Indian Sports honors 2023: ಅನುಷ್ಕಾ- ವಿರಾಟ್‌ ದಂಪತಿ, ತಂದೆ, ಪತಿ ಜೊತೆ ದೀಪಿಕಾ ಪಡುಕೋಣೆ

Indian sports honors 2023ನಂತಹ ಇವೆಂಟ್‌ಗಳು ಅಪರೂಪ. ಈ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಕ್ರೀಡಾಪಟುಗಳು ಜೊತೆಯಾಗಿದ್ದರು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಮುಂತಾದವರ ಜೊತೆ ಹಲವು ಆಗಾರರು ಇಲ್ಲಿ ಉಪಸ್ಥಿತರಿದ್ದರು

ಈ ಕಾರ್ಯಕ್ರಮ ಸಂಪೂರ್ಣವಾಗಿ  ಗ್ಲಾಮರ್, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳಿಂದ ಕೂಡಿದ  ಅದ್ದೂರಿ ರಾತ್ರಿಯಾಗಿತ್ತು. ಪ್ರಮುಖ ಎ-ಲಿಸ್ಟರ್ ಸ್ಟಾರ್ಸ್‌ ತಮ್ಮ ಸಂಸ್ಕರಿಸಿದ ಮತ್ತು ಸ್ಟನ್ನಿಂಗ್‌ ಲುಕ್‌ ಮತ್ತು ಫ್ಯಾಷನಿಂದ ಇವೆಂಟ್‌ಗೆ ಮೆರಗು ತಂದರು

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ  ಜೋಡಿ ಈ ಇವೆಂಟ್‌ನ ಕೇಂದ್ರ ಬಿಂದು. ವಿರಾಟ್ ಕಪ್ಪು ಬಣ್ಣದ ಫಾರ್ಮಲ್‌  ಉಡುಪನ್ನು ಆರಿಸಿಕೊಂಡರೆ, ಅನುಷ್ಕಾ ಶರ್ಮಾ ಸ್ಲಿಟ್ ಇರುವ ಉದ್ದನೆಯ ನೇರಳೆ ಬಣ್ಣದ ಗೌನ್‌ ಧರಿಸಿದ್ದರು.


ಈವೆಂಟ್‌ನಲ್ಲಿ ಪತಿ-ನಟ ರಣವೀರ್ ಸಿಂಗ್ ಮತ್ತು ತಂದೆ ಪ್ರಕಾಶ್ ಪಡುಕೋಣೆ ಅವರೊಂದಿಗೆ ದೀಪಿಕಾ ಪಡುಕೋಣೆ ಸಾಂಪ್ರದಾಯಿಕ ಕಪ್ಪು ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ರಣವೀರ್ ಮತ್ತು ಪ್ರಕಾಶ್ ಪಡುಕೋಣೆ  ಇಬ್ಬರೂ ಫಾರ್ಮಲ್‌  ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡರು.

ಅಭಿಷೇಕ್ ಬಚ್ಚನ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು ಮತ್ತು ಕಪ್ಪು ಕನ್ನಡಕದೊಂದಿಗೆ ಸಂಪೂರ್ಣ ಕಪ್ಪು ಮೂರು ತುಂಡುಗಳ ಫಾರ್ಮಲ್ ಉಡುಪಿನಲ್ಲಿ ಹಂಕ್ ಆಗಿದ್ದರು.

ಈ ರೀತಿಯ ಕಾರ್ಯಕ್ರಮಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಔಪಚಾರಿಕ ಕಪ್ಪು ಬ್ಲೇಜರ್ ಮತ್ತು ಪ್ಯಾಂಟ್‌ನ ಜೊತೆ  ಳಿ ಶರ್ಟ್ ಪೇರ್‌ ಮಾಡಿಕೊಂಡು ಪಾರದರ್ಶಕ ಕನ್ನಡಕ ಧರಿಸಿ ಸಖತ್‌ ಹ್ಯಾಂಡ್ಸಮ್‌  ಆಗಿ ಕಾಣುತ್ತಿದ್ದರು.

ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೂಡ ಈ ಇವೆಂಟ್‌ನಲ್ಲಿ ಭಾಗವಹಿಸಿದ್ದರು. ಸಖತ್‌ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಗಿಲ್‌ ಪೋಸ್‌ ನೀಡಿದ್ದು ಹೀಗೆ

ನೇಹಾ ಧೂಪಿಯಾ ಪತಿ-ನಟ ಅಂಗದ್ ಬೇಡಿ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ನೇಹಾ ಬೂದು ಬಣ್ಣದ ಸ್ಯಾಟಿನ್ ಮೆಟೀರಿಯಲ್   ಉಡುಪಿನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದರೆ, ಅಂಗದ್ ಬಿಳಿ ಶರ್ಟ್‌ನೊಂದಿಗೆ ಸಂಪೂರ್ಣ ನೀಲಿ ಫಾರ್ಮಲ್ ಉಡುಪಿನಲ್ಲಿ  ಕಾಣಿಸಿಕೊಂಡರು.

ರಿಯಾ ಚಕ್ರವರ್ತಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರಫಲ್ಡ್  ಫೇದರ್‌ ಮತ್ತು ಓಪನ್‌ ಹೈಲೈಟ್ ಮಾಡಿದ ಟ್ರೆಸ್‌ಗಳೊಂದಿಗೆ ಕಡು ನೀಲಿ  ಗೌನ್‌ನಲ್ಲಿ ಅವರು ಪೋಸ್‌ ನೀಡಿದ್ದು ಹೀಗೆ.

ಮಹೀಪ್ ಕಪೂರ್ ಮತ್ತು ಸೀಮಾ ಸಜ್ದೇಹ್ ಕೂಡ ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಮಹೀಪ್ ಮಿನುಗುವ ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ್ದರೆ, ಸೀಮಾ ಕಪ್ಪು ಕ್ರಾಪ್ ಟಾಪ್ ಜೊತೆಗೆ ಫಾರ್ಮಲ್ ವೈಟ್ ಪ್ಯಾಂಟ್ ಸೂಟ್ ಧರಿಸಿದ್ದರು.

ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ 'ತಾಜಾ ಖಬರ್' ನ ಅಭಿನಯದ ಮೂಲಕ ಅಭಿಮಾನಿಗಳ ಹೃದಯ  ಗೆದ್ದ OTT ಸ್ಟಾರ್ ಭುವನ್ ಬಾಮ್, ಬಿಳಿ ಅಂಗಿ ಮತ್ತು ಕಣ್ಣುಗಳಿಗೆ ಕಪ್ಪು ಕನ್ನಡಕದೊಂದಿಗೆ ಸಂಪೂರ್ಣ ಕಪ್ಪು  ಫಾರ್ಮಲ್ ಉಡುಪಿನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು

Latest Videos

click me!