ಸದ್ಯದ ನ್ಯಾಷನಲ್ ಕ್ರಶ್ ಆಗಿರೋ ತೃಪ್ತಿ ದಿಮ್ರಿ ಮನೆ ಹೇಗಿದೆ ನೋಡಿ!?

First Published | Dec 18, 2023, 3:44 PM IST

ಆನಿಮಲ್ ಖ್ಯಾತಿಯ ಜೋಯಾ ಅಲಿಯಾಸ್ ತ್ರಿಪ್ತಿ ದಿಮ್ರಿ ನಿಜ ಜೀವನದಲ್ಲಿ ಲಕ್ಸುರಿಯಸ್ ಲೈಫ್, ಐಷರಾಮಿ ಮನೆಯಲ್ಲಿ ವಾಸಿಸುತ್ತಾರೆ ಗೊತ್ತಾ?  ತ್ರಿಪ್ತಿ ದಿಮ್ರಿ ಮನೆಯ ಸುಂದರ ಒಳಾಂಗಳ ನೋಟ ನಿಮಗಾಗಿ. 
 

ಈ ವರ್ಷ ಭಾರಿ ಸದ್ದು ಮಾಡಿದ ಅನಿಮಲ್ ಚಿತ್ರದ ಎರಡನೇ ನಾಯಕಿ ಮತ್ತು ಸದ್ಯ ನ್ಯಾಷನಲ್ ಕ್ರಶ್ (National crush)  ಆಗಿರುವ ತೃಪ್ತಿ ದಿಮ್ರಿ ಇತ್ತೀಚಿನ ದಿನಗಳಲ್ಲಿ ಹಾಟ್ ಟಾಪಿಕ್ ಆಗಿ ಉಳಿದಿದ್ದಾರೆ. ಚಿತ್ರದಲ್ಲಿ ನಟಿಯ ಪಾತ್ರ ಮತ್ತು ಧೈರ್ಯವನ್ನು ಸಿನಿ ರಸಿಕರು ತುಂಬಾ ಇಷ್ಟಪಟ್ಟಿದ್ದಾರೆ. ಚಿತ್ರದ ನಂತರ, ತೃಪ್ತಿಗೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂಬ ಟ್ಯಾಗ್ ನೀಡಿದ್ದಾರೆ. ಅಷ್ಟೇ ಅಲ್ಲ ನಟಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಟ್ರೆಂಡಿಂಗ್ ನಲ್ಲಿದ್ದಾರೆ. 

ಅನಿಮಲ್ ಚಿತ್ರದಲ್ಲಿ ಜೋಯಾ ಪಾತ್ರದಲ್ಲಿ ಅವರ ಅದ್ಭುತ ನಟನೆ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಚಿತ್ರದ ನಂತರ, ಜನರು ತೃಪ್ತಿ ದಿಮ್ರಿ (Tripti Dimri), ಯಾರು, ಎಲ್ಲಿಂದ ಬಂದಿದ್ದಾಳೆ, ತೃಪ್ತಿ ಏನು ಮಾಡುತ್ತಾಳೆ, ಅವರ ಕುಟುಂಬದ ಹಿನ್ನೆಲೆ ಏನು ಇತ್ಯಾದಿಗಳ ಬಗ್ಗೆ ತಿಳಿಯಲು ಗೂಗಲ್ ಸರ್ಚ್ ಮಾಡುತ್ತಿರೋದು ಹೆಚ್ಚಾಗಿದೆ. ನೀವು ಆಕೆಯ ಮನೆಯ ಬಗ್ಗೆ ತಿಳಿಯಬೇಕು ಅಂದ್ರೆ ಇಲ್ಲಿದೆ ನಿಮಗಾಗಿ ಕೆಲವೊಂದು ತೃಪ್ತಿ ಮನೆಯ ಒಳಾಂಗಣ ವಿನ್ಯಾಸ (Interior Decoration) ಚಿತ್ರಗಳು. ಲಕ್ಸುರಿಯಸ್ ಲೈಫ್ ಜೀವಿಸುತ್ತಿದ್ದಾರೆ ತೃಪ್ತಿ.

Tap to resize

ಮಲಗುವ ಕೋಣೆಯು ಹೋಟೆಲ್ ಕೋಣೆಗಿಂತ ಕಡಿಮೆಯಿಲ್ಲ.
ಮಲಗುವ ಕೋಣೆಯು (bed room)  ಮನೆಯ ಸಂಪೂರ್ಣ ಚಿತ್ರ ಆಗೋದಿಲ್ಲ ನಿಜ, ಆದರೆ ಯಾವುದೇ ಚಿತ್ರದಲ್ಲಿ ಅವರ ಮಲಗುವ ಕೋಣೆ ಎಷ್ಟು ಸುಂದರವಾಗಿದೆ ಎಂದು ನೀವು ನೋಡಬಹುದು. ಇದು ಮನೆಯ ಲಕ್ಸುರಿಯನ್ನು ಸಹ ತಿಳಿಸುತ್ತೆ. ಮಲಗುವ ಕೋಣೆಯ ಒಳಾಂಗಣ, ಪೀಠೋಪಕರಣ, ಎಲ್ಲವೂ ತುಂಬಾ ಐಷಾರಾಮಿಯಾಗಿ ಕಾಣುತ್ತದೆ. 

ತೃಪ್ತಿಯ ಹಾಸಿಗೆ ಕೂಡ ತುಂಬಾ ಚೆನ್ನಾಗಿ ಕಾಣುತ್ತದೆ, ನೋಡಿದರೆ, ಇವ ಬೆಡ್ ರೂಮ್ ಸ್ವೀಟ್ ಮತ್ತು ಸಿಂಪಲ್ ಆಗಿದೆ. ಆಲಿವ್ ಗ್ರೀನ್ ಬಣ್ಣದ ಗೋಡೆಗಳು, ಲಾರ್ಜ್ ಸೈಜ್ ಕಿಟಕಿಗಳು, ಪಾಸಿಟಿವಿಟಿಯನ್ನು ತೋರಿಸುತ್ತಿದೆ. ಬೆಡ್ ಪಕ್ಕ ಕಿಟಕಿಯಿದ್ದು, ಹೊರಗಡೆ ಬಾಲ್ಕನಿಯಲ್ಲಿ ಸುಂದರವಾದ ಗಿಡಗಳನ್ನು ಕಾಣಬಹುದು. 

ಪುಸ್ತಕಗಳನ್ನು ಓದುವ ಹವ್ಯಾಸ
ತ್ರಿಪ್ತಿ ದಿಮ್ರಿ ಅವರ ಇನ್ಸ್ಟಾಗ್ರಾಮ್ ಸ್ಕ್ಯಾನ್ ಮಾಡಿದ ನಂತರ, ನಟಿಯ ಮನೆಯಲ್ಲಿ ಪುಸ್ತಕಗಳ ಕಪಾಟುಗಳನ್ನು ಬೇಕಾದಷ್ಟಿವೆ ಅನ್ನೋದನ್ನು ನಾವು ಕಾಣಬಹುದು. ತ್ರಿಪ್ತಿಯ ಮನೆಯಲ್ಲಿ ಅನೇಕ ಪುಸ್ತಕಗಳು ಕಂಡುಬಂದಿವೆ, ತೃಪ್ತಿಗೆ ಪುಸ್ತಕಗಳೆಂದರೆ ಎಷ್ಟು ಇಷ್ಟ ಎಂದು ಊಹಿಸಬಹುದು. ನಟಿಯ ಹಾಲ್, ಲಿವಿಂಗ್ ರೂಮ್ ಎಲ್ಲಾ ಕಡೆ ಪುಟ್ಟ ಲೈಬ್ರರಿ ಮಾಡಲಾಗಿದೆ. 

ಸ್ವಿಮ್ಮಿಂಗ್ ಪೂಲ್ ಇರೋ ಜಾಗ ತುಂಬಾ ಚೆನ್ನಾಗಿದೆ. 
ತ್ರಿಪ್ತಿ ದಿಮ್ರಿ ಅವರ ಮನೆಯಲ್ಲಿ ಪೂಲ್ (Swimming pool) ಇದೆ, ಅದರ ಸುತ್ತಲೂ ಸಾಕಷ್ಟು ಮರಗಳು ಮತ್ತು ಸಸ್ಯಗಳು ಮತ್ತು ಉದ್ಯಾನಗಳನ್ನು ಕಾಣಬಹುದು. ಇದು ತುಂಬಾ ಐಷಾರಾಮಿ ಲುಕ್ ನೀಡುತ್ತಿದ್ದು, ಇಲ್ಲೆ ನಟಿ ತಮ್ಮ ಯೋಗ (Yoga), ಧ್ಯಾನ (Meditation), ವರ್ಕೌಟ್ (Workout) ಮಾಡುತ್ತಾರೆ. 
 

ಹಾಲ್ ತುಂಬಾನೆ ಟ್ರೆಂಡಿ
ತ್ರಿಪ್ತಿ ಅವರ ಮನೆಯ ಮುಖ್ಯ ಭಾಗವಾದ ಹಾಲ್ ಬಗ್ಗೆ ಮಾತನಾಡುವುದಾದರೆ, ಇದು ತುಂಬಾ ವಿಶೇಷ, ಸರಳ ಮತ್ತು ಸೌಂದರ್ಯದಿಂದ ಕೂಡಿದೆ. ಅಲಂಕಾರ, ವರ್ಣಚಿತ್ರಗಳು ಮತ್ತು ಪುಸ್ತಕಗಳು ಇವೆಲ್ಲವೂ ಸೇರಿ ಆಸ್ತೆಟಿಕ್ ಲುಕ್ ನೀಡುತ್ತದೆ.  

Latest Videos

click me!