ಕನ್ನಡದ ಯಾವುದೇ ನಟರು ಸ್ಥಾನ ಪಡೆದಿಲ್ಲ: ಒರ್ಮ್ಯಾಕ್ಸ್ ಮೀಡಿಯಾ ಬಿಡುಗಡೆ ಮಾಡಿದ ಡಿಸೆಂಬರ್ ತಿಂಗಳ ಟಾಪ್-10 ನಟರ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಯಾರೊಬ್ಬರೂ ಸ್ಥಾನ ಪಡೆದುಕೊಂಡಿಲ್ಲ. ಕಳೆದ 2 ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ರಿಷಭ್ ಶೆಟ್ಟಿ ಅವರು ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಗ್ಯಾಪ್ ಮಾಡಿದ್ದಾರೆ. ಕಳೆದ ವರ್ಷ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಬಿಡುಗಡೆ ಆದರೂ ಅವರ ಖ್ಯಾತಿ ವರ್ಷ ಪೂರ್ತಿ ಕೊಂಡಾಡುವಷ್ಟು ದೀರ್ಘ ಕಾಲ ಉಳಿಯಲಿಲ್ಲ.
ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಡಿಸೆಂಬರ್‌ನಲ್ಲಿ ಕೊನೆಯ ವಾರದಲ್ಲಿ ಬಿಡುಗಡೆ ಆಗಿದೆ. ಆದ್ದರಿಂದ ಡಿಸೆಂಬರ್ ತಿಂಗಳ ಟಾಪ್-10 ನಟರದಲ್ಲಿ ಸುದೀಪ್ ಕೂಡ ಸ್ಥಾನ ಪಡೆದಿಲ್ಲ. ಉಳಿದಂತೆ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯಂ ಸಖಿ ಹಾಗೂ ದುನಿನಾ ವಿಜಯ್ ಅವರ ಭೀಮ ಸಿನಿಮಾ ಕನ್ನಡದ ಗಡಿ ಬಿಟ್ಟು ಬೇರೆಡೆ ಹೋಗಲಿಲ್ಲ. ಹಾಗಾಗಿ, ರಾಷ್ಟ್ರ ಮಟ್ಟದ ಟಾಪ್-10 ನಟರ ಪಟ್ಟಿಯಲ್ಲಿ ಕನ್ನಡದ ಯಾರೊಬ್ಬರೂ ಸ್ಥಾನ ಪಡೆದಿಲ್ಲ.