ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ರೈಲುಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದೇ ಇರುತ್ತವೆ. ಕೆಲವೊಂದು ಚಿತ್ರಗಳ ಭಾಗಶಃ ಚಿತ್ರೀಕರಣ ರೈಲುಗಳಲ್ಲಿಯೇ ನಡೆದಿರುತ್ತದೆ. ಡಿಡಿಎಲ್‌ಜೆ ಚಿತ್ರದ ರೈಲ್ವೆ ನಿಲ್ದಾಣದ ಕೊನೆಯ ದೃಶ್ಯ ಇಂದಿಗೂ ಹಚ್ಚ ಹಸಿರಾಗಿದೆ. ದಿಲ್ ಸೇ ಸಿನಿಮಾದ ಚಯ್ಯಾ ಚಯ್ಯಾ ಹಾಡು ಕೇಳತ್ತಿದ್ರೆ ಎದೆಯಲ್ಲಿ ರೈಲು ಚಲಿಸಿದಂತಾಗುತ್ತದೆ.
ಕನ್ನಡದ ಯಾರೇ ನೀನು ಚೆಲುವೆಯ ಚಕ್ಕೋಟಾ ಹಾಡು, ಮುಸ್ಸಂಜೆ ಮಾತು ಸಿನಿಮಾದ ಏನಾಗಲಿ ಮುಂದೆ ಸಾಗಲಿ ಹಾಡುಗಳು ರೈಲಿನಲ್ಲಿಯೇ ಚಿತ್ರೀಕರಣಗೊಂಡಿವೆ. ಇದೇ ರೀತಿ ಬಾಲಿವುಡ್, ಹಾಲಿವುಡ್ ಹಲವು ಸಿನಿಮಾಗಳು ರೈಲಿನಲ್ಲಿಯೇ ಚಿತ್ರೀಕರಣಗೊಂಡಿವೆ. ಆದ್ರೆ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಮಾತ್ರ ನೋಡುಗರನ್ನು ವಿಸ್ಮಯಗೊಳಿಸಿತ್ತು. ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಸಿನಿಮಾದ ದೃಶ್ಯಗಳು ಮತ್ತು ಚಿತ್ರದ ವಿಲನ್ ಮುಖ ಕಣ್ಮುಂದೆ ಬಂದ್ರೆ ಎಂಟೆದೆ ಗುಂಡಿಗಿರೋ ವ್ಯಕ್ತಿಗೂ ಒಂದು ಕ್ಷಣ ಭಯವಾಗುತ್ತದೆ.
1980-90ರ ದಶಕದಲ್ಲಿ ರೈಲು ಪ್ರಯಾಣದ ವೇಳೆ ಕಳ್ಳತನ ಆಗುತ್ತಿತ್ತು ಎಂಬ ಸುದ್ದಿಗಳನ್ನು ಕೇಳಿರುತ್ತವೆ. ಆದ್ರೆ ಇಂದು ತಂತ್ರಜ್ಞಾನ ಬದಲಾಗಿದ್ದು, ಎಲ್ಲರ ಕೈಗಳಲ್ಲಿಯೂ ಮೊಬೈಲ್ ಇರುತ್ತದೆ. ಅಪಾಯ ಎದುರಾದ್ರೆ ಕೂಡಲೇ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಇನ್ನು ರಾತ್ರಿ ಪ್ರಯಾಣ ರೈಲುಗಳಲ್ಲಿ ಪೊಲೀಸ್ ಸಿಬ್ಬಂದಿ ಸಹ ಇರುತ್ತಾರೆ. ಆದ್ರಿಂದ ರೈಲು ಪ್ರಯಾಣ ಸುಖಕರವಾಗಿರುತ್ತದೆ. ನಾವು ಹೇಳುತ್ತಿರುವ ಸಿನಿಮಾದಲ್ಲಿ ತಂಡವೊಂದು ಹೇಗೆ ಪ್ರಯಾಣಿಕರನ್ನು ದೋಚುತ್ತಾರೆ ಎಂಬುದನ್ನು ತೋರಿಸಲಾಗಿದೆ.
