ಈ ಮೂಲಾಂಕದ ಜನರ ಮೃತ್ಯು ರಹಸ್ಯಮಯವಾಗಿರುತ್ತೆ… ನಟಿ ಶ್ರೀದೇವಿ ಸಾವಿಗೂ ಮೂಲಾಂಕವೇ ಕಾರಣ!
ಫೆಬ್ರವರಿ 24, 2018 ರಂದು ಬಾಲಿವುಡ್‌ನ ಸೂಪರ್ ಸ್ಟಾರ್ ನಟಿ ಶ್ರೀದೇವಿ ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದ ದುರದೃಷ್ಟಕರ ದಿನ. ಅವರ ಸಾವು ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಅವರ ಮೂಲಾಂಕವೇ?
ಫೆಬ್ರವರಿ 24, 2018 ರಂದು ಬಾಲಿವುಡ್‌ನ ಸೂಪರ್ ಸ್ಟಾರ್ ನಟಿ ಶ್ರೀದೇವಿ ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದ ದುರದೃಷ್ಟಕರ ದಿನ. ಅವರ ಸಾವು ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಅವರ ಮೂಲಾಂಕವೇ?
ಶ್ರೀದೇವಿ ನಿಧನರಾದ ದುರದೃಷ್ಟಕರ ದಿನ
ಖ್ಯಾತ ಬಾಲಿವುಡ್ ನಟಿ ಶ್ರೀದೇವಿ (bollywood actres Sridevi) 2018 ರಲ್ಲಿ ನಿಧನರಾದರು. ಈ ಘಟನೆ ಅವರ ಅಭಿಮಾನಿಗಳಿಗೆ ಮತ್ತು ಇಡೀ ಬಾಲಿವುಡ್ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿತು. ಜನರಿಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಆದರೆ ಇದು ನಿಜವಾಗಿತ್ತು. ಶ್ರೀದೇವಿ ಭಾರತದಿಂದ ದೂರದಲ್ಲಿರುವ ದುಬೈನಲ್ಲಿ ಕೊನೆಯುಸಿರೆಳೆದರು. ಶ್ರೀದೇವಿ ಮದುವೆಯೊಂದರಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ಮದುವೆ ಮುಗಿದ ನಂತರ, ಇಡೀ ಕಪೂರ್ ಕುಟುಂಬ ಮುಂಬೈಗೆ ಮರಳಿತು, ಆದರೆ ಶ್ರೀದೇವಿ ದುಬೈನಲ್ಲೇ ಉಳಿದರು. ಅವರು ದುಬೈನ ಜುಮೇರಾ ಎಮಿರೇಟ್ಸ್ ಟವರ್ ಹೋಟೆಲ್‌ನ ಕೊಠಡಿ ಸಂಖ್ಯೆ 2201 ರಲ್ಲಿ ಉಳಿಯಲು ನಿರ್ಧರಿಸಿದರು. ಶ್ರೀದೇವಿ ದುಬೈನಲ್ಲಿ ಒಬ್ಬಂಟಿಯಾಗಿದ್ದರು ಮತ್ತು ಆ ಎರಡು ದಿನಗಳ ಕಾಲ ಅವರು ತಂಗಿದ್ದ ಹೋಟೆಲ್‌ನಿಂದ ಹೊರಗೆ ಬಂದಿರಲಿಲ್ಲ. ಆದರೆ, ಪತಿ ಬೋನಿ ಕಪೂರ್ (Boney Kapoor) ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ್ದರು. ಅಲ್ಲದೇ ಬೋನಿ ಕಪೂರ್ ಹೆಂಡತಿ ಜೊತೆ ಸಮಯ ಕಳೆಯೋದಕ್ಕೆ ಮತ್ತೆ ದುಬೈಗೆ ತೆರಳಿದ್ದರು.
ಶ್ರೀದೇವಿಯವರ ಜನ್ಮ ಸಂಖ್ಯೆ ಯಾವುದು?
