ಸತ್ಯಜಿತ್ ರೇ ಅವರ ಚಿತ್ರಕಥೆ ಮತ್ತು ಅವರ ಸಾಧನೆಗಳ ಬಗ್ಗೆ ಸಿನಿಪ್ರಿಯರಿಗೆ ತಿಳಿದಿದೆ. ಸತ್ಯಜಿತ್ ರೇ ಅವರು ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಎಷ್ಟರ ಮಟ್ಟಿಗೆ ಅವರು ಸ್ವಾವಲಂಬಿ ಎಂದರೆ ಪೋಸ್ಟರುಗಳನ್ನು ಕೂಡಾ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಅಕ್ಷರಗಳ ಅಚ್ಚುವಿನ್ಯಾಸವನ್ನು ಕೂಡಾ ತಾವೇ ಮಾಡಿಕೊಳ್ಳುತ್ತಿದ್ದರು.