವತ್ರಮಣಿ ಅವರಿಗೆ ಈ ಪೋಸ್ಟ್ ತುಂಬಾ ನಿರಾಶೆಯನ್ನು ಉಂಟು ಮಾಡಿದೆ. 'ನನಗೆ ಇದು ದುಃಖವಾಗಿದೆ, ಏಕೆಂದರೆ ನಾನು ನಿನ್ನ ಜೊತೆ ಇಲ್ಲ' ಎಂದು ಜಾನ್ವಿ ಕಪೂರ್ ಅವರ ಪೋಸ್ಟ್‌ಗೆ ಓರ್ಹಾನ್ ಕಾಮೆಂಟ್ ಮಾಡಿದ್ದಾರೆ.
ಜಾನ್ವಿ ಕಪೂರ್ ಅವರ ಫೋಟೋಗೆ ಓರ್ಹಾನ್ ಅವತ್ರಮಣಿ ಅವರ ಈ ಕಾಮೆಂಟ್ ಅವರಿಬ್ಬರ ಡೇಟಿಂಗ್ ರೂಮರ್‌ಗೆ ಇನ್ನಷ್ಟೂ ತುಪ್ಪ ಸುರಿದ ಹಾಗೆ ಆಗಿದೆ. ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ ಸಹ. ಓರ್ಹಾನ್ ಅವರ ಕಾಮೆಂಟ್‌ನಲ್ಲಿ ಅವರು ಈಗಾಗಲೇ ತಮ್ಮ ರೂಮರ್ಡ್ ಗರ್ಲ್‌ಫ್ರೆಂಡ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ,