ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಪ್ರಾಜಕ್ತಾ ಕೋಲಿ ಮತ್ತು ಬಾಯ್‌ಫ್ರೆಂಡ್ ವೃಶಾಂಕ್ ಖನಾಲ್ ಇದೇ ಫೆಬ್ರವರಿ 25ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
27
ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಆದರೆ 2023ರಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದಾಗ ಪ್ರಜಕ್ತಾ ಮತ್ತು ಕುಟುಂಬದವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟು ದಿನ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಕ್ಯೂರಿಯಾಗಿಸಿಟಿ ಇದ್ದ ಫಾಲೋವರ್ಸ್‌ಗೆ ಕ್ಲಾರಿಟಿ ಸಿಗಲಿದೆ.
37
'ಹೌದು ಪ್ರಜಕ್ತಾ ಮತ್ತು ವೃಶಾಂಕ್ ಮದುವೆ ಆಗುತ್ತಿದ್ದಾರೆ. ನಮಗೆ ತುಂಬಾನೇ ಖುಷಿ ಇದೆ. ಮೆಹೆಂದಿ, ಹಳದಿ, ಮ್ಯೂಸಿಕಲ್ ನೈಟ್, ಅದ್ಧೂರಿ ಆರತಕ್ಷತೆ ಮತ್ತು ಮದುವೆ ಕಾರ್ಯಕ್ರಮಗಳು ನಡೆಯಲಿದೆ' ಎಂದು ಆಪ್ತರು ರಿವೀಲ್ ಮಾಡಿದ್ದಾರೆ.
47
ವಿಶೇಷ ಏನೆಂದರೆ 23 ಫೆಬ್ರವರಿರಿಂದ 25 ಫೆಬ್ರವರಿವರೆಗೂ ಮದುವೆ ಕಾರ್ಯಕ್ರಮ ಕರ್ಜತ್‌ನಲ್ಲಿ ನಡೆಯಲಿದೆ. ವೃಶಾಂಕ್ ಮೂಲತಃ ಕಠ್ಮಂಡು ನೇಪಾಳದ ಹುಡುಗ.
57
ಹೀಗೆ ಸ್ನೇಹಿತರ ಮನೆಯಲ್ಲಿ ನಡೆದ ಗಣೇಶ ಪೂಜೆಯಂದು ಇವರಿಬ್ಬರು ಭೇಟಿ ಮಾಡಿದ್ದರು. ವೃಶಾಂಕ್ ಮೊದಲು ಪ್ರಜಕ್ತಾರನ್ನು ಪ್ರೀತಿ ವಿಚಾರದಲ್ಲಿ ಕೇಳಿದ್ದು.
67
ಇನ್‌ಸ್ಟಾಗ್ರಾಂನಲ್ಲಿ 8.4 ಮಿಲಿಯನ್ ಫಾಲೋವರ್ಸ್‌ಗಳು ಮತ್ತು ಯೂಟ್ಯೂಬ್‌ನಲ್ಲಿ 7.22 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ಆಧಾಯಗಳಿಸುತ್ತಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಈಕೆ.
77
ಲಾಯರ್ ಆಗಿ ಕೆಲಸ ಮಾಡುತ್ತಿದ್ದ ವೃಶಾಂಕ್ ಕೂಡ ದೊಡ್ಡ ಮನೆತನಕ್ಕೆ ಸೇರಿರುವ ಹುಡುಗ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ.