ವಿವಾಹಿತೆಗೆ ಫಿದಾ, ಆಕೆಯ ಪತಿ ಮುಂದೆಯೇ ಪ್ರಪೋಸಲ್ ಇಟ್ಟ ಗಜಲ್ ಗಾಯಕ!

First Published | Feb 8, 2022, 6:23 PM IST

ಇಂದು ಗಜಲ್ ಸಾಮ್ರಾಟ್ ಎಂಬ ಖ್ಯಾತಿಯ ಜಗಜಿತ್ ಸಿಂಗ್ (Jagjit Singh) ಅವರ 81ನೇ ಜನ್ಮದಿನ.  ಫೆಬ್ರವರಿ 8, 1941 ರಂದು ಶ್ರೀಗಂಗಾನಗರದಲ್ಲಿ ಜನಿಸಿದ ಜಗಜಿತ್ ಸಿಂಗ್ ಅವರು ಗುಲ್ಜಾರ್, ನಿದಾ ಫಜ್ಲಿ, ಜಾವೇದ್ ಅಖ್ತರ್ ಸೇರಿದಂತೆ ಹಲವು ಕವಿಗಳ ಕವನಗಳಿಗೆ ಧ್ವನಿ ನೀಡಿದ್ದಾರೆ. ಜೊತೆಗೆ ಚಲನಚಿತ್ರಗಳಲ್ಲಿ ಸಹ ಅವರ ಧ್ವನಿಯ ಮಾಂತ್ರಿಕತೆಯನ್ನು ಪ್ರದರ್ಶಿಸಿದರು. ಗಜಲ್ ಹಾಡುವುದರ ಜೊತೆಗೆ ಅವರ ಪ್ರೇಮಕಥೆಯೂ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಮದುವೆಯಾದ ಮಹಿಳೆಗೆ ಮನಸೋತಿದ್ದರು ಜಗಜಿತ್ ಸಿಂಗ್ ಎಂದು ತಿಳಿದರೆ ಬಹುಶಃ  ಆಶ್ಚರ್ಯವಾಗಬಹುದು. ಒಂದು ದಿನ ಜಗಜಿತ್ ಸಿಂಗ್ ಅದೇ ಮಹಿಳೆಯ ಗಂಡನ ಬಳಿಗೆ ಹೋಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದರಂತೆ!

ಜಗಜಿತ್ ಸಿಂಗ್ ಅವರು ರಾಜಸ್ಥಾನದ ಗಂಗಾನಗರದಲ್ಲಿ ಜನಿಸಿದರು. ಆದರೆ, ಅವರ ಪೂರ್ವಜರ ಗ್ರಾಮ ಪಂಜಾಬ್‌ನ ರೋಪರ್ ಜಿಲ್ಲೆಯ ದಲ್ಲಾ ಗ್ರಾಮ. ಜಗಜಿತ್ ಸಿಂಗ್ ಹೆತ್ತವರು ಅವರು ಓದಿ ದೊಡ್ಡ ಅಧಿಕಾರಿಯಾಗಬೇಕೆಂದು ಬಯಸಿದ್ದರು, ಆದರೆ ಅದೃಷ್ಟವು ಅವರನ್ನು ಬೇರೆ ದಾರಿಗೆ ಕರೆದೊಯ್ದಿತು

ಜಗಜಿತ್ ಸಿಂಗ್ ಅವರ ಗಜಲ್‌ಗಳು ಎಷ್ಟು ಪ್ರಸಿದ್ಧವಾಗಿದ್ದವೋ, ಅವರ ಪ್ರೇಮ ಜೀವನವೂ ಅಷ್ಟೇ ಫೇಮಸ್‌.  ಜಗಜಿತ್ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಅವರು  ಅಧಿಕಾರಿಯಾದ ದೇಬು ಪ್ರಸಾದ್ ದತ್ತಾ ಅವರನ್ನು ವಿವಾಹವಾಗಿದ್ದರು. ಮುಂಬೈನಲ್ಲಿ ಚಿತ್ರಾ ವಾಸವಾಗಿದ್ದ ಎದುರಿನ ಮನೆಯಲ್ಲಿಯೇ ಗುಜರಾತಿ ಕುಟುಂಬವೊಂದು ವಾಸವಾಗಿತ್ತು. ಈ ಕುಟುಂಬಕ್ಕೆ ಜಗಜಿತ್ ಆಗಾಗ್ಗೆ ಭೇಟಿ ನೀಡುತ್ತಿದ್ದರು.

Tap to resize

ಅವರು ತಮ್ಮ ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಒಂದು ದಿನ ಧ್ವನಿ ಕೇಳಿ, ಜಗಜಿತ್‌ ಬಗ್ಗೆ ಚಿತ್ರಾ ವಿಚಾರಿಸಿದ್ದರು. ಜಗಜಿತ್‌ ಅವರ ಹಾಡುಗಳನ್ನು ಕೇಳಿದಾಗ ಅವರಿಗೇನೂ ಅಷ್ಟು ಮುದ ನೀಡಿರಲಿಲ್ಲ ಇವರ ಧ್ವನಿ. 