ಬೋನಿ ಕಪೂರ್ ಹೋಟೆಲ್ ತಲುಪಿದಾಗ, ಶ್ರೀದೇವಿ ಅವರ ಕೋಣೆಯಲ್ಲಿದ್ದರು ಮತ್ತು ಇಬ್ಬರೂ ಒಟ್ಟಿಗೆ ರೊಮ್ಯಾಂಟಿಕ್ ಡಿನ್ನರ್ (Romantic dinner) ಕೂಡ ಪ್ಲ್ಯಾನ್ ಮಾಡಿದ್ದರು. ಹೋಟೆಲ್‌ಗೆ ನೀಡಿದ ಹೇಳಿಕೆಯಲ್ಲಿ, ಬೋನಿ ಕಪೂರ್, ಶ್ರೀ ನನ್ನನ್ನು ನೋಡಿ ತುಂಬಾನೆ ಸಂತೋಷಪಟ್ಟರು ಮತ್ತು ನಾವು ಬಹಳ ಹೊತ್ತು ಮಾತನಾಡಿದೆವು ಮತ್ತು ನಂತರ ಶ್ರೀದೇವಿ ಭೋಜನಕ್ಕೆ ಸಿದ್ಧರಾಗಲು ಸ್ನಾನಗೃಹಕ್ಕೆ ಹೋದರು, ಆದರೆ ಅಲ್ಲಿಂದ ಹಿಂದಿರುಗಲೇ ಇಲ್ಲ ಎಂದು ಬೋನಿ ಹೇಳಿದರು. ಕೊನೆಗೆ ಶ್ರೀದೇವಿ ದುಬೈನಿಂದ ಭಾರತಕ್ಕೆ ಮರಳಿದ್ದು ಶವವಾಗಿ. ಶ್ರೀದೇವಿಯವರ ಜನ್ಮ ದಿನಾಂಕ ಆಗಸ್ಟ್ 13 , ಶ್ರೀದೇವಿಯ ಜನ್ಮ ದಿನಾಂಕದ ಪ್ರಕಾರ ಅವರ ಮೂಲಾಂಕ 4. 4 ನೇ ಸಂಖ್ಯೆಯನ್ನು ಹೊಂದಿರುವ ಜನರ ಸಾವು ನಿಗೂಢವಾಗಿರುತ್ತಾ? ಆ ಬಗ್ಗೆ ತಿಳಿಯೋಣ.
ಮೂಲಾಂಕ 4 ಹೊಂದಿರುವ ಜನರು ಹೇಗಿರುತ್ತಾರೆ?
ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರ ಮೂಲಾಂಕ 4 ಆಗಿರುತ್ತೆ. ಈ ಸಂಖ್ಯೆಯ ಆಡಳಿತ ಗ್ರಹ ರಾಹು, ಇದು ಹಠಾತ್ ಬದಲಾವಣೆಗಳು ಮತ್ತು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ.
ಶ್ರಮಜೀವಿಗಳು
ಮೂಲಾಂಕ 4(Radix 4) ಹೊಂದಿರುವ ಜನರು ಎಂದಿಗೂ ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ. ಅವರು ತಮ್ಮ ಗುರಿಗಳನ್ನು ಸಾಧಿಸಲು ಹಗಲಿರುಳು ಕೆಲಸ ಮಾಡುತ್ತಾರೆ ಮತ್ತು ಸೋಮಾರಿತನದಿಂದ ಮೈಲುಗಟ್ಟಲೆ ದೂರವಿರುತ್ತಾರೆ. ಅವರಿಗೆ ಕೆಲಸವೇ ಪೂಜೆ.
ವಿಚಿತ್ರ ಆಕರ್ಷಣೆ
ರಾಹುವಿನ ಪ್ರಭಾವದಿಂದಾಗಿ, ಅವರ ವ್ಯಕ್ತಿತ್ವವು ಸ್ವಲ್ಪ ನಿಗೂಢ ಮತ್ತು ಆಕರ್ಷಕವಾಗಿರುತ್ತದೆ. ಅವರು ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ, ಇದರಿಂದಾಗಿ ಜನರು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಬಂಡಾಯದ ಸ್ವಭಾವ
ಈ ಜನರು ಸಾಂಪ್ರದಾಯಿಕ ಚಿಂತನೆಯಿಂದ ದೂರ ಸರಿದು ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳುತ್ತಾರೆ. ಅವರ ಮೊಂಡುತನದ ಸ್ವಭಾವವು ಕೆಲವೊಮ್ಮೆ ಅವರಿಗೆ ಸಮಸ್ಯೆಯನ್ನು ತರುತ್ತೆ. ಅವರು ತಮ್ಮ ಆಲೋಚನೆಗಳನ್ನು ಬದಲಾಯಿಸಲು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಇತರರ ಸಲಹೆಯನ್ನು ಅನುಸರಿಸಲು ಕಷ್ಟಪಡುತ್ತಾರೆ.
