Hrithik Roshan Birthday : ನಟ ಹೃತಿಕ್ ರೋಷನ್ 52 ನೇ ವರ್ಷಕ್ಕೆ ಕಾಲಿಟ್ಟಿದ್ದು ತಮ್ಮ ಹುಟ್ಟುಹಬ್ಬವನ್ನು ನಟ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭರ್ಜರಿಯಾಗಿ ಆಚರಿಸಿಕೊಂಡರು. ಬರ್ತ್ ಡೇ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಸಬಾ ಆಜಾದ್ ಮತ್ತು ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಭಾಗಿಯಾಗಿದ್ದರು.
ಬಾಲಿವುಡ್ ಫಿಲಂ ಇಂಡಷ್ತ್ರಿಯ ಗ್ರೀಕ್ ಗಾಡ್ ಎಂದು ಕರೆಯಲ್ಪಡುವ ನಟ ಹೃತಿಕ್ ರೋಷನ್ ಜನವರಿ 11ರಂದು ತಮ್ಮ 52 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಹೃತಿಕ್ ವಿಹಾರ ನೌಕೆಯನ್ನು ಬುಕ್ ಮಾಡಿದ್ದಾರೆ.
28
ಬರ್ತ್ ಡೇ ಫೋಟೋಸ್ ವೈರಲ್
ಹೃತಿಕ್ ರೋಶನ್ ತಮ್ಮ ಹುಟ್ಟುಹಬ್ಬದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ಫೋಟೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ. ಹೃತಿಕ್ ರೋಷನ್ ಅವರ ಹುಟ್ಟುಹಬ್ಬವು ಬಹಳ ಅದ್ದೂರಿಯಾಗಿ ನಡೆದಿದ್ದು, ಹೃತಿಕ್ ಬಹಳ ಸಂತೋಷವಾಗಿರುವುದು ಕಂಡು ಬಂದಿದೆ.
38
ಗರ್ಲ್ ಫ್ರೆಂಡ್, ಮಾಜಿ ಪತ್ನಿ ಜೊತೆ ಸೆಲೆಬ್ರೇಶನ್
ಹೃತಿಕ್ ರೋಷನ್ ತಮ್ಮ 52 ನೇ ಹುಟ್ಟುಹಬ್ಬವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿರುವುದು ಫೋಟೋಗಳಲ್ಲಿ ಸ್ಪಷ್ಟವಾಗಿದೆ. ಹೃತಿಕ್ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರನ್ನು ಆಹ್ವಾನಿಸಿದರು, ಇವರ ಬರ್ತ್ ಡೇ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಸಬಾ ಆಜಾದ್ ಹಾಗೂ ಮಾಜಿ ಪತ್ನಿ ಸುಸೇಜ್ ಇಬ್ಬರೂ ಕಂಡು ಬಂದಿರೋದು ವಿಶೇಷವಾಗಿದೆ.
ಹೃತಿಕ್ ರೋಷನ್ ತಮ್ಮ ಪತ್ನಿ ಸುಸೇನ್ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದರೂ, ಇಬ್ಬರೂ ಇಂದಿಗೂ ಸ್ನೇಹಿತರಾಗಿ ಉಳಿದಿದ್ದಾರೆ. ಮಕ್ಕಳ ಜೊತೆ ಈ ಜೋಡಿ ಜೊತೆಯಾಗಿಯೇ ಸಮಯ ಕಳೆಯುತ್ತಾರೆ. ಹಾಗಾಗಿ ಹೃತಿಕ್ ತಮ್ಮ ಎಲ್ಲಾ ಪ್ರಮುಖ ಸಮಾರಂಭಗಳಲ್ಲೂ ಸುಸೇಜ್ ಅವರನ್ನು ಆಹ್ವಾನಿಸುತ್ತಾರೆ. ಹೃತಿಕ್ ರೋಷನ್ ಅವರ ಪತ್ನಿ ಸುಸೇನ್ ಖಾನ್ ಕೂಡ ಅವರ 52 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.
