ರಾತ್ರಿ ಪಾರ್ಟಿಯಲ್ಲಿ Janhvi Kapoor Ananya Panday; ಮುತ್ತಿದ್ದ ಜನ

Published : May 16, 2022, 06:17 PM IST

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಸ್ಟಾರ್ ಕಿಡ್ಸ್‌ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಸ್ಟಾರ್ ಮಕ್ಕಳು ಮುಂಬೈನಲ್ಲಿ ಲೇಟ್ ನೈಟ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯೂ ಇದೇ ರೀತಿಯ ಘಟನೆ ನಡೆದಿದೆ. ವಾಸ್ತವವಾಗಿ, ಅನನ್ಯಾ ಪಾಂಡೆ  (Ananya Panday)  ಮತ್ತು ಜಾನ್ವಿ ಕಪೂರ್  (Janhvi Kapoor) ಕಳೆದ ರಾತ್ರಿ ಪಾರ್ಟಿಗಾಗಿ ತಮ್ಮ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ತಲುಪಿದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.

PREV
16
ರಾತ್ರಿ ಪಾರ್ಟಿಯಲ್ಲಿ Janhvi Kapoor Ananya Panday; ಮುತ್ತಿದ್ದ ಜನ

 ಈ ಸಮಯದಲ್ಲಿ  ಅನನ್ಯಾ -ಜಾನ್ವಿ ಇಬ್ಬರೂ ತುಂಬಾ ಬಿಗಿಯಾದ ಉಡುಪನ್ನು ಧರಿಸಿದ್ದರು ಮತ್ತು ಸುತ್ತಲೂ ನಿಂತಿದ  ಜನರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಮುಗ್ಗಿಬಿದ್ದರು. ಇವರಿಬ್ಬರ ಹಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರಿಬ್ಬರೂ ಜನಗಳಿಂದ ಸುತ್ತುವರಿದಿದ್ದು, ಮುಂದೆ ಸಾಗುವುದೇ ಕಷ್ಟವಾಗಿದೆ.

26

ಅನನ್ಯಾ ಪಾಂಡೆ ತುಂಬಾ ಬೋಲ್ಡ್ ರೆಡ್ ಡ್ರೆಸ್ ತೊಟ್ಟಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಜಾನ್ವಿ ಕಪೂರ್ ಹಳದಿ ಬಣ್ಣದ  ಟಾಪ್ ಜೊತೆಗೆ ಹಸಿರು ಶಾರ್ಟ್ ಮತ್ತು ಟೈಟ್ ಸ್ಕರ್ಟ್ ಧರಿಸಿದ್ದಾರೆ.


 

36

ಜಾನ್ವಿ ಕಪೂರ್ ಅವರನ್ನು ನೋಡಿದ ಜನರನ್ನು ಕಂಟ್ರೋಲ್‌ ಮಾಡುವುದು ಕಷ್ಟವಾಗಿತ್ತು. ಅವರು  ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸಲು  ಮುತ್ತಿಕೊಂಡಿದ್ದರು. ಇದರಿಂದ ಜಾನ್ವಿ ಕೂಡ ಕೊಂಚ ಬೇಸರಗೊಂಡಂತೆ ಕಂಡರು. ಜನಸಮೂಹದಿಂದ ಅವರನ್ನು ರಕ್ಷಿಸಲು ನಟಿಯ ಬಾಡಿ ಗಾರ್ಡ್‌ಗಳಿಗೂ  ಕಷ್ಟವಾಗುತ್ತಿತ್ತು.

46

ಅನನ್ಯಾ ಪಾಂಡೆ ಕೆಂಪು ಹಾಟ್ ಡ್ರೆಸ್‌ನಲ್ಲಿ ತುಂಬಾ ಮಾದಕವಾಗಿ ಕಾಣುತ್ತಿದ್ದರು. ಅನನ್ಯಾ ಕೂಡ ಜನಸಂದಣಿಯಿಂದ ಸುತ್ತುವರೆದಿದ್ದರು, ಆದರೆ ಅವರು ನಗುತ್ತಿರುವಂತೆ ಕಂಡುಬಂದರು. ಅನನ್ಯಾ ಪಾಂಡೆ ಅವರಿಗೆ ಸಹ ಜನಸಂದಣಿಯಿಂದ ತಪ್ಪಿಸಿಕೊಳ್ಳಲು ಮತ್ತು ರೆಸ್ಟೋರೆಂಟ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.


 

56

ಈ ಸಂದರ್ಭದಲ್ಲಿ ಶನಯಾ ಕಪೂರ್  ಕೂಡ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಅವರು ಪ್ರಕಾಶಮಾನವಾದ ಲೆದರ್‌ ಬಣ್ಣದ ಉಡುಪನ್ನು ಧರಿಸಿದ್ದರು. ಅವರ ಡ್ರೆಸ್ ತುಂಬಾ ಬಿಗಿಯಾಗಿದ್ದರಿಂದ ನಡೆಯಲು ತೊಂದರೆಯಾಗುತ್ತಿತ್ತು.


 

66

ಈ ಸಂದರ್ಭದಲ್ಲಿ  ಸೈಫ್‌ ಆಲಿ ಖಾನ್‌ ಪುತ್ರ ಇಬ್ರಾಹಿಂ ಅಲಿ ಖಾನ್ ಕೂಡ ಕಾಣಿಸಿಕೊಂಡಿದ್ದರು. ಅವರ ಜೊತೆ  ಫೋಟೋಗಳನ್ನು ಕ್ಲಿಕ್ಕಿಸಲು ಜನರು ಎಲ್ಲಾ ಕಡೆಯಿಂದ ಅವನನ್ನು ಸುತ್ತುವರೆದರು.

Read more Photos on
click me!

Recommended Stories