ಚಿತ್ರಾ ಸ್ವತಃ ಗಾಯಕಿ ಆಗಿದ್ದರು.. 1967 ರಲ್ಲಿ, ಜಗಜಿತ್ ಸಿಂಗ್ ಮತ್ತು ಚಿತ್ರಾ ಒಂದೇ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಮಾತುಕತೆ ಶುರುವಾಯಿತು. ರೆಕಾರ್ಡ್ ಮಾಡಿದ ನಂತರ ಚಿತ್ರಾ ಡ್ರೈವರ್ ಜಗ್ಜಿತ್‌ ಅವರನ್ನು  ಮನೆಗೆ ಡ್ರಾಪ್ ಮಾಡು ಎಂದು ಹೇಳಿದರು. ಅವರ ಮನೆಗೆ ಹೋಗುವಾಗ ಜಗಜಿತ್ ಅವರನ್ನು ಚಹಾಕ್ಕೂ ಆಹ್ವಾನಿಸಿದರು.

ಚಿತ್ರಾ ಚಹಾವನ್ನು ತಯಾರಿಸಿ ಕೊಟ್ಟರೆ, ಜಗಜಿತ್ ಚಿತ್ರ ಅವರಿಗಾಗಿಯೇ ಗಜಲ್ ಹಾಡಿದರು ಮತ್ತು ಚಿತ್ರಾ ತುಂಬಾ ಪ್ರಭಾವಿತರಾದರು. ಅದರ ನಂತರ ಇಬ್ಬರೂ ಡೇಟಿಂಗ್ (Dating) ಮಾಡಲು ಪ್ರಾರಂಭಿಸಿದರು. ಒಬ್ಬರನ್ನೊಬ್ಬರು ಇಷ್ಟ ಪಡತೊಡಗಿದರು.

ಅಷ್ಟರಲ್ಲಿ ಗಂಡ ಬೇರೆಯವರ ಜೊತೆ ಸಂಬಂಧ ಹೊಂದಿದ್ದ ಕಾರಣ ಚಿತ್ರಾ ಕೂಡ ಪತಿ ದೇಬುನಿಂದ ದೂರವಾದರು. ನಂತರ ಇಬ್ಬರೂ ಪರಸ್ಪರ  ಒಪ್ಪಿಗೆ ಪಡೆದು ವಿಚ್ಛೇದನ ಪಡೆದರು. 1970ರಲ್ಲಿ, ದೇಬು ಕೂಡ ಮರು ಮದುವೆಯಾದರು. ಜಗಜಿತ್ ಸ್ವತಃ ಚಿತ್ರಾ ಅವರ ಪತಿ ದೇಬು ಬಳಿಗೆ ಹೋಗಿ ಚಿತ್ರಾ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರಂತೆ. 
 

ಚಿತ್ರಾ ಅವರನ್ನು ಮದುವೆಯಾಗುವುದಾಗಿ ಹೇಳಿದ್ದ ಅವರು, ದೇಬು ಕೂಡ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಜಗಜಿತ್ ಸಿಂಗ್ 150ಕ್ಕೂ ಹೆಚ್ಚು ಆಲ್ಬಂಗಳನ್ನು ಮಾಡಿದ್ದಾರೆ. ಅವರು ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದರು. ಆದರೆ ಗಜಲ್ ಮತ್ತು ನಜ್ಮ್ ಅವರಿಗೆ ಜನಪ್ರಿಯತೆಯನ್ನು ನೀಡಿತು.

1990 ರಲ್ಲಿ, ಒಂದು ದುರಂತವು ಚಿತ್ರಾ ಸಿಂಗ್ ಮತ್ತು ಜಗಜಿತ್ ಸಿಂಗ್ ಅವರನ್ನು ಮೌನವಾಗಿಸಿತು. ಜಗಜಿತ್ ಮತ್ತು ಚಿತ್ರಾ ಅವರ ಪುತ್ರ ವಿವೇಕ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಈ ಕಾರಣದಿಂದಾಗಿ ಜಗಜಿತ್ ಸಿಂಗ್ ಆರು ತಿಂಗಳ ಕಾಲ ಸಂಪೂರ್ಣವಾಗಿ ಮೌನವಾದರು. ಆದರೆ ಚಿತ್ರಾ ಸಿಂಗ್ ಈ ಅಪಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಹಾಡುವುದನ್ನು ನಿಲ್ಲಿಸಿದರು. ಜಗಜಿತ್ ಸಿಂಗ್ ಅಕ್ಟೋಬರ್ 10, 2011 ರಂದು ನಿಧನರಾದರು.

Latest Videos

click me!