ಜಾಕ್ವೆಲಿನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಮಿಚೆಲ್ ಮೊರೊನ್ ಜೊತೆ ಶೂಟಿಂಗ್‌ !

First Published | Oct 16, 2021, 5:48 PM IST

ಬಾಲಿವುಡ್‌ (Bollywood) ನಟಿ ಜಾಕ್ವೆಲಿನ್‌ ಫರ್ನಾಂಡೀಸ್ (Jacqueline Fernandez) ಈ ದಿನಗಳಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಗಾಂಧಿ ಜಯಂತಿ (Gandhi Jayanthi) ದಿನ ಮುಂಬೈನ ಬೀಚ್‌ ಕ್ಲೀನ್‌ ಮಾಡುವ ಮೂಲಕ ಸುದ್ದಿ ಮಾಡಿದ್ದ ಜಾಕಿ  ಈಗ ಮಿಚೆಲ್ ಮೊರೊನ್ (Michele Morrone) ಜೊತೆ ದುಬೈನಲ್ಲಿ ( Dubai) ಒಂದು ಪ್ರಾಜೆಕ್ಟ್‌ಗಾಗಿ ಶೂಟಿಂಗ್‌ ನೆಡೆಸುತ್ತಿದ್ದಾರೆ. ಇಟಲಿಯನ್ ನಟನ ಜೊತೆಯ ಜಾಕ್ವೆಲಿನ್‌  ಫೋಟೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್‌ ಆಗಿದೆ. 

ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಇಟಲಿಯ ನಟ (Italy Actor) ಮಿಚೆಲ್ ಮೊರೊನ್ ಒಂದು ಪ್ರಾಜೆಕ್ಟ್‌ಗಾಗಿ ಒಟ್ಟಾಗಿದ್ದಾರೆ. ಇದು ನಟಿಯ ಅಭಿಮಾನಿಗಳಿಗೆ ಭಾರೀ ಸುದ್ದಿಯಾಗಿದೆ. ಈ ಜೋಡಿಯು ಪ್ರಾಜೆಕ್ಟ್‌ವೊಂದರ ಚಿತ್ರೀಕರಣವನ್ನು ದುಬೈನಲ್ಲಿ ಮಾಡುತ್ತಿದ್ದಾರೆ.

ಜಾಕ್ವೆಲಿನ್ ಅವರ ಫ್ಯಾನ್‌ ಪೇಜ್‌ (Fan Page)  ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, 365 ಡೇಸ್ ಖ್ಯಾತಿಯ ನಟ ಮಿಚೆಲ್ ಮೊರೊನ್ ಜೊತೆಯ ಫೋಟೋಶೂಟ್ (Photo Shoot) ನಲ್ಲಿ ಬಾಲಿವುಡ್‌ ದಿವಾರನ್ನು ಕಾಣಬಹುದು. 

Tap to resize

ವೀಡಿಯೊದಲ್ಲಿ, ಫೋಟೋಗಳಿಗೆ ಪೋಸ್‌ ಮಾಡಿರುವ ಇಬ್ಬರೂ ತುಂಬಾ ಮಾದಕವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಅವರು ನಿಜವಾಗಿಯೂ ಉತ್ತಮ ಜೋಡಿಯಾಗಿ ಹೊರ ಹೊಮ್ಮುವುರಲ್ಲಿ ಅನುಮಾನವಿಲ್ಲ  ಜಾಕ್ವೆಲಿನ್ ಗೋಲ್ಡನ್ ಹೈ ಸ್ಲಿಟ್ ಗೌನ್ ಧರಿಸಿದ್ದಾರೆ ಮತ್ತು ಮೈಕೆಲ್ ಕಪ್ಪು ಸೂಟ್ ಧರಿಸಿದ್ದಾರೆ.  

ಜಾಕ್ವೆಲಿನ್ ಫರ್ನಾಂಡೀಸ್ ಅವರ ಆಪ್ತ ಮೂಲಗಳ ಪ್ರಕಾರ, ನಟಿ ಒಂದೆರಡು ದಿನಗಳ ಹಿಂದೆ ದುಬೈಗೆ (Dubai) ಹಾರಿದ್ದಾರೆ. ಅವರು  ತಮ್ಮ ಜೋಳಿಗೆಯಲ್ಲಿ  ದೊಡ್ಡ ಪ್ರಾಜೆಕ್ಟ್‌ಗಳ ದೀರ್ಘ ಪಟ್ಟಿಯನ್ನು ಹೊಂದಿರುವ ನಟಿ ನಿರಂತರವಾಗಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
 

ಜಾಕ್ವೆಲಿನ್ ಪ್ರಸ್ತುತ ಇಟಾಲಿಯನ್ ನಟ ಮೈಕೆಲ್ ಮೊರೊನ್ ಜೊತೆ ದುಬೈನಲ್ಲಿ ಒಂದು ಪ್ರಾಜೆಕ್ಟಾಗಿ ಚಿತ್ರೀಕರಣದಲ್ಲಿದ್ದಾರೆ. ಮಿಚೆಲ್ ಮೊರೊನ್ ಭಾರತೀಯ ನಟಿಯೊಂದಿಗೆ ಪ್ರಾಜೆಕ್ಟ್‌ಗೆ ಸಹಕರಿಸುತ್ತಿರುವುದು ಇದೇ ಮೊದಲು. ಈಗಾಗಲೇ ಇವೆರಡರ ನಡುವಿನ ಕೆಮಿಸ್ಟ್ರಿ ಸಾಕಷ್ಟು  ಕೂತುಹಲ ಮೂಡಿಸಿದೆ.

ಪಾಜೆಕ್ಟ್‌ನ ಅಂತಿಮ ರಿಸೆಲ್ಟ್‌ ನೋಡಲು ಫ್ಯಾನ್ಸ್‌ (Fans) ಕಾಯುತ್ತಿದ್ದು, ಅವರಿಬ್ಬರೂ ಒಟ್ಟಿಗೆ ಬೆರಗುಗೊಳಿತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.ಕೆಲಸದ ಮುಂಭಾಗದಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಕೊನೆಯದಾಗಿ ಭೂತ್  ಪೋಲಿಸ್‌ನಲ್ಲಿ ಕಾಣಿಸಿಕೊಂಡರು. ಮುಂದಿನ ದಿನಗಳಲ್ಲಿ ಅವರು  ಸರ್ಕಸ್ ಮತ್ತು ರಾಮಸೇತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಮೈಕೆಲ್ ಮೊರೊನ್ ಇಟಾಲಿಯನ್ ನಟರಾಗಿದ್ದು, ನೆಟ್‌ಫ್ಲಿಕ್ಸ್ ಒರಿಜಿನಲ್ 365 ಡೇಸ್‌ನಲ್ಲಿ Don Massimo ಪಾತ್ರವನ್ನು ಮಾಡಿದ ನಂತರ ಖ್ಯಾತಿ ಪಡೆದರು. ಕರಣ್ ಜೋಹರ್ (Karan Johar) ದೊಡ್ಡ ಬಾಲಿವುಡ್ ಪ್ರಾಜೆಕ್ಟ್ (Bollywood Project) ಗಾಗಿ ನಟನನ್ನು ಆಯ್ಕೆ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. 

ಆದರೆ ಇದುವರೆಗೂ  ಯಾವುದನ್ನೂ ಸಹ ಫಿಕ್ಸ್ ಮಾಡಿಲ್ಲ ಎಂದು ವರದಿಯಾಗಿದೆ. ಆದರೆ ಮೈಕೆಲ್ ಮೊರೊನ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಕರಣ್ ಜೋಹರ್ ಅವರನ್ನು ಫಾಲೋ ಮಾಡಿದ್ದಾರೆ. ಇಬ್ಬರ ನಡುವಿನ ನಂಬಲಾಗದ ಕೆಮಿಸ್ಟ್ರಿ  ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Latest Videos

click me!