' ಕಾಟೇರ' ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಎದುರಾಯ್ತು ಸಂಕಷ್ಟ; ನಟ ದರ್ಶನ್ ವಿರುದ್ಧ ಸಿಎಂ, ರಾಜ್ಯಪಾಲರಿಗೆ ದೂರು!

First Published | Dec 18, 2023, 2:25 PM IST

ದೇಶಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56 ನೇ ಸಿನಿಮಾ ಮೊನ್ನೆಯಷ್ಟ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನಲ್ಲಿ ದರ್ಶನ್ ರ ಡೈಲಾಗ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಆದರೆ ಇದೇ ಡೈಲಾಗ್ ವನ್ಯಜೀವಿ ಸಂರಕ್ಷಣ ಒಕ್ಕೂಟದ ಕೆಂಗೆಣ್ಣಿಗೆ ಗುರಿಯಾಗಿದೆ. ಯಾಕೆ ಅಂತೀರಾ? ಮುಂದೆ ನೋಡಿ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆರಾಧನಾ ಜೋಡಿಯಾಗಿ ನಟಿಸಿರುವ'ಕಾಟೇರ' ಚಿತ್ರದ ಟ್ರೇಲರ್ ಮೊನ್ನೆಯಷ್ಟೇ  (ಡಿ.16) ಬಿಡುಗಡೆಯಾಗಿದೆ. ದಚ್ಚು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದು.ಆದರೆ ಇದೀಗ ಮತ್ತೊಂದು ಸಂಕಷ್ಟಕ್ಕೆ ಎದುರಾಗಿದೆ. ಸಿನಿಮಾದ ಕೆಲವು ಡೈಲಾಗ್‌ಗಳು ವಿವಾದವೆಬ್ಬಿಸಿವೆ. ಅದರಲ್ಲೂ ನಾಗಹಾವಿನ ಕುರಿತು ಡೈಲಾಗ್ ಇದೀಗ ಕಾಟೇರ ಸಿನಿಮಾಗೆ ಸಂಕಷ್ಟ ತಂದೊಡ್ಡಿದೆ.

ಕಾಟೇರ ಟ್ರೇಲರ್ ಬಿಡುಗಡೆಗಾಗಿ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಬಿಡುಗಡೆಯಾದ ದಿನವೇ ಮಿಲಿಯನ್ ವಿವ್ಸ್ ಕ್ರಾಸ್ ಮಾಡಿದ್ದ ಟ್ರೇಲರ್. ಟ್ರೇಲರ್ ನಲ್ಲಿ ಎಂದಿನಂತೆ ಮಾಸ್ ಡೈಲಾಗ್ ಗಳಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು ಆದರೆ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ದರ್ಶನ್ ಮೇಲೆ ಗರಂ ಆಗಿದೆ ಯಾಕೆ ಅಂತೀರಾ?

Tap to resize

"ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಟ್ರೇಲರ್ ನಲ್ಲಿ ಕೇಳಿ ಬಂದ ಡೈಲಾಗ್. ಹಾವಿನ ಬಗ್ಗೆ ಹೇಳಿರೋ ಡೈಲಾಗ್ ಇದೀಗ ದರ್ಶನ್‌ಗೆ ಸಂಕಷ್ಟ ತಂದೊಡ್ಡಿದೆ. ದರ್ಶನ್ ಜೀವನ ಶೈಲಿ, ಡೈಲಾಗ್ ಫಾಲೋ ಮಾಡೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದರ್ಶನ ಆಡುವ ಒಂದೊಂದು ಮಾತು ಅಭಿಮಾನಿಗಳು ಅನುಕರಣೆ ಮಾಡ್ತಾರೆ ಅಂತಾದ್ರಲ್ಲಿ ಹಾವಿನ ಬಗ್ಗೆ ಈ ರೀತಿ ಡೈಲಾಗ್ ಹೇಳಿರೋದು ಎಷ್ಟು ಸರಿ ಅಂತಿರೋ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ

ದರ್ಶನ್‌ ಅಭಿನಯದ 56ನೇ ಸಿನಿಮಾವೇ ಕಾಟೇರ ಅದ್ಧೂರಿಯಾಗಿ ಮೂಡಿಬಂದಿದೆ. ಹೇಳಿಕೇಳಿ ಮಣ್ಣಿನ ಕತೆ ಹೇಳು ಸಿನಿಮಾ ಹೊಸ ಪ್ರಯೋಗಾತ್ಮಕ ಸಿನಿಮಾ ಇದು. ಎಲ್ಲ ಅಂದುಕೊಂಡಂಗಾಯ್ತು ಅಂದುಕೊಳ್ಳುವಾಗಲೇ ಸಂಕಷ್ಟ.

ಹಾವಿನ ಕುರಿತು ದರ್ಶನ ಹೇಳಿಕೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅಳಿವನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ದರ್ಶನ ಹೇಳಿರುವ ಡೈಲಾಗ್ ಕಾನೂನಿಗೆ ವಿರುದ್ಧವಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದ ಎಂದು ಆಕ್ರೋಶ. ಸಿಎಂ, ರಾಜ್ಯಪಾಲರಿಗೆ ದೂರು ನೀಡಿರುವ ಒಕ್ಕೂಟ. 
 

ವನ್ಯಜೀವಿ ಸಂರಕ್ಷಣಾ ನಿಯಮಕ್ಕೆ ವಿರುದ್ಧವಾಗಿ ಸಂಭಾಷಣಣೆ ಬರೆದಿರೋದರ ವಿರುದ್ಧ ಸಿಎಂಗೆ ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ ಡೈಲಾಗ್ ಗಳಿಗೆ ಕತ್ತರಿ ಹಾಕಬಹುದು ಎಂಬ ಆತಂಕ ಅಭಿಮಾನಿಗಳದ್ದು. ಕಾಟೇರ ಸಿನಿಮಾದಲ್ಲಿ ಇನ್ನೂ ಇಂತಹ ಜೀವ ವಿರೋಧಿ ಡೈಲಾಗ್ ಇರಬಹುದು ಪರಿಶೀಲಿಸುವಂತೆ ಒಕ್ಕೂಟ ಮನವಿ ಮಾಡಿದೆ. ಒಟ್ಟಿನಲ್ಲಿ ದರ್ಶನ್ ಅಭಿನಯದ ಕಾಟೇರ ಸಿನಿಮಾ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಲೇ ಇದೆ. ಎಲ್ಲ ಸಮಸ್ಯೆಗಳನ್ನು ಎದುರಿಸಿ ಬಿಡುಗಡೆಯಾಗಲಿ ಎಂಬುದೇ ಅಭಿಮಾನಿಗಳ ಆಶಯ

Latest Videos

click me!