58
ಹೃತಿಕ್ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ ಸಬಾ ಆಜಾದ್
ಹೃತಿಕ್ ಮುಖದಲ್ಲಿ ನಗು ತರಿಸುವ ಅವಕಾಶವನ್ನು ಸಬಾ ಆಜಾದ್ ಎಂದಿಗೂ ಮಿಸ್ ಮಾಡೋದಿಲ್ಲ. ಹೃತಿಕ್ 52 ನೇ ಹುಟ್ಟುಹಬ್ಬವನ್ನು ಸಬಾ ವಿಶೇಷವಾಗಿಸಿದರು, ಮತ್ತು ಅವರಿಬ್ಬರೂ ಜೊತೆಯಾಗಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಕಾಣಬಹುದು.
68
ಕುಟುಂಬ ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿದ ಹೃತಿಕ್
ನಟ ಹೃತಿಕ್ ರೋಷನ್ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು. ಈ ಪೂರ್ತಿ ಕುಟುಂಬ ಸ್ನೇಹಿತರು ಜೊತೆಯಾಗಿ ಎಂಜಾಯ್ ಮಾಡುತ್ತಿರುವುದನ್ನು ಹಾಗೂ ಹೃತಿಕ್ ರೋಷನ್ ಮುಖದಲ್ಲಿ ಸಂಭ್ರಮವನ್ನು ಸಹ ಕಾಣಬಹುದು.
78
ಹೃತಿಕ್ ಜೊತೆ ಬಿಕಿನಿ ಪೋಸ್ ಕೊಟ್ಟ ಸಬಾ ಆಜಾದ್
ಹೃತಿಕ್ ಹುಟ್ಟುಹಬ್ಬದಂದು, ಸಬಾ ಬಿಕಿನಿಯಲ್ಲಿ ಪೋಸ್ ನೀಡಿದ್ದು, ಈ ಫೋಟೊವನ್ನು ಸಹ ಹೃತಿಕ್ ರೋಶನ್ ಶೇರ್ ಮಾಡಿದ್ದಾರೆ. ಗರ್ಲ್ ಫ್ರೆಂಡ್ ಮತ್ತು ಮಾಜಿ ಪತ್ನಿ ಇಬ್ಬರ ಮಧ್ಯ ಬರ್ತ್ ಡೇ ಪಾರ್ಟಿ ಎಂಜಾಯ್ ಮಾಡುತ್ತಿರುವ ಹೃತಿಕ್ ನೋಡಿ ಅಭಿಮಾನಿಗಳು ಷಭಾಸ್, ಧಮ್ ಅಂದ್ರೆ ಹೀಗಿರಬೇಕು ಎನ್ನುತ್ತಿದ್ದಾರೆ.
88
ಥ್ಯಾಂಕ್ಯೂ ಹೇಳಿದ ಹೃತಿಕ್
ನನ್ನ ಕುಟುಂಬಕ್ಕೆ ಧನ್ಯವಾದಗಳು. ನನ್ನ ಸ್ನೇಹಿತರು, ನನ್ನ ಅಭಿಮಾನಿಗಳು.. ನನಗೆ ಸಂದೇಶ ಕಳುಹಿಸಲು, ಬರೆಯಲು, ನನ್ನ ಬಗ್ಗೆ ಪೋಸ್ಟ್ ಮಾಡಲು, ಕರೆ ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗದ ಎಲ್ಲರಿಗೂ, ನಿನ್ನೆ ತಮ್ಮ ಪ್ರಾರ್ಥನೆಯಲ್ಲಿ ನನಗಾಗಿ ಒಳ್ಳೆಯ ಮಾತುಗಳನ್ನು ಹೇಳಿದ ಎಲ್ಲರಿಗೂ, ಅಥವಾ ನನ್ನ ಬಗ್ಗೆ ಕೊಂಚ ಯೋಚನೆ ಎಲ್ಲರಿಗೂ, ಒಟ್ಟಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದಿದ್ದಾರೆ ಹೃತಿಕ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.