ಟೈಗರ್‌ ಶ್ರಾಫ್‌ ಹೊಸ ಸೀ ಸೈಡ್‌ ಅಪಾರ್ಟ್‌ಮೆಂಟ್‌ ಹೇಗಿದೆ ನೋಡಿ!

First Published | Aug 26, 2021, 6:31 PM IST

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಹಲವು ಸ್ಟಾರ್ಸ್‌ ಹೊಸ ಮನೆ ಖರೀದಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ ಮತ್ತು ಜಾನ್ವಿ ಕಪೂರ್ ಸೇರಿ ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ಮನೆಗಳನ್ನು ಖರೀದಿಸಿದ್ದಾರೆ. ಈಗ ಈ ಪಟ್ಟಿಗೆ ಟೈಗರ್ ಶ್ರಾಫ್ ಹೆಸರೂ ಕೂಡ ಸೇರಿದೆ. ಟೈಗರ್‌ ಮುಂಬೈನ ಅತ್ಯಂತ ದುಬಾರಿ ಪ್ರದೇಶ ರುಸ್ತೋಮ್‌ಜಿ ಪ್ಯಾರಾಮೌಂಟ್‌ನಲ್ಲಿ ತಮ್ಮ ಹೊಸ ಮನೆಯನ್ನು ತೆಗೆದುಕೊಂಡಿದ್ದಾರೆ. ಟೈಗರ್‌ ಮನೆಯ ಪೋಟೋಗಳು ಸಖತ್‌ ವೈರಲ್‌ ಆಗಿವೆ.

ಜಾಕಿ ಶ್ರಾಫ್ ಈ ಹಿಂದೆ ಕಾರ್ಟ್ ರಸ್ತೆಯ ಬಿಲ್ಡಿಂಗ್‌ನಲ್ಲಿ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವರ ಮಗ ಟೈಗರ್ ಶ್ರಾಫ್, ಮಗಳು ಕೃಷ್ಣ ಶ್ರಾಫ್ ಮತ್ತು ಪತ್ನಿ ಆಯೇಷಾ ಶ್ರಾಫ್ ಅವರೊಂದಿಗೆ ಹೊಸ ಮನೆಗೆ
ಶಿಫ್ಟ್‌ ಆಗಿದ್ದಾರೆ. 

ಜಾಕಿ ಶ್ರಾಫ್‌ ಪುತ್ರ ಟೈಗರ್‌ ಹೊಸ ಮನೆಯನ್ನು ಖರೀದಿಸಿರುವ ಬಗ್ಗೆ ವರದಿಯಾಗಿದೆ. ಮುಂಬೈನ ದುಬಾರಿ ಪ್ರದೇಶವಾದ ರುಸ್ತೋಮ್‌ಜಿ ಪ್ಯಾರಾಮೌಂಟ್‌ನಲ್ಲಿ ಟೈಗರ್‌ ಹೊಸ ಮನೆ ಇದೆ. 8 ಬೆಡ್‌ರೂಮ್‌ಗಳ ಈ ಅಪಾರ್ಟ್‌ಮೆಂಟ್‌ನ ಪ್ರತಿಯೊಂದು ಮೂಲೆಯೂ ತುಂಬ ಸುಂದರವಾಗಿದೆ.

Tap to resize

ಸುಮಾರು 8 ಬೆಡ್‌ ರೂಮ್‌ಗಳನ್ನು ಹೊಂದಿರುವ  ಕಡಲತೀರದ  ಟೈಗರ್‌ ಅವರ ಮನೆ ತುಂಬಾ ಸುಂದರವಾಗಿದೆ. ಮನೆಯ ಇಂಟರೀಯರ್‌ ಯಾವುದೇ ಫೈವ್‌ ಸ್ಟಾರ್‌ ಹೋಟಲ್‌ಗಿಂತ ಕಡಿಮೆ ಇಲ್ಲ. ಅಲ್ಲದೇ ಬಾಡಿಗೆ ಮನೆಯಲ್ಲಿದ್ದ ಪೋಷಕರನ್ನು ಸ್ವಂತ ಮನೆಗೆ ಕರೆದುಕೊಂಡ ಹೋದ ಸಂಭ್ರಮ ಈ ನಟನಿಗೆ.

ಈ ಐಷಾರಾಮಿ ಅಪಾರ್ಟ್‌ಮೆಂಟ್‌ನಿಂದ ಅರೇಬಿಯನ್ ಸಮುದ್ರದ ನೋಟವನ್ನು ಕಾಣಬಹುದು. ಟೈಗರ್ ಅಪಾರ್ಟ್ಮೆಂಟ್‌ನಲ್ಲಿ ಎಲ್ಲವೂ ವಿಶೇಷವಾಗಿದೆ. ಮನೆಯನ್ನು ಒಳಗಿನಿಂದ ಎಷ್ಟು ಸುಂದರವಾಗಿ ಡೆಕೊರೇಟ್‌
ಮಾಡಲಾಗಿದೆಯೋ, ಹೊರಗಿನ ಲುಕ್‌ ಕೂಡ ಅಷ್ಟೇ ಸುಂದರವಾಗಿದೆ

ಮನೆಯ ಬಾಲ್ಕನಿ ಪ್ರದೇಶ ತುಂಬಾ ವಿಶಾಲವಾಗಿದೆ. ಇಲ್ಲಿ ಉತ್ತಮ ಸಿಟ್ಟಿಂಗ್‌ ವ್ಯವಸ್ಥೆ ಕೂಡ ಇದೆ. ಮನೆಯ ಒಳ ಭಾಗದಲ್ಲಿ ಬಣ್ಣ ಬಣ್ಣದ ವರ್ಣ ಚಿತ್ರಗಳನ್ನು ಗೋಡೆಗಳ ಮೇಲೆ ಕಾಣಬಹುದು. ಅಪಾರ್ಟ್‌ಮೆಂಟ್‌ಗಳಲ್ಲಿ ಜಿಮ್, ಆಟದ ಕೊಠಡಿ, ಈಜುಕೊಳದಂತಹ ಸೌಲಭ್ಯಗಳಿವೆ. 

ವರ್ಕ್ ಔಟ್ ಮಾಡಲು ಬೇಕಾದ ಎಲ್ಲಾ ಸಲಕರಣೆಗಳು ಜಿಮ್‌ನಲ್ಲಿ ಲಭ್ಯವಿದೆ. ಟೈಗರ್ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದಕ್ಕೆ ಅಗತ್ಯವಿರೋ ಎಲ್ಲಾ ಪರಿಕರಗಳೂ ಈ ಜಿಮ್ಮಲ್ಲಿದೆ.

ಟೈಗರ್‌ ಹೊಸ ಮನೆಯ ಹೊರ ಭಾಗದಲ್ಲಿ ಫಿಟ್ನೆಸ್  ಜಿಮ್, ಕೃತಕ ರಾಕ್ ಕ್ಲೈಂಬಿಂಗ್ ಪ್ರದೇಶವನ್ನು ಸಹ ಹೊಂದಿದೆ. ನಕ್ಷತ್ರಗಳನ್ನು ನೋಡುವ ಡೆಕ್ ಕೂಡ ಇದೆ. ಒಟ್ಟಿನಲ್ಲಿ ಪರ್ಫೆಕ್ಟ್ ಎನ್ನಬಹುದಾದ ಮನೆಗೆ ಶಿಫ್ಟ್ ಆಗಿದ್ದಾರೆ ಟೈಗರ್.

ಟೈಗರ್ ಕೊನೆಯದಾಗಿ ಭಾಗಿ 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾಗಳು ಭಾಗಿ 4 ಮತ್ತು ಗಣಪತ್. ಇತ್ತೀಚೆಗೆ ಗಣಪತ್‌ನ ಹೊಸ ಟೀಸರ್ ಬಿಡುಗಡೆಯಾಯಿತು. ಈ ಸಿನಿಮಾ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Latest Videos

click me!