ಇಂಡಿಯಾದಲ್ಲಿ ಈಗ ಟ್ರೆಂಡಿಂಗ್‌ನಲ್ಲಿರುವ ಡ್ಯಾನ್ಸಿಂಗ್ ಹೀರೋಗಳಲ್ಲಿ ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್, ಹೃತಿಕ್ ರೋಷನ್ ಮುಂಚೂಣಿಯಲ್ಲಿದ್ದಾರೆ. ಈ ಹೀರೋಗಳ ಡ್ಯಾನ್ಸ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರ ಡ್ಯಾನ್ಸಿಂಗ್ ಸ್ಪೀಡ್, ಗ್ರೇಸ್, ಸ್ಟೈಲ್‌ಗೆ ಫಿದಾ ಆಗ್ತಾರೆ ಫ್ಯಾನ್ಸ್. ಈ ಹೀರೋಗಳಲ್ಲಿ ಯಾವ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದ್ರೆ ಎಷ್ಟು ಅದ್ಭುತವಾಗಿರುತ್ತೆ ಅಂತ ಊಹಿಸಿಕೊಳ್ಳಿ. ಈಗಾಗಲೇ ಆರ್.ಆರ್.ಆರ್‌ನಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ಒಟ್ಟಿಗೆ 'ನಾಟು ನಾಟು' ಹಾಡಿಗೆ ಹಾಕಿದ್ದ ಸ್ಟೆಪ್ಸ್ ವಿಶ್ವದಾದ್ಯಂತ ಎಷ್ಟು ಫೇಮಸ್ ಆಗಿದೆ ಅಂತ ಎಲ್ಲರಿಗೂ ಗೊತ್ತು.