Cannes 2022: ಹಸಿರು ಪೋಲ್ಕ ಡಾಟ್‌ ಜಂಪ್‌ಸೂಟ್‌ ರೆಟ್ರೊ ಲುಕ್‌ನಲ್ಲಿ ಮಿಂಚಿದ Deepika Padukone

Published : May 23, 2022, 04:45 PM IST

ದೀಪಿಕಾ ಪಡುಕೋಣೆ (Deepika Padukone) ಕಾನ್ಸ್ 2022 (Cannes 2022) ರಲ್ಲಿ ತನ್ನ ರೆಟ್ರೋ ಲುಕ್ ಅನ್ನು ಪ್ರದರ್ಶಿಸಿದ್ದಾರೆ: ದೀಪಿಕಾ ಪಡುಕೋಣೆ ಈ ಉತ್ಸವದಲ್ಲಿ ತಮ್ಮ ಅದ್ಭುತ ನೋಟದಿಂದ ಎಲ್ಲರನ್ನೂ  ಮೆಚ್ಚಿಸುತ್ತಲೇ ಇದ್ದಾರೆ. ದೀಪಿಕಾ ಪ್ರತಿದಿನ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀರೆಯಿಂದ ಹಿಡಿದು ರೆಟ್ರೋ, ವೆಸ್ಟರ್ನ್‌ವರೆಗೆ (Western Look) ಬೇರೆ ಬೇರೆ ಆವತಾರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಈ ದಿವಾ. ಈಗ  ದೀಪಿಕಾ ಮತ್ತೊಮ್ಮೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದುರ, ಫ್ಯಾಷನ್ ಪ್ರಿಯರಿಂದ ವಿಭಿನ್ನ ಕಮೆಂಟ್ಸ್ ಪಡೆದು ಕೊಳ್ಳುತ್ತಿದ್ದಾರೆ. 

PREV
15
 Cannes 2022: ಹಸಿರು ಪೋಲ್ಕ ಡಾಟ್‌ ಜಂಪ್‌ಸೂಟ್‌ ರೆಟ್ರೊ ಲುಕ್‌ನಲ್ಲಿ ಮಿಂಚಿದ  Deepika Padukone

ಬಾಲಿವುಡ್‌ ನಟಿ (Bollywood Actress) ದೀಪಿಕಾ ಪಡುಕೋಣೆ ಅವರು ರೆಡ್ ಕಾರ್ಪೆಟ್ (Red Carpet)  ಮೇಲೆ ತನ್ನ ಅದ್ಭುತ ಲುಕ್‌ ಮತ್ತು ಸ್ಟೈಲ್‌ನಿಂದ ಕಾನ್ಸ್‌ 2022  ಈವೆಂಟಿನಲ್ಲಿಯೂ ಮಿಂಚುತ್ತಿದ್ದಾರೆ.

25

ತಮ್ಮ ಆಕರ್ಷಕ ನೋಟದ ಜೊತೆ ಮುದ್ದಾದ ಮುಗುಳ್ನಗೆ (Smile) ಮೂಲಕ ದೀಪಿಕಾ ಅಭಿಮಾನಿಗಳು ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ದೀಪಿಕಾ ಲುಕ್ ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. 

35

ದೀಪಿಕಾ ಪಡುಕೋಣೆ ಬ್ಯಾಕ್ ಟು ಬ್ಯಾಕ್ ಬೆರಗುಗೊಳಿಸುವ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಭಾನುವಾರದ ಆಯ್ಕೆ ಬಿಳಿ ಪೋಲ್ಕ ಡಾಟ್‌ ಇರುವ  ಹಸಿರು ಬಣ್ಣದ ಜಂಪ್‌ಸೂಟ್ ಆಗಿತ್ತು. ಲೂಯಿಸ್ ವಿಟಾನ್‌ನ  ರಾಯಭಾರಿಯಾಗಿರುವ ದೀಪಿಕಾ ಪಡುಕೋಣೆ ಅದೇ  ಬ್ರ್ಯಾಂಡ್‌ನ ಔಟ್‌ಫಿಟ್‌ ಧರಿಸಿದ್ದರು.

45

ಲೂಯಿ ವಿಟಾನ್‌ನ ಬೆರಗುಗೊಳಿಸುವ ಹಸಿರು ಕೋ-ಆರ್ಡ್ ಸೆಟ್ ಜೊತೆ  ಚೈನ್, ಹೂಪ್ ಕಿವಿಯೋಲೆಗಳು ಮತ್ತು ಬ್ರೇಸ್ಲೆಟ್ ಸೇರಿ ಬೆಳ್ಳಿಯ ಪರಿಕರಗಳನ್ನು ತಮ್ಮ ಡ್ರೆಸ್‌ಗೆ ಮ್ಯಾಚ್‌ ಮಾಡಿಕೊಂಡಿದ್ದರು.

 

55

ಫ್ಲಾಲೆಸ್‌ ಮೇಕಪ್ ಜೊತೆ ಬ್ರೌನ್‌ ಬಣ್ಣದ ಲಿಪ್‌ ಶೆಡ್‌ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿತು. ಕೂದಲನ್ನು ಮೆಸ್ಸಿ ಪೋನಿಟೇಲ್‌ನಲ್ಲಿ ವಿನ್ಯಾಸಗೊಳಿಸಲಾಗಿತ್ತು ಮತ್ತು ಬಿಳಿ ಸ್ಟಿಲೆಟ್ಟೊಗಳೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದ್ದರು.

Read more Photos on
click me!

Recommended Stories