ತಮ್ಮ ಉದ್ಯೋಗಿಗಳಿಗೆ ಸ್ವತಃ ಊಟ ಬಡಿಸಿದ ಸ್ಟಾರ್‌ ದಂಪತಿ Naga Chaitanya, Sobhita Dhulipala

Published : Jan 12, 2026, 03:01 PM IST

Actor Naga Chaitanya News: ಅನ್ನಪೂರ್ಣ ಸ್ಟುಡಿಯೋ ಉದ್ಯೋಗಿಗಳಿಗೆ ನಟ ನಾಗ ಚೈತನ್ಯ ಮತ್ತು ಶೋಭಿತಾ ಸ್ವತಃ ಊಟ ಬಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲ ಸಮಯ ಅವರೊಂದಿಗೆ ಖುಷಿಯಿಂದ ಕಾಲ ಕಳೆದರು. ಅವರ ಕುಟುಂಬಗಳೊಂದಿಗೆ ಸಂಭ್ರಮಿಸಿದರು. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

PREV
14
ಸಂಕ್ರಾಂತಿ ಸಂಭ್ರಮ

ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಸಂಕ್ರಾಂತಿ ಸಂಭ್ರಮ. ನಾಗ ಚೈತನ್ಯ, ಶೋಭಿತಾ ಉದ್ಯೋಗಿಗಳೊಂದಿಗೆ ಹಬ್ಬ ಆಚರಿಸಿದರು. ಅವರೊಂದಿಗೆ ಬೆರೆತು ಮಾತನಾಡಿ, ಫೋಟೋ ತೆಗೆಸಿಕೊಂಡರು. ಸ್ಟುಡಿಯೋದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

24
ಕುಟುಂಬಕ್ಕೂ ಆಹ್ವಾನ ಇತ್ತು

ಉದ್ಯೋಗಿಗಳಿಗೆ ಮಾತ್ರವಲ್ಲ, ಅವರ ಕುಟುಂಬಕ್ಕೂ ಆಹ್ವಾನ ನೀಡಲಾಗಿತ್ತು. ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಸಿಬ್ಬಂದಿಗೆ ಊಟ ಬಡಿಸಿ ಮನಗೆದ್ದರು. ಸಂಕ್ರಾಂತಿಯ ವಿಶೇಷ ಖಾದ್ಯಗಳೊಂದಿಗೆ ಸಾಂಪ್ರದಾಯಿಕ ಭೋಜನವನ್ನು ಏರ್ಪಡಿಸಲಾಗಿತ್ತು.

34
ಹಬ್ಬದ ಶುಭಾಶಯ ತಿಳಿಸಿದ್ರು

ಊಟದ ನಂತರ ಉದ್ಯೋಗಿಗಳೊಂದಿಗೆ ಫೋಟೋ ತೆಗೆಸಿಕೊಂಡರು. ನಾಗ ಚೈತನ್ಯ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದರು. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರತಿ ವರ್ಷ ಅಕ್ಕಿನೇನಿ ಕುಟುಂಬದಿಂದ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

44
ಮೊದಲ ಬಾರಿಗೆ ಶೋಭಿತಾ ಭಾಗಿ

ಸಮಂತಾ ಜೊತೆಗಿನ ಸಂಬಂಧ ಮುರಿದ ನಂತರ ನಾಗ ಚೈತನ್ಯ, ಶೋಭಿತಾರನ್ನು ಮದುವೆಯಾದರು. ಚೈತನ್ಯ ಸದ್ಯ 'ತಂಡೇಲ್' ಯಶಸ್ಸಿನ ನಂತರ 'ವೃಷಕರ್ಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೋಭಿತಾ ಕೂಡ ಕೆಲವು ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories