ಜೈಲರ್ 2: ಥಿಯೇಟರ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ ಫ್ಯಾನ್ಸ್! ಬಂತು ಫಸ್ಟ್ ರಿವೀವ್! ಹೃತಿಕ್ ರೋಶನ್ ಏನು ಹೇಳಿದ್ರು?

Published : Oct 15, 2026, 10:03 AM ISTUpdated : Oct 15, 2026, 10:09 AM IST

Jailer 2 Movie Review Live Updatesailer 2 Movie Review Live Updates: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್-2' ಇಂದು ಬಿಡುಗಡೆಯಾಗುತ್ತಿದೆ. ರಜನಿ ಫ್ಯಾನ್ಸ್ ಇಂದು ಬೆಳಗಿನಿಂದಲೇ ಚಿತ್ರಮಂದಿರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜೈಲರ್ 2 ಸಿನಿಮಾದಲ್ಲಿ ಮಿಸ್ ಆಗಿರೋದೇನು?

PREV
15
Jailer 2: ಇಂದು ತೆರೆಗಪ್ಪಳಿಸಿದ ರಜನಿಯ ಜೈಲರ್ 2 ಸಿನಿಮಾ

Jailer 2 Movie Review Live Updates:ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್-2' ಇಂದು ಬಿಡುಗಡೆಯಾಗುತ್ತಿದೆ. ರಜನಿ ಫ್ಯಾನ್ಸ್ ಇಂದು ಬೆಳಗಿನಿಂದಲೇ ಚಿತ್ರಮಂದಿರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು FDFS ಸಿನಿಮಾ ನೋಡಲು ಅವಕಾಶ ಪಡೆದಿದ್ದಾರೆ. ಇಂದು ಬೆಳಗಿನ ಜಾವ 6 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ.

25
2026ರ ಬ್ಲಾಕ್ ಬಸ್ಟರ್ ಆಗುತ್ತಾ ಜೈಲರ್ 2?

ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಬೆಂಬಲ ಸೂಚಿಸಲು ಮೊದಲ ಪ್ರದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ. ಜೈಲರ್ 2 ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾವಾಗಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಏಕೆಂದರೆ 2026 ರಿಂದ ಇಲ್ಲಿವರೆಗೆ ಯಾವುದೇ ತಮಿಳು ಸಿನಿಮಾ ಬ್ಲಾಕ್ ಬಸ್ಟರ್ ಆಗಿಲ್ಲ. 2026ರಲ್ಲಿನ ಅತಿದೊಡ್ಡ ಹಿಟ್ ಸಿನಿಮಾ ಎಂದರೆ ಅದು ವಿಜಯ್ ಅವರ ಜನ ನಾಯಗನ್ ಮಾತ್ರ. ಅನಂತರ ಬಿಡುಗಡೆಯಾದ ಸೂರ್ಯ ಅಭಿನಯದ ಕರುಪ್ಪು. ಆದರೆ ಆ ಎರಡೂ ಚಿತ್ರಗಳು 350 ಕೋಟಿ ರೂಪಾಯಿ ಗಳಿಸಲು ಸಾಧ್ಯವಾಗಲಿಲ್ಲ.

35
ಜೈಲರ್ ಮೊದಲ ಭಾಗದಂತೆಯೇ ಜೈಲರ್ 2 ಬ್ಲಾಕ್ ಬಸ್ಟರ್ ಆಗುತ್ತಾ?

ಜೈಲರ್ 2 ಚಿತ್ರದ ಮೊದಲ ಭಾಗ 2023ರಲ್ಲಿ ಬಿಡುಗಡೆಯಾದ ಜೈಲರ್ ಚಿತ್ರ ಅತಿದೊಡ್ಡ ಹಿಟ್ ಚಿತ್ರಗಳಲ್ಲೊಂದೆನಿಸಿತ್ತು. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಜೈಲರ್ ಮೊದಲ ಭಾಗ ವಿಶ್ವಾದದ್ಯಂತ 604 ಕೋಟಿ ರೂ. ಬಾಚಿತ್ರು. ಅನಂತರ ರಜನಿಕಾಂತ್ 2024 ವೆಟ್ಟೈಯನ್ ಚಿತ್ರದಲ್ಲಿ ನಟಿಸಿದರಾದರು ಯಶಸ್ವಿಯಾಗಲಿಲ್ಲ. ಆ ಚಿತ್ರದಲ್ಲಿ ರಜನಿ ಅಮಿತಾಬ್ ಬಚ್ಚನ್‌ರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದರು. ವಿಶ್ವಾದಾದ್ಯಂತ 254 ಕೋಟಿ ರೂ. ಗಳಿಸಲಷ್ಟೇ ಸಾಧ್ಯವಾಯಿತು. ಆ ಬಳಿಕ 2025ರಲ್ಲಿ ರಜನಿ 'ಕೂಲಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾವೂ ವಿಶ್ವದಾದ್ಯಂತ 518 ಕೋಟಿ ರೂ. ಗಳಿಸುವ ಮೂಲಕ ಭಾರೀ ಹಿಟ್ ಆಯ್ತು.

