ದಿಲ್ ಮೂವಿಯಲ್ಲಿ ನಟಿಸಿದ ಈ ಐವರು ಸತ್ತಿದ್ದು ಹೇಗೆ?

First Published Oct 11, 2024, 12:33 PM IST

ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಚಿತ್ರದಲ್ಲಿ ನಟಿಸಿದ್ದಕ್ಕೇ ಸೌಂದರ್ಯ, ವಿಷ್ಣುವರ್ಧನ್ ಅಕಾಲಿಕ ಮರಣಕ್ಕೆ ತುತ್ತಾದರು ಎಂಬ ನಂಬಿಕೆ ಇದೆ. ಅದೇ ರೀತಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದವರಿಗೂ ಒಂದಲ್ಲೊಂದು ತೊಂದರೆಗಳಾಗುತ್ತಿವೆ. ಅದು ಕಾಕತಾಳೀಯವೋ ಏನೋ ಗೊತ್ತಿಲ್ಲ. ಆದರೆ, ಕೆಲವು ಚಿತ್ರಗಳಲ್ಲಿ ನಟಿಸಿದರೆ ಜೀವನ ಏನೇನೋ ಆಗಿ ಬಿಡುತ್ತೆ. ಹಾಗೆಯೇ ನಿತಿನ್ ನಟನೆಯ ತೆಲಗು ಚಿತ್ರ ದಿಲ್‌ನಲ್ಲಿ ನಟಿಸಿದ ಐವರೂ ಅಸುನೀಗಿದ್ದಾರೆ. ಅವರಿಗೆ ಆಗಿದ್ದೇನು? ಏನಿದು ಸುದ್ದಿ? ಐವರು ಅದ್ಭುತ ನಟರ ಬಗ್ಗೆ ಇಲ್ಲಿವೆ ಮಾಹಿತಿ. 

ಟಾಲಿವುಡ್‌ ನಟ ನಿತಿನ್ 'ಜಯಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಆದರೆ 'ದಿಲ್' ಚಿತ್ರದಿಂದ ಅವರಿಗೆ ಟಾಲಿವುಡ್‌ನಲ್ಲಿ ಮಾಸ್ ಇಮೇಜ್ ಬಂತು. ಈ ಚಿತ್ರದಿಂದಲೇ ನಿರ್ಮಾಪಕರಾಗಿ ದಿಲ್ ರಾಜು ಸ್ಟಾರ್‌ಡಮ್ ಪಡೆದರು. ಆದರೆ 'ದಿಲ್' ಚಿತ್ರದ ಬಗ್ಗೆ ಈಗ ಈ ಒಂದು ವಿಷಯ ವೈರಲ್ ಆಗುತ್ತಿದೆ. 'ದಿಲ್' ಚಿತ್ರದಲ್ಲಿ ನಟಿಸಿದ ಈ  5 ನಟರು ಈಗ ಬದುಕಿಲ್ಲ. ಅವರು ಅಸು ನೀಗಿದ್ದು ಹೇಗೆ? 

'ದಿಲ್' ಚಿತ್ರದಲ್ಲಿ ನಿತಿನ್ ತಂದೆಯಾಗಿ ನಟಿಸಿದವರು ಚಲಪತಿ ರಾವ್. ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. 78 ವರ್ಷದ ಚಲಪತಿ ರಾವ್ 24 ಡಿಸೆಂಬರ್ 2022 ರಂದು ಮನೆಯಲ್ಲಿ ಊಟ ಮಾಡುವಾಗಲೇ ಕೊನೆಯುಸಿರೆಳೆದರು.

Latest Videos


ವೇಣು ಮಾಧವ್

'ದಿಲ್' ಚಿತ್ರದಲ್ಲಿ ಮರೆಯಲಾಗದ ಪಾತ್ರ ಮಾಡಿದವರು ಹಾಸ್ಯನಟ ವೇಣುಮಾಧವ್. ವೇಣುಮಾಧವ್ 49ನೇ ವಯಸ್ಸಿನಲ್ಲಿಯೇ 2019ರ ಸೆಪ್ಟೆಂಬರ್‌ನಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ನಿಧನರಾದರು. 

ಆಹುತಿ ಪ್ರಸಾದ್

ದಿಲ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದವರು ಆಹುತಿ ಪ್ರಸಾದ್. ಇವರು 60 ವರ್ಷಕ್ಕೂ ಮುನ್ನವೇ ನಿಧನರಾದರು. ಕ್ಯಾನ್ಸರ್‌ನಿಂದ ಅವರು 2015ರ ಜನವರಿ 4ರಂದು 57ನೇ ವಯಸ್ಸಿನಲ್ಲಿ ವಿಧಿವಶರಾದರು.

'ದಿಲ್' ಚಿತ್ರದಲ್ಲಿ ನಟಿಸಿದ ಆಹುತಿ ಪ್ರಸಾದ್ ನಿಧನರಾದ 30 ದಿನಗಳ ನಂತರ, ಈ ಚಿತ್ರದಲ್ಲಿ ಉಪನ್ಯಾಸಕನ ಪಾತ್ರದಲ್ಲಿ ನಟಿಸಿದ್ದ ಎಂ.ಎಸ್. ನಾರಾಯಣ್ ಕೂಡ ನಿಧನರಾದರು. 2015ರ ಜನವರಿ 23ರಂದು 63ನೇ ವಯಸ್ಸಿನಲ್ಲಿ ಎಂ.ಎಸ್. ನಾರಾಯಣ ಅನಾರೋಗ್ಯದಿಂದ ನಿಧನರಾದರು. 

ಈ ಚಿತ್ರದಲ್ಲಿ ನಾಯಕಿ ತಾತನ ಪಾತ್ರದಲ್ಲಿ ನಟಿಸಿದ್ದ ರಾಜನ್ ಪಿ. ದೇವ್ ನೆನಪಿದೆಯೇ? ಅವರು ಕೂಡ ತುಂಬಾ ಕಡಿಮೆ ವಯಸ್ಸಲ್ಲೇ ಅಸು ನೀಗಿದರು. ರಾಜನ್ ಪಿ. ದೇವ್ ಮಲಯಾಳಿ ನಟರಾಗಿದ್ದು, 58ನೇ ವಯಸ್ಸಿನಲ್ಲಿ 2009ರಲ್ಲಿ ಅನಾರೋಗ್ಯದ ನಿಧನರಾದರು.

click me!