ಅಶ್ಲೀಲ ಸಿನಿಮಾ ಮಾಡಿ ಸಿಕ್ಕಿಬಿದ್ದ ಪತಿ: ಮಗನಿಗೆ ಗೂಗಲ್ ಮಾಡದಂತೆ ಹೇಳಿದ್ದ ಶಿಲ್ಪಾ ಶೆಟ್ಟಿ

First Published | Feb 29, 2024, 3:47 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರ ಅಶ್ಲೀಲ ಸಿನಿಮಾ ಮಾಡಿ ಹಲವು ದಿನ ಜೈಲಿನಲ್ಲಿ ಕಳೆದಿರುವುದು ಎಲ್ಲರಿಗೂ ಗೊತ್ತೆ ಇದೆ. 2021ರಲ್ಲಿ ಎರಡು ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ರಾಜ್‌ಕುಂದ್ರಾ  ಆ ದಿನಗಳ ಬಗ್ಗೆ ಮತ್ತೆ ರಾಜ್‌ಕುಂದ್ರಾ ಮಾತನಾಡಿದ್ದಾರೆ.

raj kundra

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರ ಅಶ್ಲೀಲ ಸಿನಿಮಾ ಮಾಡಿ ಹಲವು ದಿನ ಜೈಲಿನಲ್ಲಿ ಕಳೆದಿರುವುದು ಎಲ್ಲರಿಗೂ ಗೊತ್ತೆ ಇದೆ. 2021ರಲ್ಲಿ ಎರಡು ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ರಾಜ್‌ಕುಂದ್ರಾ ಪೋರ್ನ್ ಸ್ಟಾರ್ , ಪೋರ್ನ್ ಕಿಂಗ್ ಎಂಬೆಲ್ಲಾ ಟೀಕೆಗಳನ್ನು ಕೇಳಬೇಕಾಯಿತು, ಸಾಕಷ್ಟು ಅವಮಾನಗಳನ್ನು ಅನುಭವಿಸಬೇಕಾಯ್ತು. 

ಪತಿಯ ಈ ಕೃತ್ಯದಿಂದ ಸ್ವತಃ ಶಿಲ್ಪಾ ಶೆಟ್ಟಿ ಕೂಡ ಬಹಳ ಅವಮಾನ ಅನುಭವಿಸಿದ್ದರು. ಅವರ ದಾಂಪತ್ಯದ ಮೇಲೂ ಇದು ಬಹಳ ಪರಿಣಾಮ ಬೀರಿತ್ತು. ಜೈಲಿನಿಂದ ಬಂದ ನಂತರ ರಾಜ್‌ಕುಂದ್ರಾ ಸರಿ ಸುಮಾರು ವರ್ಷಗಳ ಕಾಲ ಮುಖ ಮುಚ್ಚಿಕೊಂಡೆ  ಓಡಾಡಿರುವುದು ಕೂಡ ಯಾರಿಗೂ ತಿಳಿಯದ ವಿಷ್ಯವೇನಲ್ಲ, ಹೀಗಿರುವಾಗ  ಆ ದಿನಗಳ ಬಗ್ಗೆ ಮತ್ತೆ ರಾಜ್‌ಕುಂದ್ರಾ ಮಾತನಾಡಿದ್ದಾರೆ.

Tap to resize


ಪತಿ ಪೋರ್ನ್ ಸಿನಿಮಾ ಮಾಡಿದ ಸಿಕ್ಕಿಬಿದ್ದ ವಿಚಾರ ಕೇಳಿ ಶಿಲ್ಪಾ ಶೆಟ್ಟಿ ಮೊದಲಿಗೆ ಆ ಬಗ್ಗೆ ನಕ್ಕು ಸುಮ್ಮನಾಗಿದ್ದರು ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಅಲ್ಲದೇ ತನ್ನ ಮಗನಿಗೆ ಅಪ್ಪನ ಹೆಸರನ್ನು ಗೂಗಲ್‌ನಲ್ಲಿ ಹುಡುಕದಿರುವಂತ ಹೇಳಿದ್ದರು ಎಂದು ರಾಜ್ ಕುಂದ್ರಾ ಹೇಳಿದ್ದಾರೆ.

ಆ ದಿನಗಳು ಭಯಾನಕವಾಗಿದ್ದವು, ನಾವು ಇಬ್ಬರು ಪರಸ್ಪರ ಚೆನ್ನಾಗಿ ಅರಿತುಕೊಂಡಿದ್ದೆವು.  ಈಗ ಯಾರಾದರು ಅವಳ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಎಷ್ಟು ನಂಬಬೇಕು ಎಂಬುದು ನನಗೆ ಗೊತ್ತು. ಅದೇ ರೀತಿ ನನ್ನ ಈ ವಿಚಾರದ ಬಗ್ಗೆ ಆಕೆಗೆ ಹೇಳಿದಾಗ ಆಕೆ ನಕ್ಕಳು ಅಲ್ಲದೇ ಈ ವಿಚಾರ ನಿಜವಲ್ಲ ಎಂದು ಹೇಳಿದಳು. 

ಆಕೆಗೆ ನಿಜ ಏನು ಎಂಬುದು ಗೊತ್ತಿತ್ತು, ಹೀಗಾಗಿ ಆಕೆ ಗೌರವದಿಂದಲೇ ಮೌನವಾಗಿದ್ದಳು.  ಅವಳು ಹೇಗೆ ಬದುಕಬೇಕೆಂದು ಸಾರ್ವಜನಿಕವಾದ ಗ್ರಹಿಕೆ ಇದೆ ಆದರೆ ಈ ಪ್ರಕರಣದಿಂದಾಗಿ ಆಕೆ  ಹಲವು ಟಿವಿಗಳಿಗೆ ಸಂಬಂಧಿಸಿದ ಕೆಲಸದ ಒಪ್ಪಂದಗಳನ್ನು ಕಳೆದುಕೊಳ್ಳಬೇಕಾಯಿತು. ಇದು ನ್ಯಾಯವಲ್ಲ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. 

ತಾನು ಜೈಲು ಸೇರಿದಾಗ  ಮಗನ ಪ್ರತಿಕ್ರಿಯೆ ಹೇಗಿತ್ತು ಎಂಬ ಬಗ್ಗೆಯೂ ಕುಂದ್ರಾ ಮಾತನಾಡಿದ್ದು, ನಾನು ಜೈಲು ಸೇರಿದಾಗ ಮಗ 10 ವರ್ಷದವನಾಗಿದ್ದ, ಆತ ತನ್ನ ತಾಯಿ ಬಳಿ ಏನಾಯಿತು ಎಂದು ಕೇಳಿದ್ದ.

ಈ ವೇಳೆ ಅಪ್ಪನ ಹೆಸರು ಹಾಕಿ ಗೂಗಲ್ ಮಾಡಬೇಡ ಎಂದು ಆಕೆ ಹೇಳಿದ್ದಳು ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಮಗ ಏನಾಯಿತು ಎಂದು ಕೇಳಿದಾಗ ಉತ್ತರಿಸಲು ನೂರು ಪ್ರಶ್ನೆಗಳಿವೆ, ಅವರು ಅದನ್ನೆಲ್ಲಾ ಮುಗಿಸಿ ವಾಪಸ್ ಬರುತ್ತಾರೆ ಎಂದಿದ್ದಳು.

ಇದರ ಜೊತೆ ಶಿಲ್ಪಾ, ತನ್ನ ಮಗ ಹೋಗುತ್ತಿದ್ದ ಶಾಲೆಯಲ್ಲಿ ಕೂಡ ಕೆಲವರೊಂದಿಗೆ ಮಾತನಾಡಿದ್ದಳು, ಕೇವಲ ದೇವರಿಗೆ ಮಾತ್ರ ಗೊತ್ತು, ಅವರೆಲ್ಲಾ ಅವರ ಮಕ್ಕಳಿಗೆ ಏನು ಹೇಳುತ್ತಿದ್ದರೋ ಎಂದು

ಆತನೋರ್ವ ಗಟ್ಟಿ ಹೃದಯದ ಮಗು, ಆತ ನಾನು ಜೈಲಿನಲ್ಲಿದ್ದಾಗ ಚಿತ್ರ ಬಿಡಿಸಿ ಪತ್ರ ಕಳುಹಿಸುತ್ತಿದ್ದ ಅಪ್ಪ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಬೇಗ ಮರಳಿ ಬನ್ನಿ, ನಿಮ್ಮ ಕೆಲಸ ಮುಗಿಸಿ ಎಂದು ಪತ್ರ ಬರೆದಿದ್ದ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. 

Latest Videos

click me!