44 ವರ್ಷದ ಶ್ವೇತಾ ತಿವಾರಿ ನೋಡಿದ್ರೆ, ಇವ್ರ ವಯಸ್ಸು ಹಿಂದಕ್ಕೆ ಚಲಿಸುತ್ತೆ ಅನ್ಸತ್ತೆ!

Published : Sep 15, 2024, 08:52 AM ISTUpdated : Sep 16, 2024, 08:28 AM IST

ಬಾಲಿವುಡ್ ನಟಿ ಶ್ವೇತಾ ತಿವಾರಿ ಯಾವಾಗ್ಲೂ ತಮ್ಮ ಸ್ಟೈಲಿಶ್ ಹಾಟ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರ್ತಾರೆ. ಇವರ ವಯಸ್ಸು 44 ಅಂದ್ರೆ ಯಾರ್ ನಂಬ್ತಾರೆ ಅಲ್ವಾ?   

PREV
17
44 ವರ್ಷದ ಶ್ವೇತಾ ತಿವಾರಿ ನೋಡಿದ್ರೆ, ಇವ್ರ ವಯಸ್ಸು ಹಿಂದಕ್ಕೆ ಚಲಿಸುತ್ತೆ ಅನ್ಸತ್ತೆ!

ಕಿರುತೆರೆ ಮೂಲಕ ಎಂಟ್ರಿ ಕೊಟ್ಟು ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು, ಇದೀಗ ಬಾಲಿವುಡ್ ನಲ್ಲೂ ಶೈನ್ ಆಗುತ್ತಿರುವ ನಟಿ ಶ್ವೇತಾ ತಿವಾರಿ (Shweta Tiwari). ಇವರನ್ನ ನೋಡಿದ್ರೆ. ವಯಸ್ಸು ಹಿಂದಕ್ಕೆ ಚಲಿಸುತ್ತೆ ಅನಿಸುತ್ತೆ. 
 

27

ಶ್ವೇತಾ 1999 ರಲ್ಲಿ ಪ್ರಸಾರವಾಗುತ್ತಿದ್ದ "ಕಲೀರೀನ್" ಸೀರಿಯಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಕಸೌಟಿ ಜಿಂದಗಿ ಕೇ ಧಾರವಾಹಿಯ ಮೂಲಕ ಇವರ ಜನಪ್ರಿಯತೆ ಹೆಚ್ಚಿತ್ತು. ಅಲ್ಲಿಂದ ಇಲ್ಲಿವರೆಗೂ ಶ್ವೇತಾ ಸದಾ ಸುದ್ದಿಯಲ್ಲಿರುವ ನಟಿ. 
 

37

ಕಸೌಟಿ ಸೀರಿಯಲ್ ಆರಂಭವಾಗುವಾಗ ಶ್ವೇತಾಗೆ ಸಿಗುತ್ತಿದ್ದ ವೇತನ ಎಪಿಸೋಡ್ ಗೆ 5000ರೂ ಅಷ್ಟೇ, ಆದ್ರೆ ಸೀರಿಯಲ್ ಮುಗಿಯುವ ಹೊತ್ತಿಗೆ ನಟಿಯ ಜನಪ್ರಿಯತೆ ಎಷ್ಟಿತ್ತು ಅಂದ್ರೆ ನಟಿ ದಿನಕ್ಕೆ ಬರೋಬ್ಬರಿ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದರು ಅಂದ್ರೆ ನಂಬಲೇಬೇಕು. 
 

47

ಸದ್ಯಕ್ಕೆ ಶ್ವೇತಾ ಹೆಚ್ಚು ಸುದ್ದಿಯಾಗುತ್ತಿರೋದು ಅವರ ಅಂದ, ಚಂದ, ಸ್ಟೈಲ್ ನಿಂದಾಗಿ. ಸೋಶಿಯಲ್ ಮೀಡಿಯಾದಲ್ಲಿ (social media) ಹೆಚ್ಚಾಗಿ ಆಕ್ಟೀವ್ ಆಗಿರುವ ನಟಿ ಶ್ವೇತಾ ತಿವಾರಿ, ಹೆಚ್ಚಾಗಿ ತಮ್ಮ ಸ್ಟೈಲಿಶ್ ಆಗಿರುವ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇವರ ಲುಕ್ ನೋಡಿದ್ರೆ ಇವರಿಗೆ ನಿಜವಾಗ್ಲೂ 44 ವರ್ಷ ವಯಸ್ಸಾಗಿದ್ಯಾ? ಅಂತ ಕೇಳದೇ ಇರಲಾರರು. 
 

57

ಇತ್ತೀಚೆಗೆ ಶ್ವೇತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ಹಂಚಿಕೊಂಡಿದ್ದರು. ಥೈ ಹೈ ಸ್ಲಿಟ್ ಇರುವ ವೈಟ್ ಬಣ್ಣದ ಪ್ಲೋರಲ್ ಡ್ರೆಸ್ ಧರಿಸಿದ್ದು, ಇದು ಸಖತ್ ಸ್ಟೈಲಿಶ್ ಆಗಿದೆ. ಇದನ್ನ ನೋಡಿ ಜನ ಏಜ್ ಜಸ್ಟ್ ನಂಬರ್ ಅಂತಿದ್ದಾರೆ, ಅಷ್ಟೇ ಅಲ್ಲ ಇವರ ವಿಷ್ಯದಲ್ಲಿ ವಯಸ್ಸು ಹಿಂದಕ್ಕೆ ಚಲಿಸುತ್ತಿದೆ ಅಂತಾನೂ ಹೇಳಿದ್ದಾರೆ. 
 

67

ಅಷ್ಟೇ ಇನ್ನೂ ಒಬ್ಬರು ಇವರ ಫೋಟೊಕ್ಕೆ ಕಾಮೆಂಟ್ ಮಾಡಿ, ನಾವು ಸಣ್ಣವರಿರುವಾಗ ಇವರು ಹೀಗೆ ಇದ್ರೂ, ಈಗ ನಮಗೆ ವಯಸ್ಸಾಗಿದೆ, ಆದ್ರೂ ಶ್ವೇತಾ ತಿವಾರಿ ಹಾಗೆಯೇ ಇದ್ದಾರೆ , ಏನು ಇವರು ವಯಸ್ಸು ಒಂದೇ ಕಡೆ ನಿಂತಿದ್ಯಾ? ಹೆಚ್ಚಾಗೋದೆ ಇಲ್ವಾ? ಎಂದು ಕೇಳಿದ್ದಾರೆ. 
 

77

ಶ್ವೇತಾ ತಿವಾರಿ ಇನ್ನೂ ಯಂಗ್ ಆಗಿರೋದಕ್ಕೆ ಕಾರಣ ಆಕೆಯ ಫಿಟ್ನೆಸ್ (Shweta Fitness) ಅಂತಾನೆ ಹೇಳಬಹುದು. ಯಾಕಂದ್ರೆ ಶ್ವೇತಾ ಯಾವತ್ತೂ ಫಿಟ್ನೆಸ್ ವಿಷ್ಯದಲ್ಲಿ ರಾಜಿ ಮಾಡಿಕೊಳ್ಳೋದೆ ಇಲ್ಲ. ಎರಡು ಮಕ್ಕಳ ತಾಯಿಯಾಗಿರುವ ಶ್ವೇತಾ ಸರಿಯಾದ ಆಹಾರ ಕ್ರಮ, ಫಿಟ್ನೆಸ್ ರೂಟ್ ಫಾಲೋ ಮಾಡಿಕೊಳ್ಳುವ ಮೂಲಕ ತಮ್ಮ ತೂಕ ಇಳಿಸಿಕೊಂಡು, ಫಿಟ್ನೆಸ್ ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿಯೇ ನಟಿ ಇನ್ನೂ ಯಂಗ್ ಆಗಿದ್ದು, ತಮ್ಮ ಫೋಟೊ ಶೂಟ್ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸುತ್ತಿದ್ದಾರೆ. 
 

Read more Photos on
click me!

Recommended Stories