ಟೈಗರ್ ಜಿಂದಾ ಹೈ ಚಿತ್ರದಲ್ಲಿ ಕತ್ರಿನಾ ಕೈಫ್ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಪ್ರಭಾವಿತಗೊಳಿಸಿದರು, ಹಮಾಮ್ ಸರಣಿಯ ಸಮಯದಲ್ಲಿ ಅವರು ತಮ್ಮ ಅದ್ಭುತ ಸಮರ ಕಲೆಗಳ ಕೌಶಲ್ಯವನ್ನು ಪ್ರದರ್ಶಿಸಿದರು. ಜಗ್ಗಾ ಜಾಸೂಸ್ ಪಾತ್ರಕ್ಕಾಗಿ ಕತ್ರಿನಾ ಕೈಫ್ ಇಸ್ರೇಲಿ ಯುದ್ಧ ತಂತ್ರವಾದ ಕ್ರಾವ್ ಮಾಗಾವನ್ನು ಅಭ್ಯಾಸ ಮಾಡಿದರು.
ಇದ್ಲದೆ ನಟಿ ತಾಪ್ಸಿ ಪನ್ನು, ಮಿಶ್ರ ಸಮರ ಕಲೆಗಳು ಮತ್ತು ಕ್ರಾವ್ ಮಗದಲ್ಲಿ ತರಬೇತಿ ಪಡೆದಿದ್ದಾರೆ. ಇನ್ನು ನಟಿ ಅದಾ ಶರ್ಮಾ ಒಬ್ಬ ನುರಿತ ಸಮರ ಕಲಾವಿದೆ. ಅವರು 'ಕಮಾಂಡೋ 3' ನಲ್ಲಿ ತಮ್ಮ ಸಾಹಸ ಪ್ರದರ್ಶನ ಮಾಡಿದರು. ಮಾತ್ರವಲ್ಲ ಮರ್ದ್ ಕೋ ದರ್ದ್ ನಹಿ ಹೋತಾ ಚಿತ್ರಕ್ಕಾಗಿ, ರಾಧಿಕಾ ಮದನ್ 'ಜೀತ್ ಕುನೆ ದೋ' ಎಂಬ ಹೊಸ ರೀತಿಯ ಸಮರ ಕಲೆಯನ್ನು ಪ್ರದರ್ಶಿಸಿದರು. ಇನ್ನು ನಟಿ ದಿಶಾ ಪಟಾನಿ ಮತ್ತು ಕಂಗನಾ ರಣಾವತ್ ಕಿಕ್‌ಬಾಕ್ಸಿಂಗ್ ಕಲಿತಿದ್ದಾರೆ.