‌Dhanush: ನಯನತಾರಾಗೆ ಒಂದು ನ್ಯಾಯ, ದಳಪತಿ ವಿಜಯ್‌ಗೆ ಇನ್ನೊಂದು ನ್ಯಾಯ? ಏನ್ರೀ ಇದು ಧನುಷ್?

Published : Jul 09, 2025, 04:30 PM ISTUpdated : Jul 09, 2025, 04:40 PM IST

ಖ್ಯಾತ ನಟಿ ನಯನತಾರಾ ಜೊತೆ ಕಾಪಿರೈಟ್ ವಿಚಾರದಲ್ಲಿ 10 ಕೋಟಿ ರೂಪಾಯಿ ಕೇಳಿದ್ದ ದನುಷ್, ಈಗ ದಳಪತಿ ವಿಜಯ್ ಅವರ ಬಹುನಿರೀಕ್ಷಿತ 'ಜನನಾಯಕ' ಸಿನಿಮಾಕ್ಕೆ ಸಹಾಯ ಮಾಡಿದ್ದಾರಂತೆ.

PREV
14

ತಮಿಳು ಚಿತ್ರರಂಗದಲ್ಲಿ ಧನುಷ್ ಅವರು ಸ್ಟಾರ್ ನಟ. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. 'ಕುಬೇರ' ತಮಿಳಿನಲ್ಲಿ ಸೋತರೂ ತೆಲುಗಿನಲ್ಲಿ ಸೂಪರ್ ಹಿಟ್ ಆಯ್ತು. ಬಾಲಿವುಡ್‌ನಲ್ಲಿ 'ತೇರೆ ಇಷ್ಕ್ ಮೇ' ಸಿನಿಮಾದಲ್ಲಿ ನಟಿಸಿದ್ದಾರೆ. 'ಇಡ್ಲಿಕಡೆ' ಸಿನಿಮಾವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡ್ತಿದ್ದಾರೆ.

24

ಬ್ಯುಸಿ ನಟನಾದ್ರೂ ಧನುಷ್ ಸುತ್ತ ವಿವಾದಗಳಿವೆ. ನಯನತಾರಾ ಡಾಕ್ಯುಮೆಂಟರಿಯಲ್ಲಿ 'ನಾನುಂ ರೌಡಿ' ವೀಡಿಯೋ ಬಳಸಿದ್ದಕ್ಕೆ 10 ಕೋಟಿ ರೂಪಾಯಿ ಪರಿಹಾರ ಕೇಳಿದ್ರು. ನಯನತಾರಾ ಅವರು ಧನುಷ್ ವಿರುದ್ಧ ಹೇಳಿಕೆ ಕೊಟ್ರು. ಧನುಷ್‌ ಅವರು ಕಾನೂನಿನ ಮೊರೆ ಹೋದರು. 

34

ನಯನತಾರಾ ಜೊತೆ ಜಗಳವಾಡಿದ್ದ ದನುಷ್, ಸಿಂಬು-ವೆಟ್ರಿಮಾರನ್ 'Vendhu Thanindhathu Kaadu' ಸಿನಿಮಾಕ್ಕೆ 20 ಕೋಟಿ ರೂಪಾಯಿ ಕೇಳಿದ್ರಂತೆ. ಆದ್ರೆ ಇದು ವದಂತಿ ಅಂತ ವೆಟ್ರಿಮಾರನ್ ಹೇಳಿದ್ರು. ಧನುಷ್ ಫ್ರೀಯಾಗಿ NOC ಕೊಟ್ಟರಂತೆ.

44

ವಿಜಯ್ 'ಜನನಾಯಕ' ಸಿನಿಮಾಕ್ಕೆ ಧನುಷ್ ಅವರೇ 4 ಕೋಟಿ ಸೆಟ್ ಫ್ರೀಯಾಗಿ ಕೊಟ್ಟಿದ್ದಾರಂತೆ. ಸಿಂಬು, ವಿಜಯ್‌ಗೆ ಫ್ರೀಯಾಗಿ ಕೊಟ್ಟ ಧನುಷ್, ನಯನತಾರಾಗೆ ಮಾತ್ರ ದುಡ್ಡು ಕೇಳಿದ್ದೇಕೆ ಅಂತ ಜನ ಕೇಳ್ತಿದ್ದಾರೆ.

Read more Photos on
click me!

Recommended Stories