ಇಂದು ನಾವು ಹೇಳುತ್ತಿರುವ ಚಿತ್ರದ ಹೆಸರು ಕಿಲ್. ನಿಖಿಲ್ ನಾಗೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಯ, ರಾಘವ್ ಜುಯಲ್, ಆಶೀಶ್ ವಿದ್ಯಾರ್ಥಿ, ಹರ್ಷ ಛಯಾ, ತಾನ್ಯಾ ಮನಿಕಟಲ್, ಅಭಿಷೇಕ್ ಚೌಹಾಣ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಚಿತ್ರತಂಡ ಹೊಂದಿದೆ. ಜುಲೈ 5ರಂದು ಬಿಡುಗಡೆಯಾದ ಚಿತ್ರ ಓಟಿಟಿಯಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
Kill movie
ಸದಾ ನಗಿಸುವ, ಡ್ಯಾನ್ಸರ್ ರಾಘವ್ ಜುಯಾಲ್ ನಿಮಗೆ ಇಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಎಲ್ಲಾ ತರಹದ ನಟನೆಗೂ ಸೈ ಎಂಬದನ್ನು ಸಾಬೀತು ಮಾಡಿದ್ದಾರೆ. ಚಿತ್ರದ ಶೇ.90 ರಷ್ಟು ಚಿತ್ರೀಕರಣ ರೈಲಿನಲ್ಲಿ ನಡೆದಿದೆ. ರಾಘವ್ ಜುಯಲ್ ಹಾಗೂ ಆತನ ಸುಮಾರು 30 ರಿಂದ 40 ಸಹಚರರ ತಂಡ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ಗೆ ನುಗ್ಗುತ್ತದೆ. ದರೋಡೆಗೂ ಮುನ್ನವೇ ಎಲ್ಲಾ ಸಿದ್ದತೆಯನ್ನು ದರೋಡೆಕೋರರ ತಂಡ ಸಿದ್ಧತೆ ಮಾಡಿಕೊಂಡಿರುತ್ತಾರೆ. ಜೈಲಿನೊಳಗೆ ಬರುತ್ತಿದ್ದಂತೆ ಪ್ರಯಾಣಿಕರಿಗೆ ನೆಟ್‌ವರ್ಕ್ ಸಿಗದಂತೆ ಡಿವೈಸ್ ಅಳವಡಿಸುತ್ತಾರೆ. ಸಿಕ್ಕ ಸಿಕ್ಕವರನ್ನು ಕೊಚ್ಚುತ್ತಾ ಕೊಲ್ಲುತ್ತಾ ದರೋಡೆಕಾರರ ಗ್ಯಾಂಗ್ ಮುಂದಾಗುತ್ತದೆ.
ಇದೇ ರೈಲಿನಲ್ಲಿ ಪ್ರಯಾಣಿಸುತ್ತಿರುವ ಇಂಡಿಯನ್ ಆರ್ಮಿಯ ಇಬ್ಬರು ಕಮಾಂಡೋಗಳು 40 ದರೋಡೆಕೋರರನ್ನು ಎದುರಿಸುತ್ತಾರೆ. ಇಡೀ ರೈಲು ಸಂಪೂರ್ಣ ರಕ್ತಸಿಕ್ತವಾಗುತ್ತದೆ. ಸಿನಿಮಾ ಕೊನೆಯಾಗುವರೆಗೂ ಆಕ್ಷನ್ ಸೀನ್‌ಗಳಿಂದ ಚಿತ್ರ ತುಂಬಿದೆ. ಈ ಸಿನಿಮಾ ನೋಡಿದವರಿಗೆ ರೈಲು ಪ್ರಯಾಣದ ವೇಳೆ ಚಿತ್ರದ ಸನ್ನಿವೇಶಗಳು ಖಂಡಿತ ಕಣ್ಮುಂದೆ ಬರುತ್ತವೆ.