ನಟ ಅಮಿತಾಬ್ ಬಚ್ಚನ್ ಅವರೊಂದಿಗೆ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ನಟಿ ರಶ್ಮಿಕಾ.
ತಮ್ಮ ಎರಡನೇ ಬಾಲಿವುಡ್ ಸಿನಿಮಾ ಗುಡ್‌ಬೈ ಸೆಟ್‌ಗಳಲ್ಲಿ ಹುಟ್ಟಿದ ಹಬ್ಬ ಆಚರಿಸಿದ್ದಾರೆ ನಟಿ.
ಸೋಮವಾರ ಸಂಜೆ ನಟಿ ತನ್ನ ಸಂಭ್ರಮಾಚರಣೆ ಒಂದು ಚಿಕ್ಕ ನೋಟವನ್ನು ನೀಡುವ ಒಂದೆರಡು ಫೋಟೋ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಅಮಿತಾಭ್ ಮಾಸ್ಕ್ ಹಾಕಿದ್ದಾರೆ. ಆದರೆ ರಶ್ಮಿಕಾ ಮಾಸ್ಕ್ ಇಲ್ಲದೆ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಾರೆ.
ಆದರೆ ಫೋಟೋಗಳಿಗಾಗಿ ಮಾತ್ರ ಮಾಸ್ಕ್ ತೆಗೆಯಲಾಗಿದೆ ಎಂದು ನಟಿ ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡ ರಶ್ಮಿಕಾ ತನ್ನ ದಿನವನ್ನು ಗುಡ್‌ಬೈ ಸೆಟ್ಗಳಲ್ಲಿ ಕಳೆದಿದ್ದನ್ನು ತೃಪ್ತಿಕರ ಎಂದು ಬರೆದಿದ್ದಾರೆ.
Suvarna News