'ನನಗೆ ಲವ್ ಮಾಡುವಾಗ ಡಿಸ್ಕೌಂಟ್ ಮಾಡೋಕೆ ಇಷ್ಟವಾಗೋದಿಲ್ಲ. ನಾನು ಯಾರದೇ ಜೊತೆ ಮಾತನ್ನಾಡಿದರೂ, ಯಾರನ್ನೇ ಭೇಟಿಯಾದರೂ ಕೂಡ ಅದು ನನಗೆ ಸಂಪೂರ್ಣ ಎನ್ನಿಸಬೇಕು' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಆದರೆ, ಅವರ ಮಾತಿಗೆ ಕಾಮೆಂಟ್ ಏನೆಲ್ಲಾ ಬಂದಿದೆ ನೋಡಿ..!
'ನಾನು ತುಂಬಾ ಎಮೋಶನಲ್ ಪರ್ಸನ್' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ನನಗೆ ಪ್ರೀತಿ ಮಾಡೋದ್ರಲ್ಲಿ ಬಾರ್ಡರ್ ಇಟ್ಟುಕೊಂಡು ನಿರ್ವಹಿಸಲು ಸಾಧ್ಯವಾಗೋದಿಲ್ಲ. ನಾನು ಯಾರನ್ನಾದರೂ ಪ್ರೀತಿಸಿದರೆ ಅದನ್ನು 100% ಮಾಡುತ್ತೇನೆ.
28
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
'ನನಗೆ ಲವ್ ಮಾಡುವಾಗ ಡಿಸ್ಕೌಂಟ್ ಮಾಡೋಕೆ ಇಷ್ಟವಾಗೋದಿಲ್ಲ. ನಾನು ಯಾರದೇ ಜೊತೆ ಮಾತನ್ನಾಡಿದರೂ, ಯಾರನ್ನೇ ಭೇಟಿಯಾದರೂ ಕೂಡ ಅದು ನನಗೆ ಸಂಪೂರ್ಣ ಎನ್ನಿಸಬೇಕು' ಎಂದಿದ್ದಾರೆ ನ್ಯಾಷನಲ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ.
38
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
ನನಗೆ ಈ ಬಗ್ಗೆ ಸಾಕಷ್ಟು ಭಯವೂ ಇದೆ. ಏಕೆಂದರೆ, ನಾನು ಯಾರನ್ನಾದರೂ ಸಂಪೂರ್ಣವಾಗಿ ನಂಬಿ ಪ್ರೀತಿಸುತ್ತೇನೆ. ಆದರೆ ಅವರಿಗೆ ಆ ಬಗ್ಗೆ ಏನು ಅನ್ನಿಸುತ್ತೋ ಏನೋ. ಏಕೆಂದರೆ, ಕೆಲವರು ಎಲ್ಲದಕ್ಕೂ ಒಂದು ಮಿತಿ ಹಾಕಿಕೊಂಡಿರುತ್ತಾರೆ.
ಕೆಲವರ ಪ್ರಕಾರ, ಯಾರನ್ನೂ ಅತಿಯಾಗಿ ಪ್ರೀತಿಸಬಾರದು, ನಂಬಬಾರದು. ಬಹಳಷ್ಟು ಜನರು ಇಂತಹ ಅನೇಕ ನಂಬಿಕೆಗಳನ್ನು ಇಟ್ಟುಕೊಂಡೇ ಲವ್, ಫ್ರೆಂಡ್‌ಶಿಪ್ ಎಲ್ಲವನ್ನೂ ಅಳೆದೂ ತೂಗಿಯೇ ಮಾಡುತ್ತಾರೆ. ಆದರೆ ನನಗದು ಆಗೋದಿಲ್ಲ.
58
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
ನನ್ನ ಪ್ರಕಾರ, ಯಾರನ್ನಾದರೂ ನಂಬಿದರೆ ಸಂಪೂರ್ಣವಾಗಿ ನಂಬಬೇಕು, ಯಾರನ್ನಾದ್ರೂ ಪ್ರೀತಿಸಿದರೆ ಪೂರ್ತಿಯಾಗಿ ನಮ್ಮನ್ನೇ ಅವರಿಗೆ ಅರ್ಪಿಸಿಕೊಂಡು ಬಿಡಬೇಕು. ಅದೇ ಲವ್, ಅದೇ ಲೈಫ್ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
68
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
ಅಂದಹಾಗೆ, ನಟಿ ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ 'ಥಮ' ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ಭಾರತದ ಟಾಪ್ ಹೀರೋಯಿನ್ ಎನ್ನಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥವೂ ಆಗಿದೆ ಎಂಬ ಸುದ್ದಿ ಇದೆ.
78
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
ಇನ್ನು, ತಮ್ಮ ತಂಗಿ ಶೀಮಾನ್ ಬಗ್ಗೆ ಕೂಡ ಹೇಳಿದ್ದಾರೆ ರಶ್ಮಿಕಾ ಮಂದಣ್ಣ. ನನ್ನ ಬೆಳಕಿನ ನೆರಳಲ್ಲಿ, ನನ್ನ ಸ್ಟಾರ್‌ಗಿರಿಯಲ್ಲಿ ಅವಳ ಜೀವನ ಅಸಹಜವಾಗಿ ನರಳಬೇಕಿಲ್ಲ. ಅವಳು ಸ್ವಾಭಾವಿಕವಾಗಿ ಅವಳಾಗಿಯೇ ಬೆಳೆಯಲಿ. ಬದುಕು ಅವಳಿಗೆ ಏನು ಕೊಡಬೇಕೋ ಅದನ್ನು ಕೊಡುತ್ತದೆ, ನಾನು ಅಕ್ಕನಾಗಿ ಅವಳಿಗೆ ಸುರಕ್ಷಿತ ಭಾವವನ್ನು ಖಂಡಿತ ಕೊಡುತ್ತೇನೆ. ಅವಳಿಗೆ ಅವಳಿಂದ ಪರಿಹರಿಸಲಾಗದ ಕಷ್ಟ ಏನೇ ಬಂದರೂ ನಾನು ಜತೆಯಲ್ಲಿ ನಿಂತು ಬಗೆಹರಿಸುತ್ತೇನೆ. ಅವಳಿಗೆ ಅನಿವಾರ್ಯ ಎನ್ನುವುದನ್ನು ಕ್ಷಣಾರ್ಧದಲ್ಲಿ ಕಣ್ಣಮುಂದೆ ಇಡುತ್ತೇನೆ.
88
ನನಗೆ ಯಾರನ್ನೂ ಅಲ್ಪಸ್ವಲ್ಪ ಪ್ರೀತಿಸಲು ಬರುವುದಿಲ್ಲ!
ಆದರೆ, ಅವಳ ಬೆಳವಣಿಗೆಯ ಈ ಸಮಯದಲ್ಲಿ ಅನಗತ್ಯ ಭಾರ ಕೊಟ್ಟು ಅವಳು ಕೊಳೆಯುವಂತೆ ಮಾಡುವುದು ನನಗೆ ಇಷ್ಟವಿಲ್ಲ. ಅವಳ ಯೋಗಕ್ಷೇಮ, ಭವಿಷ್ಯ ಅವಳ ಕೈನಲ್ಲೇ ಇರಲಿ. ಅದಕ್ಕೆ ಅಗತ್ಯವಿದ್ದರೆ ಸಪೋರ್ಟ್ ಮಾಡುವುದು ಕಂಡಿತ ನನ್ನ ಕರ್ತವ್ಯ. ಅದನ್ನು ನಾನೂ, ನಮ್ಮ ಮನೆಯ ಎಲ್ಲರೂ ಮಾಡುತ್ತೇವೆ..' ಎಂದಿದ್ದಾರೆ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ.