ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಂತೆ ನಟ,ನಟಿಯರು ತಮ್ಮದೇ ನಿರ್ಮಾಣ ಸಂಸ್ಥೆ ತೆರೆದು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಾರೆ. ಅದೇ ಹಾದಿಯಲ್ಲಿ ಈಗ ಬಾಲಿವುಡ್ ನಟ ಸಂಜಯ್ ದತ್ ಇದ್ದಾರೆ.
ವರ್ಷಗಳ ಕಾಲ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿರುವ ನಟ, ಖಳನಾಯಕ, ನಿರ್ದೇಶಕ ಈಗ ನಿರ್ಮಾಪಕರಾಗಲು ಹೊರಟಿದಾದರೆ. ತಮ್ಮ ನಿರ್ಮಾಣ ಸಂಸ್ಥೆ ಶೀರ್ಷಿಕೆಗೆ ಅನೌನ್ಸ್ ಮಾಡಿದ್ದಾರೆ.
ಹೌದು! ಸಂಜಯ್ ದತ್ ತಮ್ಮ ನಿರ್ಮಾಣ ಸಂಸ್ಥೆಗೆ ಥ್ರೀ ಡೈಮೆಶ್ಷನ್ ಮೋಷನ್ ಪಿಚ್ಚರ್ ಎಂದು ಹೆಸರಿಟ್ಟಿದ್ದಾರೆ. ಈ ಸಂಸ್ಥೆಯಿಂದ ಆಗಲೇ ಮೊದಲ ಸಿನಿಮಾವನ್ನೂ ಕೂಡ ರಿವೀಲ್ ಮಾಡಿದ್ದಾರೆ.
ಸಿದ್ಧಾರ್ಥ್ ಸಜ್ದೇವ್ ನಿರ್ದೇಶನ ಮಾಡುತ್ತಿರುವ ದಿ ವರ್ಜಿನ್ ಟ್ರೀ ಸಿನಿಮಾವನ್ನು ಸಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ನಾಲ್ಕು ಹೊಸ ಕಲಾವಿದರನ್ನು ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ.
ನಿರ್ಮಾಣದ ಜೊತೆ ಸಂಜಯ್ ತಮ್ಮ ಸಿನಿಮಾ ಕೆಲಸಗಳಲ್ಲೂ ತೊಡಗಿಸಿಕೊಳ್ಳಲಿದ್ದಾರೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2ರಲ್ಲಿ ಅಧೀರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರರಂಗಕ್ಕೆ ನಾನು ಕಾಲಿಟ್ಟಾಗ ಹೀರೋಯಿಸಮ್‌ನಿಂದ ಶುರು ಮಾಡಿದ್ದು, ಆನಂತರ ಹೀರೋಯಿಕ್ ರೂಲ್ ಆಯ್ತು ಆಮೇಲೆ ಮಾಸ್ ಲವ್ ಆಯ್ತು. ಈಗ ಎಲ್ಲವೂ ಇದೆ. ನಾನು ಎಲ್ಲಾ ರೀತಿಯ ಜಾನಲ್‌ಗಳನ್ನು ನೋಡಿರುವೆ. ಈಗ ಅದನ್ನು ನನ್ನ ಸಂಸ್ಥೆ ಮೂಲಕ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿರುವೆ,' ಎಂದು ದತ್ ವೆರೈಟಿ ವೆಬ್ ಜೊತೆ ಮಾತನಾಡಿದ್ದಾರೆ.