ಈ ಬಾಲಿವುಡ್‌ ನಟಿಗೆ ಸೋಶಿಯಲ್‌ ಮೀಡಿಯಾ ಟ್ರೋಲ್ ಭಯನಾ?

First Published | May 7, 2021, 4:58 PM IST

ಕೃತಿ ಸನೋನ್‌ ಬಾಲಿವುಡ್‌ನ ಯಂಗ್‌ ಆಂಡ್‌ ಟ್ಯಾಲೆಂಟ್ಡೆಡ್‌ ನಟಿಯರಲ್ಲಿ ಒಬ್ಬರು. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇದ್ದಾರೆ ಈವರು. ಆದರೆ ಸೋಶಿಯಲ್‌ ಮೀಡಿಯಾದ ನೆಗೆಟಿವ್‌ ಕಾಮೆಂಟ್ಸ್‌ಗೆ ಹೆದರುತ್ತಾರೆ ಈ ನಟಿ. ಇತ್ತೀಚೆಗೆ ಟ್ರೋಲಿಂಗ್‌, ಕಾಮೆಂಟ್ಸ್‌ ಬಗ್ಗೆ ಇವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಕೃತಿ. 
 

ಬಾಲಿವುಡ್‌ ನಟಿ ಕೃತಿ ಸನೋನ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇದ್ದಾರೆ.
ರೆಗ್ಯುಲರ್‌ ಕೃತಿ ತಮ್ಮ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇವರು ಶೇರ್‌ ಮಾಡುವ ಫೋಟೋಗಳನ್ನು ಫ್ಯಾನ್ಸ್‌ ತುಂಬಾ ಇಷ್ಷಪಡುತ್ತಾರೆ.
Tap to resize

ಆದರೆ ಇವರಿಗೆ ಸೋಶಿಯಲ್‌ ಮೀಡಿಯಾ ಟ್ರೋಲಿಂಗ್‌ ಅಂದರೆ ಭಯ ಅಂತೆ. ಆ ಬಗ್ಗೆ ಸ್ವತ: ನಟಿಯೇ ಮಾತಾನಾಡಿದ್ದಾರೆ.
ಒಬ್ಬ ಪಬ್ಲಿಕ್ ಫಿಗರ್‌ ಆಗಿ ನಟಿ ಎದುರಿಸುವ ಜಡ್ಜ್‌ಮೆಂಟ್‌ ಮತ್ತು ಟೀಕೆಗಳ ಬಗ್ಗೆ ಇತ್ತೀಚೆಗೆ ಮಾತಾನಾಡಿದ್ದಾರೆ.
ಸೋಶಿಯಲ್‌ ಮೀಡಿಯಾದಲ್ಲಿ ಜನರಿಗೆ ಟಾಲೆರೆನ್ಸ್‌ ಇಲ್ಲ ಮತ್ತು ಪರಸ್ಟರ ಜಡ್ಜ್‌ ಮಾಡುತ್ತಾರೆ ಎಂದು ಕೃತಿ ಹೇಳುತ್ತಾರೆ.
ಒಬ್ಬರ ಅಭಿಪ್ರಾಯ ಮತ್ತು ಯೋಚನೆಯನ್ನು ವ್ಯಕ್ತಪಡಿಸುವಲ್ಲಿ ತುಂಬಾ ದೊಡ್ಡ ರಿಸ್ಕ್‌ ಇದೆ ಹಾಗೂ ಅದಕ್ಕೆ ಜನರು ಏನು ಕಾಮೆಂಟ್‌ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎನ್ನುತ್ತಾರೆ ನಟಿ.
ಸೋಶಿಯಲ್‌ ಮೀಡಿಯಾದಲ್ಲಿ ತಾಳ್ಮೆಗೆ ಜಾಗವಿಲ್ಲ ಮತ್ತು ಜನರು ಯಾವಾಗಲೂ ಪರಿಣಾಮದ ಬಗ್ಗೆ ಯೋಚಿಸದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಉತ್ಸುಕರಾಗಿದ್ದಾರೆ ಎಂದು ಇನ್ನಷ್ಟು ಹೇಳಿದ ಸನೋನ್‌.
ನಾನು ಮೊದಲು ತುಂಬಾ ಮುಕ್ತವಾಗಿ ನನ್ನ ಯೋಚನೆಗಳನ್ನು ವ್ಯಕ್ತಪಡಿಸುತ್ತಿದೆ. ಆದರೆ ಈಗ ನಾನು ಏನು ಮಾತಾನಾಡುತ್ತೇನೆ ಎಂಬುದರ ಬಗ್ಗೆ ಹೆಚ್ಚು ಕೇರ್‌ಫುಲ್‌ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ
ಕೃತಿ ಸೆನೋನ್‌ ರಾಜ್‌ಕುಮಾರ್‌ ರಾವ್‌ ಜೊತೆ ದಿನೇಶ್‌ ವಿಜನ್‌ ಅವರ ಇನ್ನೂ ಹೆಸರಿಡದ ಸಿನಿಮಾದಲ್ಲಿ ನೆಕ್ಟ್‌ ಕಾಣಿಸಿಕೊಳ್ಳಲಿದ್ದಾರೆ.
ವರುಣ್‌ ಧವನ್‌ ಜೊತೆ ಭೇಡಿಯಾ ಮತ್ತು ಅಕ್ಷಯ್‌ ಕುಮಾರ್‌ ಜೊತೆ ಬಚ್ಚನ್‌ ಪಾಂಡೆ ಹಾಗೂ ಸರೋಗೆಸಿ ವಿಷಯದ ಆಧಾರಿತ ಸಿನಿಮಾ ಮಿಮಿಯನ್ನು ತಮ್ಮ ಪಾಕೇಟ್‌ನಲ್ಲಿ ಹೊಂದಿದ್ದಾರೆ ಕೃತಿ ಸನೋನ್‌.

Latest Videos

click me!