ಡಿವೋರ್ಸ್ ಆದ್ಮೇಲೆ ಬಾಯಿ ಮುಚ್ಕೊಂಡು ಮನೆಯಲ್ಲಿ ಇರು ಅಂದ್ರು, ತಪ್ಪು ಮಾಡಿಲ್ಲ ಅಂದ್ರು ಹೆದರಬೇಕಾ: ಸಮಂತಾ
ಡಿವೋರ್ಸ್ ಪಡೆದ ಮೇಲೆ ಜನರು ಯಾವ ರೀತಿ ರಿಯಾಕ್ಟ್ ಮಾಡುತ್ತಿದ್ದರು? ಸಮಂತಾ ಸಿನಿಮಾನೇ ಮಾಡಬಾರದು ಅಂತ ಮಾತುಗಳು ಬಂದಿದ್ದು ನಿಜವೇ?
ಡಿವೋರ್ಸ್ ಪಡೆದ ಮೇಲೆ ಜನರು ಯಾವ ರೀತಿ ರಿಯಾಕ್ಟ್ ಮಾಡುತ್ತಿದ್ದರು? ಸಮಂತಾ ಸಿನಿಮಾನೇ ಮಾಡಬಾರದು ಅಂತ ಮಾತುಗಳು ಬಂದಿದ್ದು ನಿಜವೇ?
ಸೌತ್ ಸಿನಿಮಾರಂಗದ ಬ್ಯೂಟಿ ಸಮಂತಾ ರುತ್ ಫ್ರಭು ಜೀವನ ನಿಜಕ್ಕೂ ಹಲವರಿಗೆ ಸ್ಪೂರ್ತಿ. ಸ್ವಂತ ಕಾಲಿನ ಮೇಲೆ ನಿಂತುಕೊಂಡು ದುಡಿದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಇಂದಿಗೂ ತಾನು ಮಾಡದ ತಪ್ಪಿಗೆ ಅನುಭವಿಸುತ್ತಿದ್ದಾರೆ.
ಹಲವು ವರ್ಷಗಳ ಕಾಲ ಸಮಂತಾ ಮತ್ತು ನಾಗಚೈತನ್ಯ ಪ್ರೀತಿ ಮದುವೆ ಮಾಡಿಕೊಂಡರು. ಏನೋ ಕೂಡಿ ಬರದಕಾರಣ ಡಿವೋರ್ಸ್ ಪಡೆದರು. ಈ ಡಿವೋರ್ಸ್ ನಂತರ ಸಮಂತಾ ಎದುರಿಸದ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ಅಷ್ಟಿಷ್ಟಲ್ಲ.
'ನಾವು ದೂರ ಆಗಬೇಕು ಎಂದು ನಿರ್ಧರಿಸಿ ಡಿವೋರ್ಡ್ ಪಡೆದಾಗ ಅನೌನ್ಸ್‌ಮೆಂಟ್ ಮಾಡುತ್ತೀವಿ. ಆ ಸಮಯದಲ್ಲಿ ನನ್ನ ಅಭಿಮಾನಿಗಳು ನನ್ನ ಸ್ನೇಹಿತರು ಮತ್ತ ಕುಟುಂಬಸ್ಥರು ನನಗೆ ಬೈದರು'
'ನೀನು ಮನೆಯಲ್ಲಿ ಇರುತ್ತೀಯಾ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಐಟಂ ಸಾಂಗ್ ಮಾಡುವಂತೆ ಇಲ್ಲ ಅಂತ ಕಂಡಿಷನ್ ಹಾಕಲು ಶುರು ಮಾಡುತ್ತಾರೆ' ಎಂದು ಸಮಂತಾ ಮಾತನಾಡಿದ್ದಾರೆ.
ವೈವಾಹಿಕ ಜೀವನದಲ್ಲಿ ನಾನು 100% ಶ್ರಮ ಹಾಕಿದ್ದೀನಿ ಆದರೆ ಅದು ವರ್ಕೌಟ್ ಆಗಲಿಲ್ಲ ಹಾಗಂತ ಮಾಡದ ತಪ್ಪಿಗೆ ಬೇಸರ ಮಾಡ್ಕೊಂಡು ಯಾಕೆ ಕುಳಿತುಕೊಳ್ಳಬೇಕು? ಎಂದು ಸಮಂತಾ ಹೇಳಿದ್ದಾರೆ.
ನಾನು ಯಾಕೆ ಬಚ್ಚಿಟ್ಟುಕೊಳ್ಳಬೇಕು? ನಾನು ಯಾವುದೇ ತಪ್ಪು ಮಾಡಿಲ್ಲ. ಸುಮ್ಮನೆ ಇದ್ದುಕೊಂಡು ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ತಣ್ಣಗಾದ ಮೇಲೆ ಯಾಕೆ ಮಾತನಾಡಬೇಕು?
ತಪ್ಪು ಮಾಡಿದವರು ಮಾತ್ರ ಹೆದರಿಕೊಂಡು ಸೈಲೆಂಟ್ ಆಗಿದ್ದು ಬಿಡುತ್ತಾರೆ. ಸ್ವಲ್ಪ ಕಾಣಿಸಿಕೊಳ್ಳುವುದು ಮಾಡುತ್ತಾರೆ ಆದರೆ ನಾನು ಯಾಕೆ ಮಾಡಬೇಕು ಅನ್ನೋ ನನ್ನ ಪ್ರಶ್ನೆ ಎಂದಿದ್ದಾರೆ ಸಮಂತಾ.