ಸಂಕಷ್ಟದಲ್ಲಿ Karan Johar, ಪಾಕ್ ಗಾಯಕನಿಂದ ಬೆದರಿಕೆ!

Published : May 23, 2022, 05:10 PM IST

ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ (Anil Kapoor) ಮತ್ತು ನೀತು ಕಪೂರ್ (Neetu Kapoor) ಪ್ರಮುಖ ಪಾತ್ರಗಳಲ್ಲಿ ಕರಣ್ ಜೋಹರ್ (Karan Johar) ಅವರ ಕೌಟುಂಬಿಕ ಹಾಸ್ಯ-ನಾಟಕ ಜಗ್ ಜಗ್ ಜೀಯೋ (Jug Jugg Jeeyo) ಅನ್ನು ಧರ್ಮ ಪ್ರೊಡಕ್ಷನ್ಸ್ (Dharma Productions) ನಿರ್ಮಿಸಿದೆ. ಇದರ ಟ್ರೇಲರ್‌ ಮೇ 22ರ ಭಾನುವಾರದಂದು ಬಿಡುಗಡೆಯಾಯಿತು. ಜನಪ್ರಿಯ ಪಂಜಾಬಿ ಗೀತೆ ನಾಚ್ ಪಂಜಾಬನ್ ಟ್ರೈಲರ್‌ನ ಮುಖ್ಯಾಂಶಗಳಲ್ಲಿ ಒಂದು. ಈ ಹಾಡಿನ ಮೂಲ ಗಾಯಕ ಪಾಕಿಸ್ತಾನದ ಅಬ್ರಾರ್ ಉಲ್ ಹಕ್  (Abrar Ul Haq) ನಿರ್ಮಾಪಕರಿಗೆ  ಬೆದರಿಕೆ ಹಾಕಿದ್ದಾರೆ. ಏನಿದು ಸುದ್ದಿ?  

PREV
16
ಸಂಕಷ್ಟದಲ್ಲಿ Karan Johar, ಪಾಕ್ ಗಾಯಕನಿಂದ  ಬೆದರಿಕೆ!

ಇದೀಗ, ಹಾಡಿನ ಮೂಲ, ಪಾಕಿಸ್ತಾನಿ ಗಾಯಕ ಅಬ್ರಾರ್ ಉಲ್ ಹಕ್ ಅವರು ಕರಣ್ ಜೋಹರ್ ಮತ್ತು ಅವರ ಸಿಬ್ಬಂದಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ಹಾಡನ್ನು ಸಂಪೂರ್ಣ ಕ್ರೆಡಿಟ್ ನೀಡದೆ ಕರಣ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಅಬ್ರಾರ್ ಆರೋಪಿಸಿದ್ದಾರೆ. 

26

ಭಾನುವಾರ, ಮೇ 22 ರಂದು, ಗಾಯಕ-ಗೀತರಚನೆಕಾರರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡಿಗಾಗಿ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ನಾನು ನನ್ನ'ನಾಚ್ ಪಂಜಾಬನ್' ಹಾಡನ್ನು ಯಾವುದೇ ಭಾರತೀಯ ಚಲನಚಿತ್ರಕ್ಕೆ ಮಾರಿಲ್ಲ ಮತ್ತು ಹಾನಿಯಾದರೆ, ನ್ಯಾಯ ಪಡೆಯಲು ನ್ಯಾಯಾಲಯಕ್ಕೆ ಹೋಗುವ ಹಕ್ಕನ್ನು ಕಾಯ್ದಿರಿಸಿದ್ದೇನೆ. @ karanjohar ರಂತಹ ನಿರ್ಮಾಪಕರು ಹಾಡುಗಳನ್ನು ಈ ರೀತಿ ಕಾಪಿ ಮಾಡಿ, ಬಳಸಬಾರದು. ಇದು ನನ್ನ 6ನೇ ಹಾಡನ್ನು ನಕಲು ಮಾಡಲಾಗುತ್ತಿದ್ದು ಇದನ್ನು ಇಲ್ಲಿ ಅನುಮತಿಸಲಾಗುವುದಿಲ್ಲ  @DharmaMovies @karanjohar"ಎಂದು ಗಾಯಕ ಟ್ವೀಟ್ ಮಾಡಿದ್ದಾರೆ.

36

'ನಾಚ್ ಪಂಜಾಬನ್' ಹಾಡಿಗೆ ಯಾರಿಗೂ ಪರವಾನಗಿ ನೀಡಿಲ್ಲ. ಯಾರಾದರೂ ಅದನ್ನು ಕ್ಲೈಮ್ ಮಾಡುತ್ತಿದ್ದರೆ, ಒಪ್ಪಂದ ಸಲ್ಲಿಸಿ. ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. #NachPunjaban' ಎಂದು ಪಾಕ್ ಗಾಯಕ ಸರಣಿ ಟ್ವೀಟ್‌ನಲ್ಲಿ ಬರೆದಿದ್ದಾರೆ. 

46

ಅಬ್ರಾರ್ ಅವರ ಈ ಹಾಡು 2000ರ ದಶಕದ ಆರಂಭದಲ್ಲಿಯೇ ಹೊರಬಂದಿತ್ತು. ದಕ್ಷಿಣ ಏಷ್ಯಾದಾದ್ಯಂತ ಚಾರ್ಟ್‌ ಬಸ್ಟರ್ ಆಗಿತ್ತು. ಬಿಲ್ಲೋ ಡಿ ಘರ್, ಗಾಯಕನಾಗಿ ಈ ಸಂಗೀತಗಾರನ ಚೊಚ್ಚಲ ಆಲ್ಬಂ, 
 

56

1995 ರಲ್ಲಿ ಬಿಡುಗಡೆಯದ ಅವರ ಮೊದಲ ಆಲ್ಬಂ ಪ್ರಪಂಚದಾದ್ಯಂತ 40 ಮಿಲಿಯನ್ ಪ್ರತಿಗಳ ಮಾರಾಟವಾಗಿದೆ. ಅವರಿಗೆ 'ಕಿಂಗ್ ಆಫ್ ಪಾಕಿಸ್ತಾನಿ ಪಾಪ್' ಎಂಬ ಬಿರುದನ್ನು ಗಳಿಸಿ ಕೊಟ್ಟಿತ್ತು. ಅಬ್ರಾರ್-ಉಲ್-ಹಕ್ ಈಗ ಪಾಕಿಸ್ತಾನದಲ್ಲಿ ಸಕ್ರಿಯ ರಾಜಕಾರಣಿ. 

66

ಧರ್ಮಾ ಪ್ರೊಡಕ್ಷನ್ಸ್‌ನ ಯಾರೂ ಪಾಕಿಸ್ತಾನಿ (Pakistan) ಗಾಯಕ-ಆಪಾದನೆ ಗೀತರಚನೆಕಾರರ ಬಗ್ಗೆ ಉತ್ತರಿಸಿಲ್ಲ. ರಾಜ್ ಮೆಹ್ತಾ ನಿರ್ದೇಶನದ ಜಗ್ ಜಗ್ ಜೀಯೋ ಜೂನ್ 24 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories