ಈ ಸಿನಿಮಾ ಟಿಕೆಟ್’ಗಾಗಿ ಊಟ-ತಿಂಡಿ ಬಿಟ್ಟು, ಎರಡು ದಿನ ರಾತ್ರಿ, ಹಗಲೆನ್ನದೇ ಲೈನಲ್ಲಿ ನಿಂತಿದ್ರಂತೆ ಜನ!

Published : Apr 07, 2025, 06:32 PM ISTUpdated : Apr 08, 2025, 10:14 AM IST

ಇದೊಂದು ಸೂಪರ್ ಹಿಟ್ ಸಿನಿಮಾ, ಈ ಸಿನಿಮಾ ನೋಡಲು, ಜನ ಹಗಲು ರಾತ್ರಿ ಲೈನಲ್ಲಿ ನಿಲ್ಲುತ್ತಿದ್ದರಂತೆ, 5 ಕಿಮೀ ಉದ್ದದ ಟಿಕೆಟ್ ಲೈನ್ ಕೂಡ ಇರುತ್ತಿತ್ತಂತೆ, ಆ ಸಿನಿಮಾ ಯಾವುದು ನೋಡೋಣ.        

PREV
16
ಈ ಸಿನಿಮಾ ಟಿಕೆಟ್’ಗಾಗಿ ಊಟ-ತಿಂಡಿ ಬಿಟ್ಟು, ಎರಡು ದಿನ ರಾತ್ರಿ, ಹಗಲೆನ್ನದೇ ಲೈನಲ್ಲಿ ನಿಂತಿದ್ರಂತೆ ಜನ!

'ಮುಘಲ್-ಎ-ಆಜಮ್' 65 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು.
'ಮುಘಲ್-ಎ-ಆಜಮ್' (Mughal E Azam) ಬಾಲಿವುಡ್ ಚಿತ್ರವಾಗಿದ್ದು, ಈಗ 60 ವರ್ಷಗಳಿಗೂ ಹಳೆಯದಾಗಿದೆ, ಆದರೆ ಪ್ರೇಕ್ಷಕರು ಅಂದು ಸಿನಿಮಾ ನೋಡಲು ಏನೆಲ್ಲಾ ಮಾಡಿದ್ರು ಕೇಳಿದ್ರೆ ಅಚ್ಚರಿಯಾಗಬಹುದು. ಕೆ ಆಸಿಫ್ ಅವರ ಈ ಚಿತ್ರದಲ್ಲಿ ಮಧುಬಾಲ, ದಿಲೀಪ್ ಕುಮಾರ್ ಮತ್ತು ಪೃಥ್ವಿರಾಜ್ ಕಪೂರ್ ಮೊದಲಾದ ತಾರೆಯರು ನಟಿಸಿದ್ದರು.

26

ಆ ಕಾಲದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿತ್ತು.
65 ವರ್ಷಗಳ ಹಿಂದೆ ಬಿಡುಗಡೆಯಾದ 'ಮುಘಲ್-ಎ-ಆಜಮ್' ಚಿತ್ರದ ದಾಖಲೆ ಎಷ್ಟು ವಿಶೇಷವೆಂದರೆ, ಇಂದಿನ ಚಿತ್ರಗಳು ಸಹ 1000 ಕೋಟಿ ರೂ. ಗಳಿಸಿದ ದಾಖಲೆಗೆ ಹೋಲಿಸಿದರೆ ಅದು ಕಡಿಮೆಯೇ. ಕೆ ಆಸಿಫ್ ನಿರ್ದೇಶನದ (Director K Asif) ಈ ಸಿನಿಮಾ ಆ ಕಾಲದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿತ್ತು.

36

ಟಿಕೆಟ್ ಗಾಗಿ 5 ಕಿಲೋಮೀಟರ್ ಉದ್ದದ ಸರತಿ ಸಾಲು
ಈ ಚಿತ್ರದ ಟಿಕೆಟ್ (film ticket)  ಖರೀದಿಸಲು ಎರಡು ದಿನಗಳ ಕಾಲ ಜನರು ಸರತಿ ಸಾಲಿನಲ್ಲಿ ನಿಂತಿದ್ದರಂತೆ ಮತ್ತು 5 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾದ ಲೈನ್ ಇದ್ದಿತ್ತಂತೆ. ಅಷ್ಟೊಂದು ಕ್ರೇಜ್ ಹಿಡಿಸಿತ್ತು ಈ ಸಿನಿಮಾ. 

46

ಜನರು ಟಿಕೆಟ್‌ಗಾಗಿ ಬೀದಿಗಳಲ್ಲಿ ಮಲಗುತ್ತಿದ್ದರು
"ಸೋಮವಾರ ಪ್ರೀ ಬುಕಿಂಗ್‌ಗಾಗಿ (pre booking tickets) ಜನರು ಶನಿವಾರದಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು, ಜನರು ಬೀದಿಗಳಲ್ಲಿ ಮಲಗುತ್ತಿದ್ದರು ಮತ್ತು ಅವರ ಕುಟುಂಬದ ಜನರು ಟಿಕೇಟ್ ಗೆ ನಿಲ್ಲುವವರಿಗಾಗಿ ಆಹಾರವನ್ನು ತರುತ್ತಿದ್ದರಂತೆ. 

56

ಈ  ಲೈನ್ ಬಾಂಬೆ ಸೆಂಟ್ರಲ್‌ನಿಂದ ಮಹಾಲಕ್ಷ್ಮಿಯವರೆಗೆ ವಿಸ್ತರಿಸಿತ್ತು
ಸೋಮವಾರದ ಪ್ರದರ್ಶನಕ್ಕೆ ಟಿಕೆಟ್ ಪಡೆಯಲು ನಿಲ್ಲುತ್ತಿದ್ದ ಜನರ ಸಾಲು ಬಾಂಬೆ ಸೆಂಟ್ರಲ್‌ನಿಂದ ಆರಂಭವಾಗಿ ಮಹಾಲಕ್ಷ್ಮಿಯವರೆಗೆ ಇರುತ್ತಿತ್ತಂತೆ, ಅದು ಆ ಕಾಲಕ್ಕೆ ಬಹಳ ಆಶ್ಚರ್ಯಕರ ಸಂಗತಿಯಾಗಿತ್ತು.

66

ಆ ಕಾಲದ ಅತ್ಯಂತ ಅದ್ಭುತ ಚಿತ್ರ
'ಮುಘಲ್-ಎ-ಆಜಮ್' ಆ ಕಾಲದವರೆಗೆ ಭಾರತದಲ್ಲಿ ತಯಾರಾದ ಅತ್ಯಂತ ಭವ್ಯ ಚಿತ್ರವಾಗಿತ್ತು ಮತ್ತು ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದಿಲೀಪ್ ಮತ್ತು ಮಧುಬಾಲಾ (Dileep Kumar and Madhubala) ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories