ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್. ಬಾಹುಬಲಿ 1, ಬಾಹುಬಲಿ 2 ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ತಂದುಕೊಂಡಿದ್ದಲ್ಲದೆ, ಸೋಲೋ ಹೀರೋಯಿನ್ ಆಗಿ ಅನೇಕ ಚಿತ್ರಗಳಲ್ಲಿ ನಟಿಸಿ ಸೂಪರ್ ಹಿಟ್ ನಟಿ ಎನಿಸಿಕೊಂಡಿದ್ದಾರೆ. ಅನುಷ್ಕಾ ಚಿತ್ರಗಳು ಸ್ಟಾರ್ ನಟರ ಸಿನಿಮಾಗಳಿಗೆ ಸೆಡ್ಡು ಹೊಡೆದವು. ಒಂದು ಕಡೆ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ತೋರಿಸುತ್ತಾ, ಮತ್ತೊಂದೆಡೆ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ಮಿಂಚುವುದು ಅನುಷ್ಕಾಗೆ ಮಾತ್ರ ಸಾಧ್ಯ.