ಹುಟ್ಟಿ, ಬೆಳೆದದ್ದು ಸ್ಲಮ್‌ನಲ್ಲಿ, ಮಿಂಚ್ತಿರೋದು ಕಾಲಿವುಡ್‌ನಲ್ಲಿ: ನಟಿ ಐಶ್ವರ್ಯಾರ ಮನಮುಟ್ಟುವ ಕಥೆ

First Published May 9, 2021, 1:03 PM IST

ಹುಟ್ಟಿ ಬೆಳೆದದ್ದು ಸ್ಲಮ್‌ನಲ್ಲಿ | ತಮ್ಮಂದಿರಿಬ್ಬರ ಸಾವು, ತಂದೆಯೂ ಇಲ್ಲ | ಸ್ಲಮ್‌ನಲ್ಲಿದ್ದ ಪುಟ್ಟ ಹುಡುಗಿ ಕಾಲಿವುಡ್‌ನ ಸೂಪರ್ ಹೀರೋಯಿನ್ ಆದ ಮನಮುಟ್ಟುವ ಕಥೆ ಇದು

ನನ್ನನ್ನು ಯಾರೂ ಸಪೋರ್ಟ್ ಮಾಡಲಿಲ್ಲ, ನನ್ನನ್ನು ನಾನೇ ಸಪೋರ್ಟ್ ಮಾಡಿದೆ ಎನ್ನುತ್ತಾರೆ ಕಾಲಿವುಡ್‌ನ ಬಹುಬೇಡಿಕೆಯ ನಟಿ.
undefined
8 ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಐಶ್ವರ್ಯಾ ರಾಜೇಶ್ ಎನ್ನುವ ನಟಿ ಹುಟ್ಟಿದ್ದು, ಬೆಳೆದದ್ದು ಸ್ಲಮ್‌ನಲ್ಲಿ.
undefined
ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯಾಗಿ ಹೊರಹೊಮ್ಮಿದ ಐಶ್ವರ್ಯಾ ಈಗ ಟಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ.
undefined
ತಂದೆಯನ್ನು ಕಳೆದುಕೊಂಡಾಗ ನಾನವರನ್ನು ಮಿಸ್ ಮಾಡಿಕೊಳ್ಳಲಿಲ್ಲ. ನನ್ನ ಅಮ್ಮ ಒಬ್ಬ ಫೈಟರ್ ಆಗಿದ್ದರು ಎನ್ನುತ್ತಾರೆ ಈಕೆ.
undefined
ಲೋವರ್ ಮಿಡಲ್ ಕ್ಲಾಸ್‌ನ ಸ್ಲಮ್ ಬೋರ್ಡ್‌ನಲ್ಲಿ ಬೆಳೆದ ಹುಡುಗಿ ಈಗ ಕಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಕೈಯಲ್ಲಿ ಇಡ್ಕೊಂಡಿರೋ ಬ್ಯುಸಿ ನಟಿ.
undefined
ನನ್ನ ಮೊದಲ ಸಹೋದರ ನಾನು 12 ವರ್ಷವಿದ್ದಾಗ ಆತ್ಮಹತ್ಯೆ ಮಾಡಿಕೊಂಡ. ಪ್ರೇಮ ವೈಫಲ್ಯದಿಂದ ಜೀವನ ಕೊನೆಗೊಳಿಸಿದ್ದ ಎನ್ನುತ್ತಾರೆ ಐಶ್ವರ್ಯಾ.
undefined
ಕೆಲವು ವರ್ಷದ ನಂತರ ನನ್ನ ಎರಡನೇ ತಮ್ಮ ಆಕ್ಸಿಡೆಂಟ್‌ನಲ್ಲಿ ತೀರಿಕೊಂಡ. ಇದು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು ಎನ್ನುತ್ತಾರೆ ಈಕೆ.
undefined
