ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ಗೆ ಹೆಚ್ಚಿದ ಸಂಕಷ್ಟ; ನಟಿಯ ಸ್ಟೈಲಿಸ್ಟ್‌ನಿಂದ ಹೊಸ ಮಾಹಿತಿ ರಿವೀಲ್‌

First Published | Sep 24, 2022, 3:48 PM IST

ಸುಕೇಶ್ ಚಂದ್ರಶೇಖರ್ (Sukesh Chandrashekar) 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಪ್ರಕರಣದಲ್ಲಿ   ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EoW) ಸೆಪ್ಟೆಂಬರ್ 21 ರ ಬುಧವಾರ ನಟಿಯ ಫ್ಯಾಷನ್ ಡಿಸೈನರ್ ಲಿಪಾಕ್ಷಿಯನ್ನು (Leepakshi Ellawadi)7 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಮತ್ತು  ಹೊಸ  ವಿಷಯಗಳು ಬಹಿರಂಗವಾಗಿದೆ. ಈಗ ಹೊರ ಬಂದ ಸುದ್ದಿಯ  ಜಾಕ್ವೆಲಿನ್ ಫರ್ನಾಂಡಿಸ್‌ ಅವರ ಸ್ಟೈಲಿಸ್ಟ್ ಸುಕೇಶ್ ಬಳಿ 3 ಕೋಟಿ ತೆಗೆದುಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.  

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಸ್ಟೈಲಿಸ್ಟ್/ಡಿಸೈನರ್ ಲಿಪಾಕ್ಷಿ ಎಳವಾಡಿ ಅವರನ್ನು ಇತ್ತೀಚೆಗೆ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ವೇಳೆ ಲಿಪಾಕ್ಷಿ ಸುಕೇಶ್‌ ಚಂದ್ರಶೇಖರ್‌ನಿಂದ 3 ಕೋಟಿ ರೂಪಾಯಿ ಪಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. 

ಅಚ್ಚರಿಯ ಸಂಗತಿಯೆಂದರೆ ಲಿಪಾಕ್ಷಿ ಜಾಕ್ವೆಲಿನ್‌ ಅವರ ಬಟ್ಟೆ ಮತ್ತು ಉಡುಗೊರೆಗಾಗಿ ಈ ಹಣವನ್ನು ಖರ್ಚು ಮಾಡಿದ್ದಾರೆ. ಆದಾಗ್ಯೂ, ಸುಕೇಶ್ ಬಂಧನದ ನಂತರ ಜಾಕ್ವೆಲಿನ್  ಜೊತೆಯ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿದ್ದಾರೆ ಎಂದು ಡಿಸೈನರ್ ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು.
 

Tap to resize

ಈ ವಿಚಾರಣೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ  ಲಿಪಾಕ್ಷಿ ಎಳವಾಡಿ ಅವರು ಸುಕೇಶ್ ಚಂದ್ರಶೇಖರ್ ಅವರಿಂದ 3 ಕೋಟಿ ರೂಪಾಯಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಜಾಕ್ವೆಲಿನ್ ಅವರ ನೆಚ್ಚಿನ ಬ್ರ್ಯಾಂಡ್ ಮತ್ತು ಸ್ಟೈಲ್‌ ಬಗ್ಗೆ ವಿಚಾರಿಸಲು ಸುಕೇಶ್ ಕಳೆದ ವರ್ಷ ತನ್ನನ್ನು ಸಂಪರ್ಕಿಸಿದ್ದರು ಎಂದು ಲಿಪಾಕ್ಷಿ ಹೇಳಿದ್ದಾರೆ. 

ಇದಾದ ನಂತರ ಸುಕೇಶ್   ಆಕೆಗೆ 3 ಕೋಟಿ ರೂಪಾಯಿ ನೀಡಿ ನಟಿಯ ನೆಚ್ಚಿನ ಬಟ್ಟೆಗಳನ್ನು ಖರೀದಿಸುವಂತೆ ಕೇಳಿದ್ದಾರೆ. ಆದರೆ ಸುಕೇಶ್ ಅರೆಸ್ಟ್ ಆದ ತಕ್ಷಣ ಜಾಕ್ವೆಲಿನ್ ಅವರಿಂದ  ದೂರ ಸರಿದಿದ್ದರು. ಈ ಸಂದರ್ಭದಲ್ಲಿ ಲಿಪಾಕ್ಷಿ ಅವರು ಸುಕೇಶ್‌ನಿಂದ ತೆಗೆದುಕೊಂಡ ಹಣವನ್ನು ನಟಿಗೆ ಉಡುಗೊರೆ ನೀಡಲು ಖರ್ಚು ಮಾಡಿದ್ದಾರೆ ಎಂದು ಹೇಳಿದರು. 
 

ಡಿಸೈನರ್ ಪ್ರಕಾರ, ಜಾಕ್ವೆಲಿನ್ ಸುಕೇಶ್ ಚಂದ್ರಶೇಖರ್ ಬಂಧನದ ಬಗ್ಗೆ ತಿಳಿದಾಗ, ಅವರು ಅವನೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದರು. ಗಮನಾರ್ಹವಾಗಿ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಖೇಶ್ ಚಂದ್ರಶೇಖರ್ ಅವರ ಅನೇಕ ನಿಕಟ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ. ಅವರಿಬ್ಬರೂ ಒಮ್ಮೆ ಸಂಬಂಧದಲ್ಲಿದ್ದರು ಎಂದು ನಂಬಲಾಗಿದೆ.

215 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೆಸರನ್ನು ಇಡಿ ತೆಗೆದುಕೊಂಡಾಗ ಇಡೀ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಕೇಶ್‌ನ ಸುಲಿಗೆ ಬಗ್ಗೆ ಜಾಕ್ವೆಲಿನ್‌ಗೆ ತಿಳಿದಿತ್ತು ಎಂದು ಕೇಂದ್ರ ಸಂಸ್ಥೆ ನಂಬುತ್ತದೆ.

ಸುಕೇಶ್ ಜೊತೆಗಿನ ಜಾಕ್ವೆಲಿನ್ ಸಂಬಂಧದಿಂದ ಆಕೆಯ ಕುಟುಂಬ ಮತ್ತು ಸ್ನೇಹಿತರಿಗೆ ಲಾಭವಾಗಿದೆ ಎಂದು ಇಡಿ ಸಲ್ಲಿಸಿದ ಆರೋಪಪಟ್ಟಿ ಹೇಳುತ್ತದೆ. ಆದರೆ ಜಾಕ್ವೆಲಿನ್ ಪ್ರಕಾರ, ಈ ಸಂಪೂರ್ಣ ವಿಷಯದಲ್ಲಿ ಅವರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ.

Latest Videos

click me!