ಬದಲಾವಣೆ ಇಷ್ಟವಿಲ್ಲ
ಮೂಲಾಂಕ 4 ಜನರ ಜೀವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಏರಿಳಿತಗಳು ಕಂಡುಬರುತ್ತವೆ. ಅವರು ಬದಲಾವಣೆಯನ್ನು (changes in life) ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹೊಸ ವಿಷಯಗಳು ಅಥವಾ ಅಪಾಯಗಳಿಂದ ಅವರಿಗೆ ಸ್ವಲ್ಪ ಅನಾನುಕೂಲವಾಗುತ್ತದೆ, ಇದರಿಂದಾಗಿ ಕೆಲವೊಮ್ಮೆ ಅವಕಾಶಗಳು ತಪ್ಪಿಹೋಗುತ್ತವೆ.
ಕಡಿಮೆ ಭಾವನಾತ್ಮಕ
ಈ ಜನರು ಭಾವನೆಗಳಿಗಿಂತ ತರ್ಕದ ಮೇಲೆ ಹೆಚ್ಚು ವರ್ತಿಸುತ್ತಾರೆ. ಸಂಬಂಧಗಳಲ್ಲಿ, ಅವರು ಸ್ವಲ್ಪ ಕಟ್ಟುನಿಟ್ಟಾಗಿ ಅಥವಾ ಕೂಲ್ ಆಗಿ ಕಾಣಿಸಬಹುದು, ಆದರೆ ಒಳಗಿನಿಂದ ಅವರು ತುಂಬಾ ನಿಷ್ಠರಾಗಿರುತ್ತಾರೆ.
ನಿಗೂಢ ಸಾವು
ಮೂಲಾಂಕ 4 ರಂದು ಜನಿಸಿದ ಜನರ ಸಾವು ವಿಚಿತ್ರ ಸನ್ನಿವೇಷದಲ್ಲಿ (mysterious death) ನಡೆಯುತ್ತೆ. ಅವರ ಸಾವು ಯಾವ ರೀತಿ ಆಗಿದೆ ಅನ್ನೋದು ಕೂಡ ಯಾರಿಗೂ ಗೊತ್ತಾಗೋದಿಲ್ಲ. ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದು ಕೂಡ ವಿಚಿತ್ರವೇ ಸರಿ.
ಶ್ರೀದೇವಿ ಮತ್ತು ನಂಬರ್ 4 ರ ನಡುವಿನ ಸಂಬಂಧ
ಶ್ರೀದೇವಿ ಆಗಸ್ಟ್ 13, 1963 ರಂದು ಜನಿಸಿದರು. ಅವರು ಫೆಬ್ರವರಿ 24, 2018 ರಂದು ದುಬೈನಲ್ಲಿ ನಿಗೂಢ ರೀತಿಯಲ್ಲಿ ನಿಧನರಾದರು, ವರದಿಯ ಪ್ರಕಾರ ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದರು. ಅವರ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು, ಇದು ರಾಹುವಿನ ಪ್ರಭಾವವನ್ನು ಸೂಚಿಸುತ್ತದೆ, ಏಕೆಂದರೆ ರಾಹುವಿಗೆ ಸಂಬಂಧಿಸಿದ ಜನರು ಹೆಚ್ಚಾಗಿ ನಿಗೂಢ ಮತ್ತು ಹಠಾತ್ ಘಟನೆಗಳನ್ನು ಎದುರಿಸುತ್ತಾರೆ. ಇವರ ಸಾವು ನಿಗೂಢವಾಗಿರುತ್ತೆ.