ಸುಕೇಶ್ ಚಂದ್ರಶೇಖರ್ ಜೊತೆಗಿನ ಜಾಕ್ವೆಲಿನ್ ಫರ್ನಾಂಡೀಸ್ ಅವರ ಅಫೋಟೋ ವಿವಾದಗಳನ್ನು ಹುಟ್ಟುಹಾಕಿದೆ. ನಟಿ ಕೆಲವು ವಾರಗಳ ಹಿಂದೆ ವಂಚಕ ಸುಕೇಶ್ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ನಂತರ ಫೋಟೋ ವೈರಲ್ ಆಗಿದೆ.
ಇಂಡಿಯಾ ಟುಡೇ ಶೇರ್ ಮಾಡಿರುವ ಫೋಟೋದಲ್ಲಿ ಸುಕೇಶ್ ಜಾಕ್ವೆಲಿನ್ ಕೆನ್ನೆಗೆ ಮುತ್ತು ನೀಡಿದ್ದು, ಇಬ್ಬರೂ ಮಿರರ್ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಈ ವರ್ಷದ ಏಪ್ರಿಲ್-ಜೂನ್ ನಡುವೆ ಅವರು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಾಗ ಫೋಟೋವನ್ನು ತೆಗೆದುಕೊಳ್ಳಲಾಗಿದೆ.
ಫೋಟೋದಲ್ಲಿ ಕಾಣುತ್ತಿರುವ ಫೋನ್‌ನಲ್ಲಿಯೇ ಅವರು ವಂಚನೆ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಅಕ್ಟೋಬರ್‌ನಲ್ಲಿ ಸುಕೇಶ್ ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿದ್ದರು ನಟಿ.
ವಿಚಾರಣೆಗೆ ಕರೆಯಲ್ಪಟ್ಟ ನಂತರ ನಟಿ ಜಾಕ್ವೆಲಿನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ನಟಿ ಸುಕೇಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಯ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದರು.
ಜಾಕ್ವೆಲಿನ್ ಅವರ ವಕ್ತಾರರು ಹೇಳಿಕೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸಾಕ್ಷಿ ಹೇಳಲು ಇಡಿ ಕರೆ ಮಾಡುತ್ತಿದೆ. ನಟಿ ತನ್ನ ಹೇಳಿಕೆಗಳನ್ನು ಸರಿಯಾಗಿ ದಾಖಲಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ತನಿಖೆಯಲ್ಲಿ ಏಜೆನ್ಸಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದಿದ್ದರು.
ಚಂದ್ರಶೇಖರ್ ಪರ ವಕೀಲ ಅನಂತ್ ಮಲಿಕ್ ಅವರು, ಜಾಕ್ವೆಲಿನ್ ಮತ್ತು ಸುಕೇಶ್ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದರು. ಬಾಲಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಚಂದ್ರಶೇಖರ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ.
ರಾಜಕಾರಣಿಯೊಬ್ಬರ ಸಂಬಂಧಿ ಎಂದು ಬಿಂಬಿಸಿಕೊಂಡು 100ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿ 75 ಕೋಟಿ ರೂಪಾಯಿ ವಂಚಿಸಿದ್ದಾರೆ. ಏಷ್ಯಾನೆಟ್ ನ್ಯೂಸ್ ಪ್ರಕಾರ ಚಂದ್ರಶೇಖರ್ ಮತ್ತು ಅವರ ಪತ್ರಕರ್ತೆ ಗೆಳತಿ ಲೀನಾ ಮರಿಯಾ ಪಾಲ್ ಅವರನ್ನು 2011 ರಲ್ಲಿ ಚೆನ್ನೈ ಮೂಲದ ಕೆನರಾ ಬ್ಯಾಂಕ್ ವಂಚಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಚಂದ್ರಶೇಖರ್ ಮಾತ್ರ ಬದಲಾಗಿರಲಿಲ್ಲ.
ಕುಖ್ಯಾತ ಚುನಾವಣಾ ಆಯೋಗದ (ಇಸಿ) ಲಂಚ ಪ್ರಕರಣದಲ್ಲಿ ಚಂದ್ರಶೇಖರ್ ಅವರನ್ನು ಏಪ್ರಿಲ್ 2017 ರಲ್ಲಿ ಹೋಟೆಲ್‌ನಿಂದ ಬಂಧಿಸಿದ ನಂತರ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಎಐಎಡಿಎಂಕೆ ಎರಡು ಎಲೆ ಚುನಾವಣಾ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಇಸಿ ಅಧಿಕಾರಿಗಳಿಗೆ ಲಂಚ ನೀಡಲು ಅವರು ಎಐಎಡಿಎಂಕೆ (ಅಮ್ಮ) ನಾಯಕ ಟಿಟಿವಿ ದಿನಕರನ್ ಅವರಿಂದ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.