ರಾಕಿ ಭಾಯ್‌ 'Yash19' ಸಿನಿಮಾ ಹೀರೋಯಿನ್‌ ಸಮಂತಾ, ಮೃಣಾಲ್, ಶ್ರದ್ಧಾ ಅಲ್ಲ..ಮತ್ಯಾರು?

Published : Sep 17, 2023, 03:47 PM ISTUpdated : Sep 19, 2023, 12:11 PM IST

ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾದಲ್ಲಿ ಅಭಿನಯಿಸೋಕೆ ಆಸೆ ಪಡ್ತಿದ್ದಾರೆ. ಇದೀಗ ಯಶ್ 19ನೇ ಸಿನಿಮಾ ಬರ್ತಿದೆ. ಈ ಸಿನಿಮಾದ ಹೀರೋಯಿನ್ ಯಾರಾಗ್ತಾರೆ ಅನ್ನೋ ದೊಡ್ಡ ಕುತೂಹಲ ಎಲ್ಲರಲ್ಲಿದೆ.

PREV
18
ರಾಕಿ ಭಾಯ್‌ 'Yash19' ಸಿನಿಮಾ ಹೀರೋಯಿನ್‌ ಸಮಂತಾ, ಮೃಣಾಲ್, ಶ್ರದ್ಧಾ ಅಲ್ಲ..ಮತ್ಯಾರು?

ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾದ ಬಗ್ಗೆ ಫ್ಯಾನ್ಸ್‌ ವಲಯದಲ್ಲಿ  ಚರ್ಚೆ ಜೋರಾಗಿದೆ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾದಲ್ಲಿ ಅಭಿನಯಿಸೋಕೆ ಆಸೆ ಪಡ್ತಿದ್ದಾರೆ. ಇದೀಗ ಯಶ್19ನೇ ಸಿನಿಮಾ ಬರ್ತಿದೆ. ಈ ಸಿನಿಮಾದ ಹೀರೋಯಿನ್ ಯಾರಾಗ್ತಾರೆ ಅನ್ನೋ ದೊಡ್ಡ ಕುತೂಹಲ ಎಲ್ಲರಲ್ಲಿದೆ.

28

ಕೆಜಿಎಫ್‌ನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಹಿಂದೆ ಬಿದ್ದ ರಾಕಿ ಈಗ 19ನೇ ಸಿನಿಮಾದಲ್ಲಿ ಗೋವಾ ಡ್ರಗ್ಸ್ ಸ್ಮಗ್ಲಿಂಗ್ ಸ್ಟೋರಿಯನ್ನ ಪಿನ್ ಟು ಪಿನ್ ಬಿಚ್ಚಿಡಲಿದ್ದಾರೆ. ಈ ಸ್ಟೋರಿಯನ್ನ ಕೆತ್ತಿ ತಿದ್ದಿ ತೀಡಿ ಒಂದು ರೂಪ ಕೊಟ್ಟವ್ರು ಮಲೆಯಾಳಂನ ಟಾಪ್ ಡೈರೆಕ್ಟರ್ ಗೀತು ಮೋಹನ್ ದಾಸ್. ಇದೀಗ ಈಗ ಡ್ರಗ್ಸ್ ಸ್ಮಗ್ಲಿಂಗ್ ಸ್ಟೋರಿಗೆ ಹೀರೋಯಿನ್ ಯಾರು ಅನ್ನೋ ಪ್ರಶ್ನೆ ಮೂಡಿದೆ. 

38

ಯಶ್‌-19 ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣ ಮಾಡಲಿದೆ ಎನ್ನುವುದು ವೈರಲ್‌ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನು ಏನು ಅಪ್ಟೇಟ್‌ ಲಭ್ಯವಾಗದಿದ್ರೂ ನೆಟ್ಟಿಗರು 'ಯಶ್19'ನ್ನು ಮತ್ತೆ ಟ್ರೆಂಡ್‌ ಆಗಿಸಿದ್ದಾರೆ. ಗೀತು ಮೋಹನ್‌ ದಾಸ್‌ ಅವರ ಸಿನಿಮಾಕ್ಕೆ ನಾಯಕಿ ಯಾರು ಆಗುತ್ತಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ಪೂಜಾ ಹೆಗ್ಡೆ ಯಶ್‌ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ  ಎಂಟ್ರಿ ಕೊಡ್ತಾರೆ ಅನ್ನೋ ವಿಚಾರ ಸದ್ದು ಮಾಡಿತ್ತು.

48

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹೆಸರು ಸಹ ರೇಸ್‌ನಲ್ಲಿದೆ. ಈ ಹಿಂದೆ ಸೌತ್‌ನ ಪ್ರಭಾಸ್ ಅಭಿನಯದ ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್‌ ಅಭಿನಯಿಸಿದ್ದರು. 

58

'ಸೀತಾ ರಾಮಂ' ಮೂಲಕ ಫೇಮಸ್ ಆದ ಮೃಣಾಲ್ ಠಾಕೂರ್ ಯಶ್‌ ಸಿನಿಮಾದಲ್ಲಿ ನಾಯಕಿ ಆಗಿ ಆಯ್ಕೆ ಆಗುವ ರೇಸ್‌ ನಲ್ಲಿದ್ದಾರೆ. ಈ ನಾಯಕಿಯರ ಜೊತೆಗೆ ಕಿಯಾರಾ ಅಡ್ವಾಣಿ ಅಥವಾ ಶ್ರೀನಿಧಿ ಶೆಟ್ಟಿ ಅವರು ನಾಯಕಿ ಆಗಲಿದ್ದಾರೆ ಎಂದು ಫ್ಯಾನ್ಸ್‌ ಗಳು ಟ್ವೀಟ್‌ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸೌತ್ ಸಿನಿಮಾಗಳ ಮುದ್ದು ಮುಖದ ಚೆಲುವೆ ಸಂಯುಕ್ತಾ ಮೆನನ್ ಸಹ ಕೇಳಿ ಬರ್ತಿದೆ

68

ಸಂಯುಕ್ತಾ ಮೆನನ್ ಸದ್ಯ ದಕ್ಷಿಣಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ಚೆಲುವೆ.2016ರಿಂದ ಮಲೆಯಾಳಂ ಸಿನಿ ರಂಗದಲ್ಲಿ ಬೆಳಗುತ್ತಿರೋ ಸಂಯುಕ್ತಾ ತೆಲುಗು, ತಮಿಳು ಚಿತ್ರರಂಗಕ್ಕೆ ಚಿರಪರಿಚಿತ ಹೆಸರು.  ವಾತಿ ಸಿನಿಮಾದಲ್ಲಿ ಧನುಷ್​ಗೆ ಜೋಡಿಯಾಗಿ ಹಳ್ಳಿಯ ಟೀಚರ್ ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. 

78

ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿರೋ ಸಂಯುಕ್ತಾ ಮೆನನ್‌ ರಾಕಿಯ ನೆಕ್ಸ್ಟ್‌ ಮೂವಿಗೆ ಹೀರೋಯಿನ್ ಆಗ್ತಾರೆ ಅನ್ನೋದು ಲೇಟೆಸ್ಟ್ ಮಾಹಿತಿ. ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್​ನಲ್ಲಿ ಕೂಡಾ ತುಂಬಾ ಸಿಂಪಲ್ ಆಗಿರುವ ಸಂಯುಕ್ತಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೌತ್​ನಲ್ಲಿ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ.

88

ಗೀತು ಮೋಹನ್‌ ದಾಸ್‌ ಅವರ ಯಶ್‌ 19 ಸಿನಿಮಾದಲ್ಲಿ ಟೊವಿನೋ ಥಾಮಸ್‌, ಆಸಿಫ್ ಅಲಿ, ರಾಣಾ ದಗ್ಗುಬಾಟಿ ಮತ್ತು ಜಾನ್ ಅಬ್ರಹಾಂ ಸಹ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.  ಆದರೆ ಈ ಎಲ್ಲದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಅಪ್ಡೇಡ್‌ ಸಿಗುವ ಸಾಧ್ಯತೆಯಿದೆ.

Read more Photos on
click me!

Recommended Stories