ಸಾವಿನ ಕಥೆಯ ಹಾರರ್ ಸಿನ್ಮಾ ನೋಡೋಕೆ ಎಂಟೆದೆ ಗುಂಡಿಗೆ ಬೇಕು; ದೆವ್ವ ಪಕ್ಕದಲ್ಲಿಯೇ ಬಂದಂತೆ ಆಗುತ್ತೆ!

Published : Nov 28, 2025, 07:32 PM IST

Malayalam Cinema: ಹೊಸ ಮಲಯಾಳಂ ಹಾರರ್ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಐಷಾರಾಮಿ ಮನೆಯಲ್ಲಿ ಶವವೊಂದು ಕಾಣಿಸಿಕೊಂಡ ನಂತರ ನಡೆಯುವ ವಿಚಿತ್ರ ಘಟನೆಗಳ ಸುತ್ತ ಈ ಕಥೆ ಸಾಗುತ್ತದೆ, ಮತ್ತು ಈ ಚಿತ್ರ ಶೀಘ್ರದಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

PREV
16
ಹಾರರ್ ಸಿನಿಮಾ

ಇತ್ತೀಚೆಗೆ ಹಾರರ್ ಸಿನಿಮಾಗಳು ಜನರನ್ನು ಆಕರ್ಷಿಸುತ್ತಿರೋದು ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಹಾರರ್ ಕಥೆಯುಳ್ಳ ಸಿನಿಮಾಗಳು ಬಂದರೂ ಟೊಳ್ಳಾದ ಕಥೆ ಮತ್ತು ಅತಿಯಾದ ವಿಎಫ್‌ಎಕ್ಸ್‌ನಿಂದ ವೀಕ್ಷಕರಿಗೆ ಬೇಸರವನ್ನುಂಟು ಮಾಡುತ್ತವೆ. ಈ ವರ್ಷ ಅಕ್ಟೋಬರ್ 31ರಂದು ಬಿಡುಗಡೆಯಾದ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದುಕೊಂಡು ಪ್ರದರ್ಶನ ಕಂಡಿತ್ತು.

26
7.4 ರೇಟಿಂಗ್ ಪಡೆದ ಚಿತ್ರ

ಐಎಂಡಿಬಿ ಈ ಸಿನಿಮಾಗೆ 7.4 ರೇಟಿಂಗ್ ನೀಡಿದ್ದು, ಚಿತ್ರ ನೋಡಲು ಎಂಟೆದೆ ಗುಂಡಿಗೆ ಬೇಕು ಎಂದು ವೀಕ್ಷಕರು ಹೇಳುತ್ತಾರೆ. ಸಿನಿಮಾ ನೋಡಿದ ನಂತರ ಚಿತ್ರದಲ್ಲಿನ ಪಾತ್ರಗಳು ಅಕ್ಕಪಕ್ಕವೇ ಕುಳಿತ ಅನುಭವವಾಗುತ್ತವೆ ಎಂಬುವುದು ವೀಕ್ಷಕರ ಅಭಿಪ್ರಾಯವಾಗಿದೆ. ಈ ಹೊಸ ಸಿನಿಮಾ ಹಾರರ್ ಸಿನಿ ರಸಿಕರ ಗಮನ ಸೆಳೆದಿದ್ದು, ಸದ್ಯದಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

36
ಮಲಯಾಳಂನ ಸಿನಿಮಾ

ಮಲಯಾಳಂನ ಸಿನಿಮಾಗಳು ನೈಜತೆ ಹತ್ತಿರವಾಗಿರುತ್ತವೆ. ಇದೀಗ ಮಲಯಾಳಂ ಹಾರರ್ ಥ್ರಿಲ್ಲರ್ 'ಡೈಸ್ ಇರಿಯಾ' ಸಿನಿಮಾ ಪ್ರೇಕ್ಷಕರ ಜೊತೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ನಟ ಪ್ರಣವ್ ಮೋಹನ್ ಲಾಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಹಿಂದೆ 'ಹೃದಯಂ' ಸಿನಿಮಾದ ಮೂಲಕ ಪ್ರಣವ್ ಮೋಹನ್ ಲಾಲ್ ಎಲ್ಲರ ಗಮನ ಸೆಳೆದಿದ್ದರು. ಚಿತ್ರದ ಕಥೆ ಏನು ಎಂಬುದನ್ನು ನೋಡೋಣ ಬನ್ನಿ.

46
ಚಿತ್ರದ ಕಥೆ ಏನು?

ಐಷಾರಾಮಿ ಕುಟುಂಬದಲ್ಲಿ ಜನಿಸಿ ವಿಲಾಸಿಮಯ ಜೀವನ ನಡೆಸುತ್ತಿರುವ ಯುವಕನ ಕಥೆ ಇದಾಗಿದೆ. ತಂದೆ ನಿರ್ಮಿಸಿದ ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿರುತ್ತಾನೆ. ಒಮ್ಮೆ ಈ ಮನೆಯ ಮೇಲ್ಭಾಗದಲ್ಲಿ ಶವವೊಂದು ಕಾಣಿಸಿಕೊಳ್ಳುತ್ತದೆ. ಇಲ್ಲಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲಾರಂಭಿಸುತ್ತವೆ. ಈ ಮನೆಯಲ್ಲಿ ದೆವ್ವವಿದೆ ಅಂತಾ ಗೊತ್ತಾದಾಗ ಸಿನಿಮಾ ಕುತೂಹಲ ಹೆಚ್ಚುಂಟು ಮಾಡುತ್ತದೆ. ಮುಂದೆ ಏನಾಗುತ್ತೆ? ಯುವಕ ಮನೆಯಿಂದ ಹೇಗೆ ಹೊರಗೆ ಬರುತ್ತಾನೆ ಎಂಬುವುದೇ ಸಿನಿಮಾದ ಒನ್ ಲೈನ್ ಕಥೆ.

56
ಚಿತ್ರತಂಡದ ಮಾಹಿತಿ

ಭೂತಕಾಲಂ ಮತ್ತು ಬ್ರಹ್ಮಯುಗಂ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ರಾಹುಲ್ ಸದಾಶಿವನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಣವ್ ಜೊತೆಯಲ್ಲಿ ಸುಶ್ಮಿತಾ ಭಟ್, ಶಿನ್ ಟಾಮ್ ಚಾಕೊ, ಗಿಬಿನ್ ಗೋಪಿನಾಥ್ ಸೇರಿದಂಯೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿನ ಚಿಕ್ಕ ಚಿಕ್ಕ ಪಾತ್ರಗಳು ನೋಡುಗರ ಗಮನವನ್ನು ಸೆಳೆಯುತ್ತವೆ. ವೈಎನ್‌ಒಟಿ ಸ್ಟುಡಿಯೋಸ್ ಮತ್ತು ನೈಟ್ ಶಿಫ್ಟ್ ಸ್ಟುಡಿಯೋಸ್ ಜಂಟಿಯಾಗಿ 'ಡೈಸ್ ಇರಿಯಾ' ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: Kadhalikka Neramillai Movie Review: ಮದ್ವೆಯಾಗದೇ ಮಗು ಮಾಡಿಕೊಂಡವಳಿಗೆ ಪ್ರೇಮಿ ಸಿಕ್ಕಾಗ!

66
ಯಾವ OTT?

ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿರುವ ಸಿನಿಮಾ ಸದ್ಯದಲ್ಲಿಯೇ OTTಗೆ ಬರಲಿದೆ. ಕೆಲವು ವರದಿಗಳ ಪ್ರಕಾರ ಜಿಯೋ ಹಾಟ್‌ಸ್ಟಾರ್ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗಿ 25ಕ್ಕೂ ದಿನಗಳು ಕಳೆದಿದ್ದು, ಜನರು ಚಿತ್ರಮಂದಿರದತ್ತ ಬರುತ್ತಿದೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ವೀಕ್ಷರಿಗೆ ಡೈಸ್ ಏರಿಯಾ ಓಟಿಟಿಯಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: 'ಕಾಂತ' ವಿಮರ್ಶೆ ಬಂತು ನೋಡಿ.. ಹೇಗಿದೆ ದುಲ್ಕರ್ ಸಲ್ಮಾನ್ ಸಿನಿಮಾ? ಇಲ್ಲಿದೆ ಫುಲ್ ಡೀಟೇಲ್ಸ್

Read more Photos on
click me!

Recommended Stories