ಈ ಸಂದರ್ಭದಲ್ಲಿ ತಾಯಿ ಧೈರ್ಯ ಕಳೆದುಕೊಂಡಿದ್ದು ಅಲ್ಲದೇ ಕುಟುಂಬದ ನಿರ್ವಹಣೆ ಜವಬ್ದಾರಿ ಐಶ್ವರ್ಯಾ ಮೇಲೆ ಬಿತ್ತು.
undefined
ಪ್ರತಿ ಹೆಣ್ಣಿಗೂ ಇಂತಹ ಒಂದಲ್ಲಾ ಒಂದು ಸಂದರ್ಭ ಬರುತ್ತದೆ, ಆಗ ಅವರು ಕುಟುಂಬವನ್ನು ಬೆಂಬಲಿಸಬೇಕಾಗುತ್ತದೆ ಎಂದಿದ್ದಾರೆ.
undefined
11ನೇ ತರಗತಿಯಲ್ಲಿದ್ದಾಗ ಕೆಲಸ ಮಾಡಿದೆ, ಅದರಲ್ಲಿ 225 ರೂಪಾಯಿ ಸಂಪಾದಿಸಿದೆ.
undefined
ನಂತರ ಚಿಕ್ಕಪುಟ್ಟ ಕೆಲಸ ಮಾಡಿದೆ. ಬರ್ತ್ಡೇ ಪಾರ್ಟಿ, ಇವೆಂಟ್ ಮಾಡುತ್ತಾ 500, 1000, 1500 ರೂಪಾಯಿ ಗಳಿಸುತ್ತಿದ್ದೆ.
undefined
ತಿಂಗಳಿಗೆ 5 ಸಾವಿರಷ್ಟು ಬರುತ್ತಿತ್ತು. ನಾನು ಖುಷಿಯಾಗಿದ್ದೆ, ಆದರೆ ಕುಟುಂಬ ನಿರ್ವಹಣೆಗೆ ಇದು ಸಾಕಾ ಎಂದು ಪ್ರಶ್ನಿಸುತ್ತಾರೆ ನಟಿ.
undefined
ಲುಕ್, ಪರ್ಸನಾಲಿಟಿ, ಮೈಬಣ್ಣಕ್ಕಾಗಿ ಬಹಳಷ್ಟು ಟೀಕೆಯನ್ನು ಎದುರಿಸಿದೆ.
undefined
ಕೆಲವು ನಿರ್ದೇಶಕರು ನಾನು ಹಿರೋಯನ್ ಮೆಟೀರಿಯಲ್ ಅಲ್ಲ, ಹಾಗಾಗಿ ನನಗೆ ದೊಡ್ಡ ಸ್ಟಾರ್ಸ್‌ಗೆದುರಾಗಿ ನಟಿಸೋ ಅವಕಾಶವೇ ಸಿಗಲಿಲ್ಲ ಎನ್ನುತ್ತಾರೆ ಐಶ್ವರ್ಯಾ.
undefined
ಆಫರ್ ಸಿಕ್ತಾ ಇಲ್ಲ, ನನ್ನ ಸಿನಿಮಾಗೆ ನಾನೇ ಹೀರೋ ಆಗ್ತೀನಿ ಎಂದು ನಿರ್ಧರಿಸಿ ನಿರ್ದೇಶಕರನ್ನು ಸ್ತ್ರೀ ಪ್ರಧಾನ ಪಾತ್ರಗಳಿಗಾಗಿ ಕೇಳುತ್ತಾರೆ.
undefined
ಒಂದು ಅವಕಾಶ ಕೊಡಿ, ನಾನು ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಬೇಡಿ ಬೇಡಿ ಅವಕಾಶ ಪಡೆದುಕೊಳ್ತಾರೆ ಈಕೆ.
undefined
ಹಾಗಾಗಿಯೇ ಆರಂಭದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳನ್ನೇ ಮಾಡಿದ್ದಾರೆ ಈಕೆ. ಆರರಿಂದ ಏಳರಷ್ಟು ಸ್ತ್ರೀ ಪ್ರಧಾನ ಪಾತ್ರಗಳ ಸಿನಿಮಾ ಮಾಡಿದ್ದಾರೆ ಈಕೆ.
undefined
20ಕ್ಕೂ ಹೆಚ್ಚಿನ ಅವಾರ್ಡ್‌ಗಳನ್ನೂ ಪಡೆದಿದ್ದಾರೆ ಐಶ್ವರ್ಯಾ, ಹಲವು ಫಿಲ್ಮ್‌ಫೇರ್ ಅವಾರ್ಡ್‌ಗಳೂ ಬಂದಿವೆ.
undefined
click me!