ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಅವರ ಮಗಳು ಇನಾಯಾಗೆ ಬುಧವಾರ ನಾಲ್ಕು ವರ್ಷ ತುಂಬಿತು. ಸೋಹಾ ಮಗಳಿಗಾಗಿ ಗ್ರ್ಯಾಂಡ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಕರೀನಾ ಕಪೂರ್ ಖಾನ್(Kareena Kapoor Khan), ಅವರ ಮಕ್ಕಳಾದ ತೈಮೂರ್ ಮತ್ತು ಜೆಹ್ ಮತ್ತು ಸೈಫ್ ಅಲಿ ಖಾನ್ ಅವರ ಹಿರಿಯ ಮಗ ಇಬ್ರಾಹಿಂ ಸೇರಿದಂತೆ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು. ನಟ ನೇಹಾ ಧೂಪಿಯಾ ಕೂಡ ಹಾಜರಿದ್ದರು.