45
ಜೈಲರ್ 2 ನಲ್ಲಿ 'ಕಾವಾಲಾ' ಖ್ಯಾತಿಯ ತಮನ್ನಾಳನ್ನ ಕೈಬಿಟ್ಟಿದ್ದೇಕೆ?

ಕೆಲವು ದಿನಗಳ ಹಿಂದೆ ಚಿತ್ರದ ಪ್ರಚಾರಕ್ಕಾಗಿ ನಡೆದ ಸೂಪರ್ ಶೋನಲ್ಲಿ ನಿರ್ದೇಶಕ ನೆಲ್ಸನ್ ಅವರು ತಮನ್ನಾ ಅವರನ್ನು ಜೈಲರ್ 2 ನಲ್ಲಿ ಸೇರಿಸಿಕೊಳ್ಳಲು ಬಯಸಿದ್ದು ನಿಜ ಎಂದು ರಜನಿಕಾಂತ್ ಹೇಳಿದ್ದರು. ಏಕೆಂದರೆ ಅವರ ವಿಶೇಷವಾಗಿ ಸದ್ದು ಮಾಡಿದ 'ಕಾವಾಲಾ' ಹಾಡು ಜೈಲರ್ ಮೊದಲ ಭಾಗ ಯಶಸ್ವಿಯಾಗಲು ಇದು ಒಂದು ಕಾರಣವಾಗಿತ್ತು. ಜೈಲರ್ 2 ನಲ್ಲಿ ಮಿಸ್ ಆಗಿರೋ ಏಕೈಕ ಅಂಶವೆಂದರೆ ಅದು ತಮನ್ನಾ ಇಲ್ಲದಿರುವುದು! ಎರಡನೇ ಭಾಗದಲ್ಲೂ ತಮನ್ನಾಳನ್ನು ಕೈಬಿಡುವುದು ಬೇಡ. ತಮನ್ನಾಗಾಗಿ ಒಂದು ಹಾಡನ್ನು ಇಟ್ಟುಕೊಳ್ಳುವಂತೆ ನಾನು ನೆಲ್ಸನ್‌ಗೆ ಹೇಳಿದ್ದೆ ಎಂದು ರಜನಿಕಾಂತ್ ಹೇಳಿದ್ದಾರೆ.

55
ತಮನ್ನಾ ಬಗ್ಗೆ ನೆಲ್ಸನ್ ಹೇಳಿದ ಆ ಮಾತಿಗೆ ರಜನಿ ಹೇಳಿದ್ದೇನು?

ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ನೆಲ್ಸನ್ 'ನಿಮಗೆ ಇಷ್ಟವಾಯ್ತು ಎಂದ ಮಾತ್ರಕ್ಕೆ ನಾನು ಮತ್ತೆ ಅದೇ ರೀತಿ ಹಾಡನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಸರ್' ಎಂದಿದ್ದರಂತೆ. ಆಗ ರಜನಿಕಾಂತ್, 'ನನಗೆ ಇಷ್ಟ ಅಂತಾ ನಾನು ಹೇಳಿಲ್ಲ. ನನಗೆ ಇಷ್ಟವಾದುದ್ದನ್ನು ಮಾಡಿದ್ರೆ ನಾನೇ ಅಪ್ರಸ್ತುತನಾಗಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದೆ ಪ್ರೇಕ್ಷಕರು ಇಷ್ಟಪಡುವುದನ್ನೇ ನಾನು ಮಾಡುತ್ತಿರುವುದರಿಂದ ನಾನಿನ್ನೂ ಈ ಕ್ಷೇತ್ರದಲ್ಲಿ ಮುಂದುವರಿದಿದ್ದೇನೆ' ಎಂದರಂತೆ. ಇದೀಗ ಜೈಲರ್ 2 ಚಿತ್ರದಲ್ಲಿ ನೋರಾ ಫತೇಹಿ ಬಿಂದಾಸ್ ಎಂಬ ವಿಶೇಷ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

ಜೈಲರ್ 2 ಚಿತ್ರವನ್ನ ನೆಲ್ಸನ್ ಕುಮಾರ್ ನಿರ್ದೇಶಿಸಿದ್ದು, ಸನ್ ಪಿಕ್ಚರ್ಸ್ ನಿರ್ಮಿಸಿದೆ. ರಜನಿಕಾಂತ್ ಜೊತೆಗೆ ಈ ಚಿತ್ರದಲ್ಲಿ ಎಸ್‌ಜೆ ಸೂರ್ಯ, ವಿಶೇಷ ವಿಭಿನ್ನ ಪಾತ್ರದಲ್ಲಿ ವಿದ್ಯಾ ಬಾಲನ್ ಕೂಡ ನಟಿಸಿದ್ದಾರೆ. ಇನ್ನುಳಿದದಂತೆ ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು, ರಮ್ಯ ಕೃಷ್ಣನ್, ಯೋಗಿ ಬಾಬು ಕೂಡ ನಟಿಸಿದ್ದಾರೆ. ಈ ಚಿತ್ರವು 165 ನಿಮಿಷಗಳ ರನ್ ಟೈಂನೊಂದಿಗೆ ಯು/ಎ 16+ ಪ್ರಮಾಣಪತ್ರ ಪಡೆದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories