ಬಾಹುಬಲಿ (Bahubali) ಫೇಮ್‌ನ ತಮನ್ನಾ ಭಾಟಿಯಾ ತೆಲುಗು ಚಿತ್ರರಂಗದ (Tollywod) ಪ್ರಸಿದ್ಧ ನಟಿಯರಲ್ಲಿ ಒಬ್ಬರು. ತಮನ್ನಾ ಇತ್ತೀಚೆಗೆ ಸೀತಿಮಾರ್ ಸಿನಿಮಾದಲ್ಲಿ ಗೋಪಿಚಂದ್ ಜೊತೆ ಕಾಣಿಸಿಕೊಂಡರು ಮತ್ತು ಪ್ರಸ್ತುತ ರಿತೇಶ್ ದೇಶ್ಮುಖ್ ಜೊತೆ ಪ್ಲಾನ್ ಎ ಪ್ಲಾನ್ ಬಿ ಎಂಬ ವೆಬ್ ಸರಣಿ (Web Series)ಯಲ್ಲಿ ನಿರತರಾಗಿದ್ದಾರೆ.
ನಟಿ (Actress) ತಮನ್ನಾ ಇತ್ತೀಚೆಗೆ ತನ್ನ ಆರೋಗ್ಯ (Health) ಸಮಸ್ಯೆಯ ಬಗ್ಗೆ ಬಹಿರಂಗಪಡಿಸಿದರು. ಅದನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಅವರು ಅದರ ಬಗ್ಗೆ ಕೆಲವು ವಿವರಗಳನ್ನು ನೀಡಿದ್ದರು.
ಅತಿಯಾದ ವರ್ಕೌಟ್ (Workout)ಗಳು, ಒತ್ತಡದ (Stress) ಕಾರಣದಿಂದ ಅವರು ಈಗ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಮನ್ನಾ ಹೇಳಿಕೊಂಡಿದ್ದಾರೆ. ಉತ್ತಮ ಆಹಾರ ಪದ್ಧತಿ (Food System)ಯನ್ನು ಹೊಂದಿದ್ದಾರೆ ಮತ್ತು ಸಾವಯವ ಆಹಾರಕ್ಕೆ ಬದಲಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಗ್ರೇಟ್ಆಂದ್ರಾ.ಕಾಮ್ ಜೊತೆಗಿನ ಸಂದರ್ಶನದಲ್ಲಿ, ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ತಾನು ವರ್ಕೌಟ್ ರೂಟಿನ್ ಸಹ ನಿರ್ವಹಿಸುತ್ತಿದ್ದೇನೆ. ಅದರ ಜೊತೆಗೆ ತಮನ್ನಾ ಅವರು ಕರಿದ ಆಹಾರ (Fried Food) ಸೇವನೆಯನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.
ನಟಿ ತನ್ನ ವೃತ್ತಿಜೀವನದ (Career) ಪ್ರಾರಂಭದಲ್ಲಿ ಅರಿಶಿನ, ಆಮ್ಲಾ ಜ್ಯೂಸ್, ಕೀರಾ ಜ್ಯೂಸ್, ಬಾದಾಮಿ ಹಾಲು, ಏಳನೀರು ಮುಂತಾದವುಗಳ ಜೊತೆ ನೋನಿ ಜ್ಯೂಸ್‌ಗಳಂತಹ ಲಿಕ್ವಿಡ್ ಡಯಟ್ (Diet) ಅನ್ನು ಫಾಲೋ ಮಾಡುತ್ತಿದ್ದೆ, ಎಂದು ಹೇಳಿ ಕೊಂಡಿದ್ದಾರೆ.
ತಮನ್ನಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಫ್ಯಾನ್ ಫಾಲೋವರ್ಸ್ (Fan Followers) ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಅವರು ಆಗಾಗ ತಮ್ಮ ಫೋಟೋಶೂಟ್ (Photo Shoot)ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಇತ್ತೀಚೆಗೆ ನಟಿ ಇಂಡಿಯನ್ ವೆಲ್ನೆಸ್, ಬ್ಯಾಕ್ ಟು ದಿ ರೂಟ್ಸ್ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಿದರು.
ಸೆಲೆಬ್ರಿಟಿ ಲೈಫ್‌ಸ್ಟೈಲ್ (Celebrity Lifestyle) ತರಬೇತುದಾರ ಲ್ಯೂಕ್ ಕೌಟಿನ್ಹೋ ಜೊತೆಯಲ್ಲಿ ತಮನ್ನಾ ಈ ಪುಸ್ತಕವನ್ನು ಬರೆದಿದ್ದಾರೆ. ಕಳೆದ ವರ್ಷ, ನಟಿಗೆ ಕೋವಿಡ್ 19 ಪಾಸಿಟಿವ್ (Covid19 Positive) ಆಗಿತ್ತು. ತಮನ್ನಾ ಇತ್ತೀಚೆಗೆ F3 ನಲ್ಲಿ ವೆಂಕಟೇಶ್ ದಗ್ಗುಬಾಟಿ, ವರುಣ್ ತೇಜ್ ಮತ್ತು ಮೆಹ್ರೀನ್ ಪಿರ್ಜಾಡಾ ಜೊತೆ ಕೆಲಸ ಮಾಡಲು ಆರಂಭಿಸಿದ್ದಾರೆ.