ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ: ನಿಮಗೆ ವಯಸ್ಸೇ ಆಗೋಲ್ವಾ ಎಂದ ಫ್ಯಾನ್ಸ್‌!

Published : Feb 29, 2024, 12:30 AM IST

ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ತರಹೇವಾರಿ ಬೋಲ್ಡ್‌ ಫೋಟೋಗಳ ಮೂಲಕವೇ ಎದುರಾಗುವ ಈ ಚೆಲುವೆ, ಈಗ ಬಿಗಿ ಉಡುಪಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ.  

PREV
17
ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ: ನಿಮಗೆ ವಯಸ್ಸೇ ಆಗೋಲ್ವಾ ಎಂದ ಫ್ಯಾನ್ಸ್‌!

ಬಾಲಿವುಡ್‌ ನಟಿ ಮಲೈಕಾ ಅರೋರಾ ಅದೆಷ್ಟೋ ಮಂದಿಗೆ ಸ್ಪೂರ್ತಿ. 50ನೇ ವಯಸ್ಸಿನಲ್ಲೂ 20ರ ಹರೆಯದವರನ್ನೂ ನಾಚಿಸುವಂತಹ ಮೈಮಾಟ. ಫಿಟ್ನೆಸ್, ಯೋಗ ತಮ್ಮ ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿರುವ ನಟಿಗೆ ಅಭಿಮಾನಿಗಳೇನು ಕಮ್ಮಿಯಿಲ್ಲ.

27

ಮಲೈಕಾ ಅರೋರಾ ಕೆಲವು ಗ್ಲಾಮರಸ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಬ್ಲ್ಯಾಕ್‌ ಡ್ರೆಸ್‌ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದು ಮಲೈಕಾ ಅರೋರಾಗೆ ಹೊಸದೇನು ಆಗಿಲ್ಲದೆ ಇದ್ದರೂ, ಬೋಲ್ಡ್ ಹಾಗೂ ಗ್ಲಾಮರ್ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ. 
 

37

ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಮಲೈಕಾ ಅರೋರಾ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆದರೆ, ನಟನೆಯಲ್ಲಿ ಮೋಡಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸ್ಪೆಷಲ್ ಸಾಂಗ್‌ಗಳಿಗೆ, ಐಟಂ ಸಾಂಗ್‌ಗಳಿಗಷ್ಟೇ ಸೀಮಿತವಾಗಿ ಬಿಟ್ಟರು. 

47

ಮಲೈಕಾ ಅರೋರಾ ಸಿನಿಮಾಗಳಿಗಿಂತ ಹೆಚ್ಚಾಗಿ ವೈವಾಹಿಕ ಜೀವನದಿಂದಲೇ ಸುದ್ದಿಯಲ್ಲಿದ್ದರು. ಅರ್ಬಾಜ್ ಖಾನ್‌ಗೆ ವಿಚ್ಚೇದನ ಕೊಟ್ಟು, ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇದು ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

57

ಮಲೈಕಾ ಅರೋರಾ ಐಟಂ ಹಾಡುಗಳಿಗೆ ಫೇಮಸ್. ದಿಲ್ ಸೇ ಸಿನಿಮಾ 'ಚೈಯ್ಯ ಚೈಯ್ಯ..', ದಬಾಂಗ್ ಸಿನಿಮಾದ 'ಮುನ್ನಿ ಬದನಾಂ ಹುಯಿ..', 'ಅನಾರ್ಕಲಿ ಡಿಸ್ಕೋ ಚಾಲಿ..'ಯಂತಹ ಹಾಡುಗಳು ಫೇಮಸ್ ಆಗಿದ್ದವು. 

67

ನಟನೆಗಿಂತಲೂ ಮೊದಲು ರೂಪದರ್ಶಿಯಾಗಿ ಮಿಂಚಿದವರು ಮಲೈಕಾ. ನಟಿಯಾಗಿ ಅಲ್ಲದೆ ಮಲೈಕಾಗೆ ಭಾರೀ ಡಿಮ್ಯಾಂಡ್ ಇದ್ದಿದ್ದು ರೂಪದರ್ಶಿಯಾಗಿ. ಅವರು ಅವರ ಕಾಲದಲ್ಲಿ ಅತ್ಯಂತ ಬೇಡಿಕೆಯ ರೂಪದರ್ಶಿಯಾಗಿದ್ದರು.

77

ಮಲೈಕಾ ಅರೋರಾ ಈಗ 50 ವರ್ಷ ವಯಸ್ಸು. ಆದರೂ, 30ರ ಹರೆಯದಂತೆ ಕಾಣುತ್ತಾರೆ. ಇವರ ಸೌಂದರ್ಯ ಇತ್ತೀಚೆಗೆ ಬಂದ ನಟಿಯರನ್ನೇ ನಾಚಿಸುವಂತಿದೆ. ಮಲೈಕಾ ಫಿಟ್ನೆಸ್ ಸೀಕ್ರೆಟ್ ಬಗ್ಗೆ ಬಾಲಿವುಡ್ ಮಂದಿಗೂ ಕುತೂಹಲವಿದೆ.

Read more Photos on
click me!

Recommended Stories