ಇಲಿಯಾನಾ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟಿದ್ದೇಕೆ?

First Published | Feb 3, 2024, 2:27 PM IST

ಇಲಿಯಾನಾ ಡಿಕ್ರೂಜ್ ತನ್ನ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟಿದ್ದರ ಹಿಂದಿನ ಕಾರಣಗಳನ್ನು ಹೇಳಿದ್ದಾರೆ. ಜೊತೆಗೆ, ತಾವು ಪೋಸ್ಟ್ ಪಾರ್ಟಂ ಖಿನ್ನತೆ ಅನುಭವಿಸಿದ್ದಾಗಿಯೂ ಬಹಿರಂಗಪಡಿಸಿದ್ದಾರೆ.

ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು ಇಲಿಯಾನಾ ಡಿಕ್ರೂಜ್. ಯೋಗದಿಂದಲೇ ಮೈಕಟ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದ ಇಲಿಯಾನಾ, ಬರ್ಫಿ, ರುಸ್ತೊಮ್, ಬಾದ್‌ಶಾಹೋ ಮತ್ತು ರೈಡ್‌ನಂತಹ ಉತ್ತಮ ಚಿತ್ರಗಳಲ್ಲಿ ಅಭಿನಯಿಸಿ ಅಸಂಖ್ಯಾತ ಹೃದಯಗಳನ್ನು ಗೆದ್ದಿದ್ದಾರೆ. ಪ್ರಸ್ತುತ ನಟಿಯು ಸಂಗಾತಿ ಮೈಕೆಲ್ ಡೋಲನ್ ಮತ್ತು ಅವರ ಮಗ ಕೋವಾ ಫೀನಿಕ್ಸ್ ಜೊತೆಗೆ ಸಮಯ ಕಳೆಯುತ್ತಿದ್ದಾರೆ.

ಆಗಸ್ಟ್ 2023ರಲ್ಲಿ ತನ್ನ ಮಗನ ಆಗಮನದೊಂದಿಗೆ ತಾಯ್ತನದತ್ತ ಹೆಜ್ಜೆ ಹಾಕಿದ ಇಲಿಯಾನಾ, 2024ರಲ್ಲಿ ಹೊಸ ಚಿತ್ರದೊಂದಿಗೆ ಮತ್ತೆ ಬಾಲಿವುಡ್‌ಗೆ ಮರಳುತ್ತಿದ್ದಾರೆ.

ಅಂದ ಹಾಗೆ ಇಲಿಯಾನಾ ತಮ್ಮ ಮಗು, ಅದಕ್ಕಿಟ್ಟ ಹೆಸರು, ಹೆರಿಗೆ ನಂತರದ ಖಿನ್ನತೆ, ಮುಂದನ ಚಿತ್ರಗಳು ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ತಿಳಿಸಿದ್ದಾರೆ. 

Tap to resize

ಮಗನ ಹೆಸರು
ಇಲಿಯಾನಾ ಡಿಕ್ರೂಜ್ ತನ್ನ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಸಿದ್ದಾರೆ. ಬಹಳಷ್ಟು ಜನರಿಗೆ ಇದೆಂಥಾ ಹೆಸರಪ್ಪಾ ಎನಿಸಿದೆ. ಆದರೆ ಈ ಬಗ್ಗೆ ವಿವರಣೆ ಕೊಟ್ಟಿದ್ದಾರೆ ನಟಿ.
ಅವರು ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ಹೆಣ್ಣು ಮಗುವೇ ಇದೆ ಎಂದು ಸಂಪೂರ್ಣವಾಗಿ ನಂಬಿದ್ದರಂತೆ. ಒಮ್ಮೆಯೂ ಗಂಡಿರಬಹುದು ಎಂಬ ಆಲೋಚನೆಯೂ ಬಂದಿರಲಿಲ್ಲ. ಹೆಣ್ಣು ಹುಟ್ಟಿದರೆ ಏನೆಲ್ಲ ಹೆಸರಿಡಬೇಕೆಂಬ ಪಟ್ಟಿ ತಯಾರಿಸಿಕೊಂಡಿದ್ದ ಇಲಿಯಾನಾ, ಗಂಡು ಮಗುವಿನ ಹೆಸರಿನ ಬಗ್ಗೆ ಮಾತ್ರ ಎಂದಿಗೂ ಯೋಚಿಸಿರಲಿಲ್ಲ.

ಒಂದೆರಡು ಬಾರಿ ಗಂಡು ಮಗುವಿನ ಹೆಸರೂ ಸಿದ್ಧವಾಗಿಟ್ಟುಕೊಳ್ಳಬೇಕೇ ಎಂದುಕೊಂಡರೂ, ಇಲ್ಲ ನನಗೆ ಆಗುವುದು ಹೆಣ್ಣು ಮಗುವೇ ಎಂದು ಖಚಿತವಾಗಿದ್ದೆ, ಆದರೆ ಕಡೆಯಲ್ಲಿ ಹುಟ್ಟಿದ್ದು ಮಗ ಎಂದಿದ್ದಾರೆ. 

ಇನ್ನು, ನನಗೆ ಹುಟ್ಟುವ ಮಗುವಿಗೆ ವಿಶಿಷ್ಠ ಹೆಸರಿಡಬೇಕೆಂಬ ಆಶೆ ನನಗೆ ಯಾವಾಗಲೂ ಇತ್ತು. ನನ್ನ ಹೆಸರೂ ವಿಶಿಷ್ಠವಾಗಿದೆ. ಅಂತೆಯೇ ಮಗನಿಗೂ ಹೊಸ ಹೆಸರಿಡಬೇಕು ಎಂದುಕೊಂಡಿದ್ದನ್ನು ಪಾರ್ಟ್ನರ್ ಮೈಕೆಲ್ ಜೊತೆ ಹೇಳಿಕೊಂಡಿದ್ದೆ ಎಂದು ನಟಿ ಹೇಳಿದ್ದಾರೆ. 

ಕಡೆಗೆ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟೆವು. ಮಗನ ಮಧ್ಯದ ಹೆಸರು 'ಫೀನಿಕ್ಸ್' ಎಂದರೆ, 'ಫೀನಿಕ್ಸ್‌ ಪಕ್ಷಿಯಂತೆ ಬೂದಿಯಿಂದ ಮೇಲೇರುತ್ತಿದ್ದೇನೆ' ಎಂಬ ಸಾಲಿನಿಂದ ಸ್ಫೂರ್ತಿ ಪಡೆದೆ. 2018ರಲ್ಲಿಯೇ ನಾನು ಫೀನಿಕ್ಸ್ ಪಕ್ಷಿಯ ಹಚ್ಚೆ ಹಾಕಿಸಿಕೊಂಡಿದ್ದೇನೆ. ಅದು ಆಳವಾದ ಅರ್ಥ ಹೊಂದಿದೆ ಎಂದು ನನಗನಿಸುತ್ತದೆ.

ಕೋಯಾ ಎಂಬುದು ನಾನು ಹೆಣ್ಣುಮಗಳಿಗೆ ಹುಡುಕಿಕೊಂಡಿದ್ದ ಹೆಸರು. ಮೈಕ್ ಹೆಸರನ್ನು ಇಷ್ಟಪಟ್ಟಿದ್ದಾರೆ ಮತ್ತು ಕೋಯಾ ಬೆಳೆದಾಗ ಅದನ್ನು ಇಷ್ಟಪಡುತ್ತಾನೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ಪ್ರಸವಾ ನಂತರದ ಖಿನ್ನತೆ
ಇಲಿಯಾನಾ ಡಿಕ್ರೂಜ್ ಅವರು ಪ್ರಸವಾನಂತರದ ಖಿನ್ನತೆಯನ್ನು ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಈ ಸಮಯದಲ್ಲಿ ಸಂಗಾತಿ ಮೈಕೆಲ್ ಡೋಲನ್ ತನ್ನ ಜೊತೆಯಲ್ಲಿ ನಿಂತು  ಸವಾಲಿನ ಹಂತವನ್ನು ನಿಭಾಯಿಸಲು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ. 

ದೋ ಔರ್ ದೋ ಪ್ಯಾರ್ 
ತಾಯಿಯಾದ ಬಳಿಕ ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಇಲಿಯಾನಾ, 'ದೋ ಔರ್ ದೋ ಪ್ಯಾರ್' ಚಿತ್ರದಲ್ಲಿ ನಟಿಸಿದ್ದಾರೆ. ಇದು ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ  ವಿದ್ಯಾ ಬಾಲನ್, ಸೆಂಧಿಲ್ ರಾಮಮೂರ್ತಿ ಮತ್ತು ಪ್ರತೀಕ್ ಗಾಂಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
 

Latest Videos

click me!