ಸಹಜ ನಟಿಯಾಗಿ ತೆಲುಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ನಟಿ ಜಯಸುಧಾ. ನಟನೆ, ಅಂದ, ಡ್ಯಾನ್ಸ್ ಹೀಗೆ ಎಲ್ಲ ವಿಷಯಗಳಲ್ಲೂ ಜಯಸುಧಾ ಬಹಳ ವಿಶೇಷ ಅಂತಾನೇ ಹೇಳಬಹುದು. ಜಯಸುಧಾಗೆ ಸ್ಪೆಷಲ್ ಫ್ಯಾನ್ ಬೇಸ್ ಕೂಡ ಇದೆ. ಈಗಲೂ ಅವರು ಇದ್ದಾರೆ ಅಂದ್ರೆ ಆ ಸಿನಿಮಾನ ಮಿಸ್ ಮಾಡದೇ ನೋಡೋ ಅಭಿಮಾನಿಗಳು ಇದ್ದಾರೆ. ಹೀರೋಯಿನ್ ಆಗಿದ್ದ ದಿನಗಳಲ್ಲಿ ಜಯಸುಧಾಗೆ ಡಿಮ್ಯಾಂಡ್ ಹೆಚ್ಚಾಗಿ ಇತ್ತು. ಎನ್ ಟಿ ಆರ್, ಎಎನ್ಆರ್, ಕೃಷ್ಣ, ಕೃಷ್ಣಂರಾಜು, ಶೋಭನ್ ಬಾಬು, ಮುರಳಿ ಮೋಹನ್ ಜೊತೆಗೆ ಮೋಹನ್ ಬಾಬು ಜೊತೆಗೂ ಜಯಸುಧಾ ಎಷ್ಟೋ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.