ಡ್ರಗ್ಸ್ ಪಾರ್ಟಿಗೆ ದಾಳಿ ಮಾಡಿದ NCB ಖಡಕ್ ಆಫೀಸರ್ ಸಮೀರ್‌ ಪತ್ನಿ ಬಾಲಿವುಡ್‌ನ ಬ್ಯೂಟಿಫುಲ್ ನಟಿ

Published : Oct 16, 2021, 05:32 PM ISTUpdated : Oct 16, 2021, 05:51 PM IST

ಸಮೀರ್ ವಾಂಖೆಡೆ ಅವರ ಬ್ಯೂಟಿಫುಲ್ ಪತ್ನಿ ಇವರು ಪತಿ ದೇಶ ಸೇವೆಯಲ್ಲಿ, ಪತ್ನಿ ಬಾಲಿವುಡ್‌ನಲ್ಲಿ

PREV
110
ಡ್ರಗ್ಸ್ ಪಾರ್ಟಿಗೆ ದಾಳಿ ಮಾಡಿದ NCB ಖಡಕ್ ಆಫೀಸರ್ ಸಮೀರ್‌ ಪತ್ನಿ ಬಾಲಿವುಡ್‌ನ ಬ್ಯೂಟಿಫುಲ್ ನಟಿ

ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಮಗನನ್ನು ಬಂಧಿಸಿದ ನಂತರ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸುದ್ದಿಯಾಗಿದ್ದಾರೆ. ದೇಶಾದ್ಯಂತ ಸುದ್ದಿಯಾದ ಅಧಿಕಾರಿಯ ಪತ್ನಿ ಬಾಲಿವುಡ್ ನಟಿ ಎಂಬುದು ನಿಮಗೆ ಗೊತ್ತೇ ?

210

2004 ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಅಧಿಕಾರಿಯಾದ ವಾಂಖೇಡೆ(Sameer Wankhede) ಕರ್ತವ್ಯದಲ್ಲಿರುವಾಗ ಸೆಲೆಬ್ರಿಟಿಗಳೊಂದಿಗೆ ವ್ಯವಹರಿಸುವ ಅಪಾರ ಅನುಭವ ಹೊಂದಿದ್ದಾರೆ. ಅವರು 2013 ರಲ್ಲಿ ಮಿಕಾ ಸಿಂಗ್ ಅವರನ್ನು ಅಘೋಷಿತ ವಿದೇಶಿ ಕರೆನ್ಸಿಯೊಂದಿಗೆ ಬಂಧಿಸಿದರು

310

ಅವರು ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಆಸ್ತಿ ಮೇಲೆ ದಾಳಿ ನಡೆಸಿದ್ದಾರೆ. ವಾಂಖೆಡೆಗೆ ಮರಾಠಿ ನಟಿನನ್ನು ಮದುವೆಯಾಗಿದ್ದು ಮನರಂಜನಾ ಉದ್ಯಮದೊಂದಿಗೆ ವೈಯಕ್ತಿಕ ಸಂಪರ್ಕವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ

410

ಕ್ರಾಂತಿ ರೆಡ್ಕರ್(Kranti redkar) ಮುಂಬೈ(Mumbai) ಮೂಲದ ನಟಿರಾಗಿದ್ದು, 2000 ರಲ್ಲಿ ಮರಾಠಿ ಚಲನಚಿತ್ರ ಸೂನ್ ಅಸವಿ ಆಶಿ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟರು.

510

ಪ್ರಕಾಶ್ ಅವರ 2003 ರ ಹಿಟ್ ಚಿತ್ರ ಗಂಗಾಜಲ್ ನಲ್ಲಿ ಅಜಯ್ ದೇವಗನ್ ಮತ್ತು ಗ್ರೇಸಿ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ ಚಿಕ್ಕ ಪಾತ್ರದಿಂದ ಹಿಂದಿ ಚಲನಚಿತ್ರ ಪ್ರೇಕ್ಷಕರು ಸಮೀರ್ ಪತ್ನಿಯನ್ನು ತಿಳಿದಿರಬಹುದು.

610

ರೆಡ್ಕರ್ ತನ್ನ ಅಸಾಧಾರಣ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಮರಾಠಿ ಚಿತ್ರ ಜಾತ್ರಾ: ಹ್ಯಾಲಗಡ್ ರೆ ತ್ಯಲಗಡ್‌ನಲ್ಲಿ ಕೊಂಬಡಿ ಪಳಲಿ ಎಂಬ ಹಿಟ್ ಹಾಡನ್ನು ಪ್ರದರ್ಶಿಸಿದ್ದಾರೆ.

710

ರೆಡ್ಕರ್ ಸಹ ಶಹನ್ಪನ್ ದೇಗಾ ದೇವಾ, ಶಿಕ್ಷಣಾಚ್ಯಾ ಐಚಾ ಘೋ, ಖೋ ಖೋ ಮತ್ತು ಮರ್ಡರ್ ಮೇಸ್ಟ್ರಿಯಂತಹ ಇತರ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

810

2015 ರಲ್ಲಿ, ಊರ್ಮಿಳಾ ಕನಿತ್ಕರ್ ಮತ್ತು ಜಿತೇಂದ್ರ ಜೋಶಿ ನಟಿಸಿದ ಕಾಕನ್ ಚಿತ್ರದ ಮೂಲಕ ರೆಡ್ಕರ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.

910

ನೊಬೆಲ್ ಪ್ರಶಸ್ತಿ ವಿಜೇತ ಮದರ್ ತೆರೇಸಾ ಬರೆದ ಪತ್ರವನ್ನು ಆಧರಿಸಿ ಜೂಲಿಯೆಟ್ ಸ್ಟೀವನ್ಸನ್ ನಟಿಸಿದ 2014 ರ ಅಮೇರಿಕನ್ ಚಲನಚಿತ್ರ ದಿ ಲೆಟರ್ಸ್ ನ ಭಾಗವಾಗಿದ್ದರು ರೆಡ್ಕರ್.

1010

ಕ್ರಾಂತಿ ರೆಡ್ಕರ್ 2017 ರಲ್ಲಿ ಸಮೀರ್ ವಾಂಖೆಡೆ ಅವರನ್ನು ವಿವಾಹವಾದರು. ದಂಪತಿಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ, ವಾಂಖೇಡೆ ಮೇಲೆ 60 ಡ್ರಗ್ ಪೆಡ್ಲರ್‌ಗಳ ಗುಂಪೊಂದು ದಾಳಿ ನಡೆಸಿದ್ದು, ಅವರ ಸಹೋದ್ಯೋಗಿಗಳು ಗಂಭೀರವಾಗಿ ಗಾಯಗೊಂಡಿದ್ದರು. 

click me!

Recommended Stories